ADVERTISEMENT

ಆರ್‌ಟಿಪಿಎಸ್: ಆರು ಘಟಕಗಳಲ್ಲಿ ವಿದ್ಯುತ್ ಉತ್ಪಾದನೆ ಸ್ಥಗಿತ

​ಪ್ರಜಾವಾಣಿ ವಾರ್ತೆ
Published 26 ಜೂನ್ 2022, 19:29 IST
Last Updated 26 ಜೂನ್ 2022, 19:29 IST
   

ಶಕ್ತಿನಗರ (ರಾಯಚೂರು ಜಿಲ್ಲೆ): ವಿದ್ಯುತ್‌ಗೆ ಬೇಡಿಕೆ ಇಲ್ಲದ ಕಾರಣ ಇಲ್ಲಿನ ಆರ್‌ಟಿಪಿಎಸ್‌ನ ಒಟ್ಟು 6 ವಿದ್ಯುತ್ ಘಟಕಗಳ ಉತ್ಪಾದನೆ ಕಾರ್ಯ ಸ್ಥಗಿತಗೊಂಡಿದೆ.

4ನೇ ಮತ್ತು 6ನೇ ಘಟಕದಲ್ಲಿ ಮಾತ್ರ 210 ಮೆಗಾವಾಟ್ ವಿದ್ಯುತ್ ಉತ್ಪಾದನೆ
ಯಾಗುತ್ತಿದೆ ಎಂದು ಆರ್‌ಟಿಪಿಎಸ್ ಮುಖ್ಯ ಕಾರ್ಯನಿರ್ವಾಹಕ ನಿರ್ದೇಶಕ ಶಶಿಕಾಂತ್ ತಿಳಿಸಿದ್ದಾರೆ.

‘ಕರ್ನಾಟಕದಲ್ಲಿ ಪ್ರಸ್ತುತ 7 ಸಾವಿರ ಮೆಗಾವಾಟ್ ವಿದ್ಯುತ್‌ ಬೇಡಿಕೆ ಇದೆ. ಉತ್ತಮ ಮಳೆಯಾಗಿರುವುದರಿಂದ ಪವನ ವಿದ್ಯುತ್‌ನಿಂದ 3 ಸಾವಿರ ಮೆಗಾ
ವಾಟ್‌, ಸೌರವಿದ್ಯುತ್‌ನಿಂದ 2 ಸಾವಿರ ಮೆಗಾವಾಟ್‌ ವಿದ್ಯುತ್ ಉತ್ಪಾದನೆ ಆಗು
ತ್ತಿದೆ. ಮಳೆಯಿಂದಾಗಿ ಬೇಡಿಕೆ ಇಲ್ಲದ ಕಾರಣ ಆರ್‌ಟಿಪಿಎಸ್‌ನ 6 ಘಟಕಗಳಲ್ಲಿ ತಾತ್ಕಾಲಿಕವಾಗಿ ವಿದ್ಯುತ್ ಉತ್ಪಾದನೆಸ್ಥಗಿತಗೊಳಿಸಲಾಗಿದೆ’ ಎಂದಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.