ಬೆಂಗಳೂರು: ರಾಜ್ಯ ಸರ್ಕಾರವು ತನ್ನ ನೌಕರರ ಗುರುತಿನ ಚೀಟಿಯ ಕೊರಳುದಾರದ (ಟ್ಯಾಗ್) ವಿನ್ಯಾಸವನ್ನು ಬದಲಿಸಿದ್ದು, ಕೆಂಪು–ಹಳದಿ ಬಣ್ಣಗಳನ್ನು ಒಳಗೊಂಡಿರುವ ನೂತನ ಕೊರಳುದಾರವನ್ನು ಧರಿಸಬೇಕು ಎಂದು ಸೂಚಿಸಿದೆ.
‘ನಮ್ಮ ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣ ಮಾಡಿ 50 ವರ್ಷಗಳಾಗಿವೆ. ಇದಕ್ಕಾಗಿ ನಡೆಸುತ್ತಿರುವ ‘ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ’ ಅಭಿಯಾನದಡಿ ನಾಡ ಧ್ವಜದ ಬಣ್ಣಗಳನ್ನು ಒಳಗೊಂಡ ಟ್ಯಾಗ್ ಅನ್ನು ವಿನ್ಯಾಸ ಮಾಡಲಾಗಿದೆ. ಸರ್ಕಾರದ ಎಲ್ಲಾ ನೌಕರರು ಕಡ್ಡಾಯವಾಗಿ ಇದನ್ನು ಧರಿಸಬೇಕು’ ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಸುತ್ತೋಲೆ ಹೊರಡಿಸಿದೆ.
‘ರಾಜ್ಯ ಸರ್ಕಾರದ ಎಲ್ಲ ಇಲಾಖೆಗಳು, ನಿಗಮ ಮಂಡಳಿಗಳು, ನಿರ್ದೇಶನಾಲಯಗಳು, ಆಯುಕ್ತಾಲಯಗಳು ಮತ್ತು ಸರ್ಕಾರಿ ಸ್ವಾಮ್ಯದ ಕಚೇರಿಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ನೂತನ ಟ್ಯಾಗ್ ಅನ್ನು ಧರಿಸಬೇಕು. ತಮ್ಮ ಸಿಬ್ಬಂದಿಗೆ ಈ ಟ್ಯಾಗ್ ಅನ್ನು ಒದಗಿಸಲು ಸಂಬಂಧಿತ ಇಲಾಖೆಗಳು ಕ್ರಮವಹಿಸಬೇಕು’ ಎಂದು ಸುತ್ತೋಲೆ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.