ADVERTISEMENT

ಮುನಿರಾಜು ಅವರಿಂದ ಬಿಜೆಪಿಯ ಅನೈತಿಕತೆ, ಕೊಳಕು ಕೃತ್ಯ ಬಯಲಾಗಿದೆ: ಕಾಂಗ್ರೆಸ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 22 ಮೇ 2022, 10:51 IST
Last Updated 22 ಮೇ 2022, 10:51 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಬಿಜೆಪಿ ಮಾಜಿ ಎಸ್. ಶಾಸಕ ಮುನಿರಾಜು ಅವರು ಬಿಜೆಪಿಯ ಅನೈತಿಕತೆ, ಅಕ್ರಮ ರಾಜಕಾರಣದ ಕೊಳಕು ಕೃತ್ಯ ಬಯಲಾಗಿದೆ ಎಂದು ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.

ಮುನಿರಾಜು ಮಾತನಾಡಿರುವ ವಿಡಿಯೊವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಕಾಂಗ್ರೆಸ್, ‘ಬಿಜೆಪಿ ಮಾಜಿ ಶಾಸಕರ ಬಾಯಿಯಲ್ಲೇ ಬಿಜೆಪಿಯ ಅನೈತಿಕತೆ, ಅಕ್ರಮ ರಾಜಕಾರಣದ ಕೊಳಕು ಕೃತ್ಯ ಬಯಲಾಗಿದೆ. ಬಿಜೆಪಿ ಇಂದಿಗೂ ನಡೆಸಿಕೊಂಡು ಬಂದಿರುವ ಕಳ್ಳ ಮತಗಳ ಪ್ರಜಾಪ್ರಭುತ್ವ ವಿರೋಧಿ ಅಪರಾಧದ ಸತ್ಯ ಹೇಳಿದ್ದಾರೆ. ಬೇರೆ ಕ್ಷೇತ್ರದ ಒಬ್ಬೊಬ್ಬ ಕಾರ್ಯಕರ್ತನಿಂದ 10 ಮತಗಳನ್ನು ಹಾಕಿಸಿದ ಕುಕೃತ್ಯಕ್ಕೆ ಬಿಜೆಪಿ ಜನತೆಯ ಕ್ಷಮೆ ಕೇಳಬೇಕು’ ಆಗ್ರಹಿಸಿದೆ.

‘ಉಪಚುನಾವಣೆಯೊಂದರಲ್ಲಿ ಸಾವಿರ ಜನ ಕಾರ್ಯಕರ್ತರು ಬಂದು ಐದೈದು, ಹತ್ತತ್ತು ಓಟ್ ಹಾಕಿದ್ದರು’ ಎಂದು ಬಿಜೆಪಿ ಮಾಜಿ ಎಸ್. ಶಾಸಕ ಮುನಿರಾಜು ಹೇಳುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಇದೀಗ ಮುನಿರಾಜು ಹೇಳಿಕೆ ಪ್ರಸ್ತಾಪಿಸಿ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಎಚ್‌.ಡಿ.ಕುಮಾರಸ್ವಾಮಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಬಿಜೆಪಿ ವಿರುದ್ಧ ಮುಗಿಬಿದ್ದಿದ್ದು, ರಾಜಕೀಯ ಕೆಸರೆರೆಚಾಟಕ್ಕೆ ಕಾರಣವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.