ಬೆಂಗಳೂರು: ಬಿಜೆಪಿ ಸರ್ಕಾರ ತನ್ನ ಶೇ 40ರಷ್ಟು ಕಮಿಷನ್ ಆರೋಪ ಮುಚ್ಚಿಹಾಕಲು ಉರಿಗೌಡ–ನಂಜೇಗೌಡ ಪಾತ್ರಗಳನ್ನು ಮುನ್ನೆಲೆಗೆ ತಂದಿದೆ ಎಂದು ಕಾಂಗ್ರೆಸ್ ಶಾಸಕ ರಿಜ್ವಾನ್ ಅರ್ಷದ್ ಟೀಕಿಸಿದರು.
‘ವಿಧಾನಸಭೆ ಚುನಾವಣೆಯಲ್ಲಿ 40ಕ್ಕಿಂತ ಹೆಚ್ಚು ಸೀಟು ಗೆಲ್ಲಲು ಸಾಧ್ಯವಿಲ್ಲ ಎಂಬುದು ಸ್ಪಷ್ಟವಾದ ಬಳಿಕ ಬಿಜೆಪಿಯವರಿಗೆ ಹುಚ್ಚು ಹಿಡಿದಿದೆ. ಗಾಂಧೀಜಿಯನ್ನು ಕೊಂದಿದ್ದು ಗೋಡ್ಸೆ ಅಲ್ಲ, ಗಾಂಧೀಜಿಯೇ ಗೋಡ್ಸೆಯನ್ನು ಕೊಂದರು ಎಂದು ಅವರು ಹೇಳಿದರೂ ಆಶ್ಚರ್ಯಪಡಬೇಕಿಲ್ಲ’ ಎಂದು ಹೇಳಿದರು.
‘250 ವರ್ಷಗಳ ಹಿಂದೆ ಸತ್ತಿರುವ ಟಿಪ್ಪು ಹೆಸರಿನಲ್ಲಿ ಇಂದಿಗೂ ರಾಜಕಾರಣ ಮಾಡಲಾಗುತ್ತಿದೆ. ನಾಲ್ಕು ವರ್ಷದಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳೇನು, ರೈತರಿಗೆ, ಬಡವರಿಗೆ, ಯುವಕರಿಗೆ ನೀಡಿದ ಕೊಡುಗೆ ಏನು, ಎಷ್ಟು ಉದ್ಯೋಗ ಸೃಷ್ಟಿಯಾಗಿದೆ ಎಂಬುದನ್ನು ಹೇಳಲಿ’ ಎಂದು ಪ್ರಶ್ನಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.