ಬೆಂಗಳೂರು: ಅಪೆಕ್ಸ್, ಡಿಸಿಸಿ ಬ್ಯಾಂಕ್ ಹಾಗೂ ಪ್ಯಾಕ್ಸ್ ಗಳಲ್ಲಿ ಸಾಲ ಪಡೆದಿದ್ದ, ಕೊರೋನಾದಿಂದ ಮೃತಪಟ್ಟಿರುವ 10,187 ರೈತರ ₹ 79.47 ಕೋಟಿ ಸಾಲ ಮನ್ನಾ ಮಾಡಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಚಿಂತನೆ ನಡೆಸಿದ್ದು, ಇನ್ನು 3–4 ದಿನಗಳಲ್ಲಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಹೇಳಿದರು.
ಈ ಸಂಬಂಧ ಅಪೆಕ್ಸ್ ಬ್ಯಾಂಕ್ ಆಡಳಿತ ಮಂಡಳಿ ಸಭೆ ಸೇರಿ ತೀರ್ಮಾನವನ್ನು ತೆಗೆದುಕೊಳ್ಳಲಿದ್ದೇವೆ. ಕೋವಿಡ್ ಸಂಕಷ್ಟ ಕಾಲದಲ್ಲಿ ರೈತರ ಸಹಾಯಕ್ಕೆ ಬರಲು ಮುಖ್ಯಮಂತ್ರಿಗಳು ಹಾಗೂ ನಮ್ಮ ಸರ್ಕಾರವು ಸದಾ ಬದ್ಧವಾಗಿದೆ. ಈ ನಿಟ್ಟಿನಲ್ಲಿ ರೈತರಿಗೆ ಇನ್ನು ಮುಂದೂ ಸಹ ಸಾಲ ಸೌಲಭ್ಯಗಳು ಸುಲಭವಾಗಿ ಸಿಗುವಂತೆ ಕ್ರಮವನ್ನು ಕೈಗೊಳ್ಳಲಾಗುತ್ತಿದೆ ಎಂದು ಸುದ್ದಿಗಾರರಿಗೆ ತಿಳಿಸಿದರು.
ಕಳೆದ ವರ್ಷ ಅಂದರೆ, 2020-21ನೇ ಸಾಲಿನಲ್ಲಿ 24.50 ಲಕ್ಷ ರೈತರಿಗೆ₹ 15,300 ಕೋಟಿ ಅಲ್ಪಾವಧಿ, ಮಧ್ಯಮಾವಧಿ ಬೆಳೆ ಸಾಲ ನೀಡುವ ಗುರಿಯನ್ನು ಹೊಂದಲಾಗಿತ್ತು. ಈ ನಿಟ್ಟಿನಲ್ಲಿ ಗುರಿ ಮೀರಿ ಸಾಧನೆ ಮಾಡಿದ್ದು, 25.67 ಲಕ್ಷ ರೈತರಿಗೆ ₹ 17,108 ಕೋಟಿ ಸಾಲ ನೀಡುವ ಮೂಲಕ ಶೇ.114 ಗುರಿ ಸಾಧನೆಯನ್ನು ಮಾಡಲಾಗಿತ್ತು. ಈಗ 25.67 ಲಕ್ಷ ರೈತರಲ್ಲಿ ಕೋವಿಡ್ ನಿಂದ ಮೃತಪಟ್ಟಿರುವ 10,187 ರೈತರ ₹79.47 ಕೋಟಿ ಸಾಲ ಮನ್ನಾ ಮಾಡುವ ಸಂಬಂಧ ಮುಖ್ಯಮಂತ್ರಿಗಳು ಚಿಂತನೆಯನ್ನು ನಡೆಸಿದ್ದಾರೆ ಎಂದು ಹೇಳಿದರು.
ಯಾವ ಜಿಲ್ಲೆಯ ಡಿಸಿಸಿ ಬ್ಯಾಂಕ್ ಗಳಲ್ಲಿ ಎಷ್ಟು ರೈತರು, ಎಷ್ಟು ಸಾಲ ಮನ್ನಾ ಎಂಬ ಮಾಹಿತಿ ಈ ಕೆಳಗಿನಂತಿದೆ.
ಜಿಲ್ಲೆ;ರೈತರ ಸಂಖ್ಯೆ;ಸಾಲ ಮನ್ನಾ ಪ್ರಮಾಣ
ಬಾಗಲಕೋಟೆ; 672;₹ 5,42,26,261
ಬೆಳಗಾವಿ; 3334; ₹23,84,51,700
ಬಳ್ಳಾರಿ;357; ₹ 3,65,98,411
ಬೆಂಗಳೂರು;381;₹ 2,36,72,500
ಬೀದರ್;824;₹5,47,68,271
ಚಿಕ್ಕಮಗಳೂರು;113;₹2,03,86,020
ಚಿತ್ರದುರ್ಗ; 156;₹1,63,71,000
ದಾವಣಗೆರೆ;402;₹2,66,22,071
ಹಾಸನ; 454;₹2,86,42,000
ಕಲಬುರಗಿ; 224 ;₹ 8,73,8,776
ಉತ್ತರ ಕನ್ನಡ; 186 ;₹1,70,98,364
ಧಾರವಾಡ; 376; ₹ 2,07,10,455
ಕೊಡಗು;113;₹1,82,99,040
ಕೋಲಾರ; 147; ₹2,54,09,639
ಮಂಡ್ಯ; 410;₹ 2,73,28,268
ಮೈಸೂರು;281;₹3,13,99,000
ರಾಯಚೂರು; 237;₹1,92,03,700
ಶಿವಮೊಗ್ಗ;307; ₹3,27,01,000
ದಕ್ಷಿಣ ಕನ್ನಡ;152; ₹ 2,40,63,450
ತುಮಕೂರು;307; ₹ 1,87,22,000
ವಿಜಯಪುರ; 754;₹ 5,13,40,000
ಹೀಗೆ ಒಟ್ಟು 10,187 ರೈತರ ₹79.47 ಕೋಟಿ ಸಾಲ ಮನ್ನಾ ಪ್ರಕ್ರಿಯೆ ಪಟ್ಟಿ ಸಿದ್ಧವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.