ADVERTISEMENT

ಪಶ್ಚಿಮವಾಹಿನಿ ಯೋಜನೆ ₹4,099 ಕೋಟಿ ‘ಮಾಸ್ಟರ್‌ ಪ್ಲಾನ್‌’

ಶಿವಮೊಗ್ಗ ಜಿಲ್ಲೆಯ ಶರಾವತಿ, ಉಪನದಿಗಳ ಸೇರ್ಪಡೆ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2022, 22:00 IST
Last Updated 28 ಫೆಬ್ರುವರಿ 2022, 22:00 IST
   

ಬೆಂಗಳೂರು: ‘ಪಶ್ಚಿಮವಾಹಿನಿ ಯೋಜನೆ’ಗೆ ದಕ್ಷಿಣ ಕನ್ನಡ, ಉಡುಪಿ, ಕೊಡಗು ಉತ್ತರ ಕನ್ನಡ ಅಲ್ಲದೆ ಶಿವಮೊಗ್ಗ ಜಿಲ್ಲೆಯನ್ನೂ ಸೇರಿಸಿ ಒಟ್ಟು ₹4,099 ಕೋಟಿ ಮೊತ್ತದ ಮಾಸ್ಟರ್‌ ಪ್ಲಾನ್‌ ತಯಾರಿಸಲಾಗಿದೆ.

ಇದಕ್ಕಾಗಿ ಒಟ್ಟು 1,519 ಕಿಂಡಿ ಅಣೆಕಟ್ಟೆ, ಸೇತುವೆ ಸಹಿತ ಬ್ಯಾರೇಜ್‌ ಮತ್ತು ಉಪ್ಪುನೀರು ತಡೆ ಅಣೆಕಟ್ಟೆ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಸಣ್ಣ ನೀರಾವರಿ ಇಲಾಖೆ ನಿರ್ಧರಿಸಿದ್ದು, ಮುಂದಿನ ಐದು ವರ್ಷಗಳಲ್ಲಿ ಹಂತ ಹಂತವಾಗಿ ಕಾರ್ಯಗತಗೊಳಿಸಲಾಗುವುದು. ಶಿವಮೊಗ್ಗ ಜಿಲ್ಲೆಯ ಶರಾವತಿ ಮತ್ತು ಇದರ ಉಪನದಿಗಳ ಪ್ರದೇಶವನ್ನು ಈ ಯೋಜನೆಗೆ ಹೊಸದಾಗಿ ಸೇರ್ಪಡೆ ಮಾಡಲಾಗಿದೆ.

ಯೋಜನೆಗೆ ಸೇರಿರುವ ಜಿಲ್ಲೆ, ನದಿಗಳ ಪ್ರದೇಶ

ADVERTISEMENT

l ದಕ್ಷಿಣ ಕನ್ನಡ: ನೇತ್ರಾವತಿ
(ಉಪನದಿಗಳು ಕುಮಾರಧಾರಾ, ಗುಂಡ್ಯ ಹೊಳೆ, ಅಡ್ಡಹೊಳೆ, ಮಣಿನಾಲ್ಕೂರು, ಗೌರಿಹೊಳೆ, ಕಟ್ಟತ್ತಿಲ), ಶಾಂಭವಿ (ಉಪನದಿಗಳು ಪಾಲಡ್ಕ ಹೊಳೆ, ಕಾಂತಾವರ ಹೊಳೆ), ನಂದಿನಿ (ಉಪನದಿಗಳು ಸೂರಿಂಜೆ ಹೊಳೆ, ಕೊಂಡೆಮೂಲ ತೋಡು), ಫಲ್ಗುಣಿ (ಗುರುಪುರ)(ಉಪನದಿಗಳು ವೇಣೂರು ಹೊಳೆ, ಮೂಡುಕೋಣಾಜೆ ಹೊಳೆ), ತಲಪಾಡಿ ಹೊಳೆ, ಶಿರಿಯಾ, ಆನೆಕಲ್ಲು, ಪಯಸ್ವಿನಿ.

l ಉಡುಪಿ: ಸಂಕದಗುಂಡಿ ಹೊಳೆ(ಉಪನದಿಗಳು ಜಡ್ಕಲ್‌ ಹೊಳೆ, ಹಾಲಾಡಿ ಹೊಳೆ), ಎಡಮಾವಿನ ಹೊಳೆ, ಬೈಂದೂರು ಹೊಳೆ, ವಾರಾಹಿ (ಉಪನದಿಗಳು ಹಾಲಾಡಿ ಹೊಳೆ, ಬೇಳೂರು ಸಣ್ಣ ಹೊಳೆ, ವಂಡ್ಸೆ ಹೊಳೆ), ಚಕ್ರಾ, ಕೊಲ್ಲೂರು, ಸೀತಾ, ಸ್ವರ್ಣ ನದಿ (ಉಪನದಿಗಳು ಸಾಣೂರು ಹೊಳೆ, ಬಲ್ಲೆಬೈಲು ಹೊಳೆ), ಉದ್ಯಾವರ (ಉಪನದಿಗಳು ಹಿರೆಬೆಟ್ಟು ಹೊಳೆ, ಬಂಕೇರುಕಟ್ಟ ಹೊಳೆ), ಮಡಿಸಾಲು, ಶಾಂಭವಿ(ಉಪನದಿಗಳು ಎಣ್ಣೆಹೊಳೆ, ತೀರ್ಥಟ್ಟುಹೊಳೆ, ನಡ್ಸಾಲು ಹೊಳೆ), ಪಾಂಗಳ ಹೊಳೆ.

l ಕೊಡಗು: ಕುಮಾರಧಾರಾ, ಪಯಸ್ವಿನಿ

l ಶಿವಮೊಗ್ಗ: ಶರಾವತಿ

l ಉತ್ತರಕನ್ನಡ:ಕಾಳಿ, ಗಂಗಾವಳಿ, ಅಘನಾಶಿನಿ, ವರದಾ.

ಯಾವ ಜಿಲ್ಲೆಗೆ ಎಷ್ಟು ಯೋಜನೆಗಳು

ಜಿಲ್ಲೆ;ಕಾಮಗಾರಿ;ಅಂದಾಜು ಮೊತ್ತ(₹ಕೋಟಿಗಳಲ್ಲಿ)

ದಕ್ಷಿಣ ಕನ್ನಡ;446;1,511

ಉಡುಪಿ;424;1,025

ಕೊಡಗು;12;41

ಉತ್ತರ ಕನ್ನಡ;466;1,409.25

ಶಿವಮೊಗ್ಗ;171;112.75

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.