ಬೆಂಗಳೂರು: ನಂದಿನಿ ಪ್ರೋಬಯೊಟಿಕ್ ಮೊಸರಿನ ಪ್ಯಾಕೆಟ್ ಮೇಲೆ ‘ದಹಿ’ ಎಂದು ಮುದ್ರಿಸಿದ್ದರ ಬಗ್ಗೆ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ ಮೊಸರಿನ ಪ್ಯಾಕೆಟ್ ಮೇಲೆ ದಹಿ ಎಂಬ ಹಿಂದಿ ಪದ ಕಡ್ಡಾಯವಾಗಿ ಬಳಸುವಂತೆ ಹೊರಡಿಸಿರುವ ಾದೆಶಪತ್ರವನ್ನೂ ಕನ್ನಡಪರ ಹೋರಾಟಗಾರ ರೂಪೇಶ್ ರಾಜಣ್ಣ ಹಂಚಿಕೊಂಡಿದ್ದಾರೆ.
ಇಂದು ಕೆಎಂಎಫ್ ಮುಖ್ಯಕಚೇರಿಗೆ ಭೇಟಿ ಕೊಟ್ಟಾಗ ತಿಳಿದ ಸತ್ಯ. ಕಡ್ಡಾಯವಾಗಿ ದಹಿ ಅಂತ ಬಳಸಲೇಬೇಕು ಎಂಬ ಆದೇಶ ಮಾಡಿದ್ದಾರೆ. ಇಂದು ದಹಿ, ನಾಳೆ ನಂದಿನಿ ದೂದ್, ನಂದಿನಿ ಪಾನಿ ಅಂದುಕೊಂಡು ಎಲ್ಲದಕ್ಕೂ ಹಿಂದಿ ಕಡ್ಡಾಯ ಮಾಡಿ ಕಡೆಗೆ ಕನ್ನಡವನ್ನೇ ಇಲ್ಲವಾಗಿಸೋ ಹುನ್ನಾರ ನಡೆದಿದೆ ಎಂದು ಅವರು ಆರೋಪಿಸಿದ್ದಾರೆ.
ಮೆಟ್ರೋ ಹಿಂದಿಹೇರಿಕೆ ತಡೆದ ಹಾಗೆ ನಂದಿನಿ ಮೇಲಿನ ಹಿಂದಿಹೇರಿಕೆ ತಡೆಯಬೇಕಿದೆ ಎಂದೂ ಅವರು ಒತ್ತಾಯಿಸಿದ್ದಾರೆ.
ಇದೇವೇಳೆ, ಯಶವಂತಪುರದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಸ್ಥಳೀಯ ಕನ್ನಡಿಗರು ‘ಗುಜರಾತಿಗಳಿಂದ ಕನ್ನಡಿಗರ KMF ಉಳಿಸಿ’ಎಂದು ಮನವಿ ಮಾಡಿ ಹಾರ ಹಾಕಿದ್ದಾರೆ. ನಂದಿನಿ ಉಳಿಸಿ ಅಭಿಯಾನಕ್ಕೆ ಬೆಂಬಲಿಸಿದ ಕನ್ನಡಿಗರಿಗೆ ಅಭಿನಂದನೆಗಳು. ಕನ್ನಡ ಜಾಗೃತಿ,ಈ ನೆಲದ ಅಸ್ಮಿತೆಯ ಜಾಗೃತಿ ಯಾವ ರೂಪದಲ್ಲಿದ್ದರೂ ಅದು ಈ ನಾಡಿಗೆ ಒಳಿತು ಎಂದು ಬರೆದುಕೊಮಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.