ADVERTISEMENT

ಪ್ರಜಾವಾಣಿ– ರಸಪ್ರಶ್ನೆ ಚಾಂಪಿಯನ್‌ಶಿಪ್‌ಗೆ ನೋಂದಣಿ ಆರಂಭ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2024, 23:30 IST
Last Updated 2 ಅಕ್ಟೋಬರ್ 2024, 23:30 IST
   

ಬೆಂಗಳೂರು: ‘ಪ್ರಜಾವಾಣಿ– ರಸಪ್ರಶ್ನೆ ಚಾಂಪಿಯನ್‌ಶಿಪ್‌’ನ ಪ್ರಕ್ರಿಯೆ ಆರಂಭವಾಗಿದ್ದು, ಅಕ್ಟೋಬರ್‌ 3ರಿಂದ ವಿದ್ಯಾರ್ಥಿಗಳು ನೋಂದಣಿ ಮಾಡಿಕೊಳ್ಳಬಹುದು.

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಪ್ರಗತಿದಾಯಕ ಕಲಿಕೆಯ ಅಗತ್ಯವಿದ್ದು, ಆರೋಗ್ಯಕರ ಸ್ಪರ್ಧೆಗಳು ಯುವ ಪ್ರತಿಭೆಗಳ ಜ್ಞಾನಭಂಡಾರವನ್ನು ಮತ್ತಷ್ಟು ವೃದ್ಧಿಸುತ್ತವೆ. ಈ ಉದ್ದೇಶದಿಂದ ‘ಪ್ರಜಾವಾಣಿ’ ರಸಪ್ರಶ್ನೆ ಸ್ಪರ್ಧೆಯನ್ನು ನಡೆಸುತ್ತಿದೆ.

‘ಪ್ರಜಾವಾಣಿ– ರಸಪ್ರಶ್ನೆ ಚಾಂಪಿಯನ್‌ಶಿಪ್‌’ನಲ್ಲಿ 7ರಿಂದ 10ನೇ ತರಗತಿಯ ವಿದ್ಯಾರ್ಥಿಗಳು ಭಾಗವಹಿಸಬಹುದಾಗಿದೆ. ಸ್ಪರ್ಧೆಯು ಆರು ವಲಯಗಳಲ್ಲಿ ಮೊದಲ ಹಂತದಲ್ಲಿ ನಡೆಯಲಿದೆ. ಮೈಸೂರು, ಧಾರವಾಡ, ಬಾಗಲಕೋಟೆ, ಕಲಬುರಗಿ, ದಾವಣಗೆರೆ, ಬೆಂಗಳೂರು ವಲಯಗಳಲ್ಲಿ ಗೆಲುವು ಸಾಧಿಸಿದವರು ರಾಜ್ಯಮಟ್ಟದಲ್ಲಿ ಸ್ಪರ್ಧೆಗೆ ಪಾಲ್ಗೊಳ್ಳುವ ಅರ್ಹತೆ ಪಡೆಯಲಿದ್ದಾರೆ.

ADVERTISEMENT

ವಲಯಗಳಲ್ಲಿ ವಿಜೇತರಾದ ಎಲ್ಲರಿಗೂ ಒಂದು ದಿನದ ಆವಿಷ್ಕಾರ ಕಾರ್ಯಾಗಾರವನ್ನು ಆಯೋಜಿಸಲಾಗುತ್ತದೆ. ಈ ಕಾರ್ಯಾಗಾರದಲ್ಲಿ ಸಮೃದ್ಧ ಕಲಿಕೆಯ ಅನುಭವ ಪಡೆಯಬಹುದು. ವಿದ್ಯಾರ್ಥಿಗಳಲ್ಲಿನ ಸೃಜನಶೀಲತೆ ಹೊರಹೊಮ್ಮಲು ಈ ಆವಿಷ್ಕಾರ ಕಾರ್ಯಾಗಾರವು ಹೊಸವೇದಿಕೆಯನ್ನು ಕಲ್ಪಿಸಲಿದೆ.

ಪ್ರಕ್ರಿಯೆ:

ವಿದ್ಯಾರ್ಥಿಗಳು ಶಾಲೆಗಳ ಮೂಲಕ ತಂಡವಾಗಿ ನೋಂದಾಯಿಸಿಕೊಳ್ಳಬೇಕು. ತಂಡಗಳಿಗೆ ಪ್ರಾಥಮಿಕ ಹಂತದ ಪರೀಕ್ಷೆ ನಡೆಸಲಾಗುತ್ತದೆ. ಪ್ರತಿ ವಲಯದಲ್ಲಿ 6 ಅಗ್ರ ತಂಡಗಳು ವಲಯ ಮಟ್ಟದ ಅಂತಿಮ ಹಂತಕ್ಕೆ ತಲುಪುತ್ತವೆ. ಆರು ವಲಯಗಳ ವಿಜೇತರು ರಾಜ್ಯಮಟ್ಟದ ಫಿನಾಲೆಗೆ ಅರ್ಹತೆ ಪಡೆಯುತ್ತಾರೆ. ಅಂತಿಮ ಹಂತದ ಎಲ್ಲ ಸ್ಪರ್ಧಿಗಳಿಗೆ ಆವಿಷ್ಕಾರ ಕಾರ್ಯಾಗಾರ ನಡೆಸಲಾಗುವುದು. ಬೆಂಗಳೂರಿನಲ್ಲಿ ರಾಜ್ಯಮಟ್ಟದ ಫಿನಾಲೆ ನಡೆಯಲಿದೆ. 

ಕ್ಯೂಆರ್‌ ಕೋಡ್‌ ಸ್ಕ್ಯಾನ್‌ ಮಾಡಿ ‘ಪ್ರಜಾವಾಣಿ– ರಸಪ್ರಶ್ನೆ ಚಾಂಪಿಯನ್‌ಶಿಪ್‌’ಗೆ ನೋಂದಾಯಿಸಿಕೊಳ್ಳಬಹುದು.

PV_Quiz_Registration

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.