ಬೆಂಗಳೂರು: ಆಡಿಯೊ ಪ್ರಕರಣಕ್ಕೆ ಸಂಬಂಧಿಸಿದಂತೆ ಸದನದಲ್ಲಿ ನಡೆದ ಕಲಾಪದ ವೇಳೆ ಮಾತನಾಡಿದಸಚಿವ ಆರ್.ವಿ.ದೇಶಪಾಂಡೆ,ಪ್ರತಿಯೊಂದು ಸಂಸ್ಥೆಯ ಬಗ್ಗೆಯೂ ಆಕ್ಷೇಪ ವ್ಯಕ್ತಪಡಿಸಿದರೆ ಹೇಗೆ? ಎಂದು ಪ್ರಶ್ನಿಸಿದರು.
ಎಸ್‌ಐಟಿ ಮುಖ್ಯಮಂತ್ರಿಗಳ ಅಧೀನದಲ್ಲಿ ಬರುತ್ತದೆ. ಆದರೆ, ಎಸ್‌ಐಟಿಯನ್ನು ಅವರು ರಚಿಸಿದ್ದಾರಾ? ಸಿಬಿಐ ಕೇಂದ್ರ ಸರ್ಕಾರದ ಅಧೀನದಲ್ಲಿ ಬರುತ್ತದೆ. ಹಾಗಂತ ಅದನ್ನು ಮೋದಿ ಸೃಷ್ಟಿಸಿದ್ದಾರಾ? ಎಂದರು.
ಬಳಿಕ ಮಾತನಾಡಿದ ಜೆಡಿಎಸ್‌ನ ಶಿವಲಿಂಗೇಗೌಡ, ಸಭಾಧ್ಯಕ್ಷರ ಬಗ್ಗೆ ಆಪಾದನೆ ಮಾಡಿರುವುದು ನಮಗೆ ನೋವಾಗಿದೆ ಎಂದು ಹೇಳಿದರು.
ಆಡಿಯೊ ಪ್ರಕರಣ ದೇವದುರ್ಗದಲ್ಲಿ ನಡೆದಿದೆ ಎನ್ನಲಾಗಿದೆ. ಆದರೆ ಆ ಸನ್ನಿವೇಶ ರಾಜ್ಯದ ರಾಜಕೀಯಅಸ್ಥಿರತೆಗೆ ನಡೆದ ಪ್ರಯತ್ನವಾಗಿದೆ. ಸಭಾಧ್ಯಕ್ಷರನ್ನು ನಡುವೆ ಎಳೆದಿರುವುದರಿಂದ ಪ್ರಕರಣವನ್ನು ಗಂಭೀರವಾಗಿ ಸ್ವೀಕರಿಸಬೇಕು. ಪ್ರಕರಣದಲ್ಲಿ ಪ್ರಧಾನಿಗಳ ಹೆಸರು ಪ್ರಸ್ತಾಪವಾಗಿದೆ. ನ್ಯಾಯಮೂರ್ತಿಗಳನ್ನು ಎಳೆದು ತರಲಾಗಿದೆ. ಇಂಥ ಗಂಭೀರ ಪ್ರಕರಣವನ್ನು ಇಲ್ಲಿಗೇ ಬಿಟ್ಟುಬಿಡಿ ಎಂದರೆ ಹೇಗೆ ಎಂದು ಪ್ರಶ್ನಿಸಿದರು.
ಬಿಜೆಪಿಯವರು ಮಾತೆತ್ತಿದರೆ ಈ ಸರ್ಕಾರದಲ್ಲಿ ನಂಬಿಕೆ ಇಲ್ಲ ಎನ್ನುತ್ತಾರೆ. ಹಾಗಾದರೆ ಇನ್ಯಾವ ಸರ್ಕಾರವನ್ನು ತರಬೇಕು ಎಂದು ಪ್ರಶ್ನಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.