ADVERTISEMENT

ರೇಣುಕಸ್ವಾಮಿ ಕೊಲೆ ಪ್ರಕರಣ | ಇದುವರೆಗೂ ಪೊಲೀಸ್‌ ತನಿಖೆ ಹೇಗಿತ್ತು?

​ಪ್ರಜಾವಾಣಿ ವಾರ್ತೆ
Published 19 ಜೂನ್ 2024, 16:38 IST
Last Updated 19 ಜೂನ್ 2024, 16:38 IST
   

ಬೆಂಗಳೂರು: ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಗಳ ಡಿಎನ್‌ಎ ಪರೀಕ್ಷೆಗೆ ತನಿಖಾಧಿಕಾರಿಗಳು ಮುಂದಾಗಿದ್ದು, ದರ್ಶನ್‌ ಹಾಗೂ ಅವರ ಆಪ್ತೆ ಪವಿತ್ರಾಗೌಡ ಸೇರಿ 9 ಮಂದಿಯ ರಕ್ತ, ಕೂದಲು ಮಾದರಿಯನ್ನು ಬುಧವಾರ ಸಂಗ್ರಹಿಸಿದರು.

ವಿಕ್ಟೋರಿಯಾ ಆಸ್ಪತ್ರೆಗೆ ಆರೋಪಿಗಳನ್ನು ಕರೆದೊಯ್ದು ಮಾದರಿ ಸಂಗ್ರಹಿಸಲಾಗಿದ್ದು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ (ಎಫ್‌ಎಸ್‌ಎಲ್‌) ಕಳುಹಿಸಲಾಗುವುದು ಎಂದು ಮೂಲಗಳು ತಿಳಿಸಿವೆ. ‌

ಇದುವರೆಗೂ ಪೊಲೀಸ್‌ ತನಿಖೆ ಹೇಗಿತ್ತು?

ADVERTISEMENT
  • ದರ್ಶನ್ ಪವಿತ್ರಾಗೌಡ ಸೇರಿ ಪ್ರಮುಖ ಆರೋಪಿಗಳ ಸಮ್ಮುಖದಲ್ಲಿ ಪಟ್ಟಣಗೆರೆ ಶೆಡ್​​ನಲ್ಲಿ ಸ್ಥಳ ಮಹಜರು

  • ಗಿರಿನಗರದಲ್ಲಿರುವ ಪ್ರದೂಷ್‌ ಮನೆಯಲ್ಲಿ ಹಣ ಜಪ್ತಿ

  • ಶವ ಎಸೆದಿದ್ದ ಸತ್ವ ಅನುಗ್ರಹ ಅಪಾರ್ಟ್​​​​ಮೆಂಟ್ ಬಳಿ ಸ್ಥಳ ಮಹಜರು

  • ಆರ್.ಆರ್.ನಗರದ ಐಡಿಯಲ್ ಹೋಮ್ಸ್​​​ ಖಾಲಿ ಪ್ರದೇಶದಲ್ಲಿ ರಾಘವೇಂದ್ರ ಎಸೆದಿದ್ದ ಬಟ್ಟೆ ಸಂಗ್ರಹ

  • ಚಿತ್ರದುರ್ಗದಿಂದ ಅಪಹರಣಕ್ಕೆ ಬಳಸಿದ್ದ ಕಾರು ಪರಿಶೀಲನೆ ಕಾರಿನೊಳಗೆ ರಕ್ತ ಕೂದಲು ಪತ್ತೆ

  • ಸುಮನಹಳ್ಳಿಯ ರಾಜಕಾಲುವೆಯಲ್ಲಿ ಮೊಬೈಲ್​ಗಾಗಿ ಹುಡುಕಾಟ ಪತ್ತೆಯಾಗದ ಮೊಬೈಲ್‌

  • ಆರ್.ಆರ್. ನಗರದ ದರ್ಶನ್ ನಿವಾಸದಲ್ಲಿ ಕೃತ್ಯದ ದಿನ ದರ್ಶನ್ ಧರಿಸಿದ್ದ ಬಟ್ಟೆ ಶೂ ಜಪ್ತಿ

  • ಪವಿತ್ರಾಗೌಡ ಕರೆದೊಯ್ದು ಆರ್.ಆರ್.ನಗರದ ನಿವಾಸದಲ್ಲಿ ಪರಿಶೀಲನೆ

  • ಆರೋಪಿ ವಿನಯ್​ ಕರೆದೊಯ್ದು ಸ್ಟೋನಿ ಬ್ರೂಕ್​ ರೆಸ್ಟೋಬಾರ್​ನಲ್ಲಿ ಮಹಜರು

  • ಹಲವು ಸ್ಥಳದಲ್ಲಿ ಸಿಸಿ ಟಿವಿ ಕ್ಯಾಮೆರಾ ದೃಶ್ಯಾವಳಿ ಸಿಡಿಆರ್‌ ಜಪ್ತಿ

  • ಕಾರು ಬೈಕ್‌ ಹಾಗೂ ಆಟೋಗಳ ಜಪ್ತಿ

ಪೊಲೀಸ್ ಕಸ್ಟಡಿ ಅಂತ್ಯ 
ಆರೋಪಿಗಳ ಪೊಲೀಸ್‌ ಕಸ್ಟಡಿ ಗುರುವಾರಕ್ಕೆ ಅಂತ್ಯ ಆಗಲಿದೆ. ಎಲ್ಲ ಆರೋಪಿಗಳನ್ನು ಗುರುವಾರ ನ್ಯಾಯಾಲಯಕ್ಕೆ ಹಾಜರು ಪಡಿಸುವ ಸಾಧ್ಯತೆಯಿದೆ. ‘ತನಿಖೆ ಸ್ಥಳ ಮಹಜರು ಆರೋಪಿಗಳ ವಿಚಾರಣೆ ಸಾಕ್ಷ್ಯಾಧಾರ ಸಂಗ್ರಹ ಬಹುತೇಕ ಮುಕ್ತಾಯವಾಗಿದೆ. ಆರೋಪಿಗಳನ್ನು ಮತ್ತೆ ಪೊಲೀಸ್ ಕಸ್ಟಡಿಗೆ ಕೇಳುವ ಸಾಧ್ಯತೆ ತೀರ ಕಡಿಮೆ. ನ್ಯಾಯಾಲಯ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಗುವುದು’ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.