ಬೆಂಗಳೂರು: ರಾಕೆಟ್ ಉಡಾವಣೆಯ ‘ಪುನರ್ ಬಳಕೆಯ ಉಡಾವಣಾ ವಾಹನ’ಗಳ (ಆರ್‌ಎಲ್‌ವಿ–ಎಲ್‌ಇಎಕ್ಸ್) ಲ್ಯಾಂಡಿಂಗ್ ಪರೀಕ್ಷೆಗಾಗಿ ಚಿತ್ರದುರ್ಗದ ರಕ್ಷಣಾ ಇಲಾಖೆಯ ಏರೋನಾಟಿಕಲ್ ಪರೀಕ್ಷಾ ವಲಯದಲ್ಲಿ ಪ್ರಥಮ ರನ್‌ವೇಯನ್ನು ಇಸ್ರೊ ಸ್ಥಾಪಿಸಿದ್ದು, ಲ್ಯಾಂಡಿಂಗ್ ಪರೀಕ್ಷೆ ನಡೆಸಲು ಸಿದ್ಧತೆ ಮಾಡಿಕೊಂಡಿದೆ.
‘ಲ್ಯಾಂಡಿಂಗ್‌ಗೆ ಸೂಕ್ತ ಹವಾಮಾನ ಇರಬೇಕು. ಪೂರಕ ವಾತಾವರಣ ನೋಡಿಕೊಂಡು ಪರೀಕ್ಷೆ ನಡೆಸಲಾಗುವುದು’ ಎಂದು ಇಸ್ರೊ ಅಧ್ಯಕ್ಷ ಎಸ್.ಸೋಮನಾಥ್ ತಿಳಿಸಿದ್ದಾರೆ.
ಪರೀಕ್ಷೆಯ ವೇಳೆಯಲ್ಲಿ ಪುನರ್ ಬಳಕೆಯ ಉಡಾವಣಾ ವಾಹನದ ಕವಚವನ್ನು ಹೆಲಿ ಕಾಪ್ಟರ್ ಮೂಲಕ 3 ರಿಂದ 5 ಕಿ.ಮೀ ಎತ್ತರ ದಿಂದ ಸಮತಲ ವೇಗದಲ್ಲಿ ರನ್‌ವೇಗೆ ಇಳಿ ಬಿಡಲಾಗುವುದು. ಹೀಗೆ ಇಳಿ ಬಿಟ್ಟ ಬಳಿಕ ಕವಚವು ರನ್‌ವೇಯಲ್ಲಿ ಜಾರಿಕೊಂಡು ಚಲಿಸಲಿದೆ ಎಂದು ಇಸ್ರೊ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.