ADVERTISEMENT

ಮೀನುಗಾರರ ಪತ್ತೆಗೆ ಪ್ರಧಾನಿಗೆ ಮನವಿ

ದೆಹಲಿಗೆ ತೆರಳಿದ ಮೀನುಗಾರರ ನಿಯೋಗ: ಇಂದು ಭೇಟಿ ಸಾಧ್ಯತೆ

​ಪ್ರಜಾವಾಣಿ ವಾರ್ತೆ
Published 7 ಜನವರಿ 2019, 13:51 IST
Last Updated 7 ಜನವರಿ 2019, 13:51 IST
ನಾಪತ್ತೆಯಾಗಿರುವ ಸುವರ್ಣ ತ್ರಿಭುಜ ಬೋಟ್‌ (ಸಂಗ್ರಹ ಚಿತ್ರ)
ನಾಪತ್ತೆಯಾಗಿರುವ ಸುವರ್ಣ ತ್ರಿಭುಜ ಬೋಟ್‌ (ಸಂಗ್ರಹ ಚಿತ್ರ)   

ಉಡುಪಿ: ಮಲ್ಪೆಯಿಂದ ಮೀನುಗಾರಿಕೆಗೆ ತೆರಳಿ ನಾಪತ್ತೆಯಾಗಿರುವ ಬೋಟ್‌ ಪತ್ತೆಗೆ ತುರ್ತು ಕ್ರಮ ತೆಗೆದುಕೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಸಲ್ಲಿಸಲು ಮಲ್ಪೆ ಮೀನುಗಾರರ ನಿಯೋಗ ದೆಹಲಿಗೆ ತೆರಳಿದೆ.

ಮಂಗಳವಾರ ಪ್ರಧಾನಿ ಭೇಟಿಗೆ ಅವಕಾಶ ಸಿಗಬಹುದು ಎಂಬ ನಿರೀಕ್ಷೆ ಇದೆ. ಭೇಟಿವೇಳೆ ಅತ್ಯಾಧುನಿಕ ತಂತ್ರಜ್ಞಾನ ಬಳಸಿಕೊಂಡು ಬೋಟ್‌ ಪತ್ತೆ ಮಾಡುವಂತೆ ಪ್ರಧಾನಿ ಬಳಿ ಮನವಿ ಮಾಡಲಾಗುವುದು. ನಾಪತ್ತೆಯಾದ ಮೀನುಗಾರ ಕುಟುಂಬಗಳ ಸಂಕಷ್ಟವನ್ನು ವಿವರಿಸಲಾಗುವುದು ಎಂದು ಮಲ್ಪೆ ಮೀನುಗಾರ ಸಂಘದ ಅಧ್ಯಕ್ಷ ಸತೀಶ್ ಕುಂದರ್ ತಿಳಿಸಿದರು.

ಇದೇವೇಳೆ ಮೀನುಗಾರಿಕಾ ಬೋಟ್‌ಗಳಿಗೆ ಪೂರೈಕೆಯಾಗುವ ಡಿಸೇಲ್‌ ಮೇಲಿನ ರೋಡ್ ಸೆಸ್‌ ವಿನಾಯಿತಿ ನೀಡುವಂತೆ, ಮೀನುಗಾರಿಕಾ ಸಲಕರಣೆಗಳ ಮೇಲಿನ ಜಿಎಸ್‌ಟಿ ಶೂನ್ಯಕ್ಕೆ ಇಳಿಸಬೇಕು. ಹಿಂದಿನಂತೆ ಸಬ್ಸಿಡಿ ದರದಲ್ಲಿ ದೋಣಿಗಳಿಗೆ ಸೀಮೆಎಣ್ಣೆ ವಿತರಿಸಬೇಕು ಎಂಬ ಮನವಿಯನ್ನು ಪ್ರಧಾನಿಗೆ ಸಲ್ಲಿಸಲಾಗುವುದು ಎಂದರು.

ADVERTISEMENT

ಮತ್ಸ್ಯೋದ್ಯಮ ಸಂಕಷ್ಟದಲ್ಲಿದೆ. ಈ ನಿಟ್ಟಿನಲ್ಲಿ ಮೀನುಗಾರರ ಹಿತ ಕಾಯಲು ರೈಲ್ವೆ ಸಚಿವಾಲಯದಂತೆ, ಮೀನುಗಾರಿಕಾ ಸಚಿವಾಲಯವನ್ನು ರಚಿಸುವಂತೆ ಎಂದು ಒತ್ತಾಯಿಸಲಾಗುವುದು ಎಂದರು.

ಅಖಿಲ ಭಾರತ ಮೀನುಗಾರರ ಸಂಘದ ಮುಖಂಡರು, ಶಾಸಕ ರಘುಪತಿ ಭಟ್‌, ಸಂಸದರು ಹಾಗೂ ಮೀನುಗಾರ ಮುಖಂಡರಾದದಯಾನಂದ ಸುವರ್ಣ, ಯಶಪಾಲ್ ಸುವರ್ಣ, ಕರುಣಾಕರ ಸಾಲಿಯಾನ್‌ ನಿಯೋಗದಲ್ಲಿದ್ದಾರೆ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.