ADVERTISEMENT

ಕರ್ನಾಟಕ ಸಾಹಿತ್ಯ ಅಕಾಡೆಮಿ ವಾರ್ಷಿಕ ಪ್ರಶಸ್ತಿ: ಐವರಿಗೆ ‘ಗೌರವ ಪ್ರಶಸ್ತಿ’

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2024, 16:07 IST
Last Updated 6 ನವೆಂಬರ್ 2024, 16:07 IST
<div class="paragraphs"><p>ಕರ್ನಾಟಕ ಸಾಹಿತ್ಯ ಅಕಾಡೆಮಿ</p></div><div class="paragraphs"><p></p></div>

ಕರ್ನಾಟಕ ಸಾಹಿತ್ಯ ಅಕಾಡೆಮಿ

   

ಎಕ್ಸ್ ಚಿತ್ರ: @sahitya_academy

ADVERTISEMENT

ಬೆಂಗಳೂರು: ಕರ್ನಾಟಕ ಸಾಹಿತ್ಯ ಅಕಾಡೆಮಿಯ 2022ರ ‘ವಾರ್ಷಿಕ ಗೌರವ ಪ್ರಶಸ್ತಿ’ಗೆ ಸಾಹಿತಿಗಳಾದ ಆರ್.ಕೆ. ಹುಡಗಿ, ಅಗ್ರಹಾರ ಕೃಷ್ಣಮೂರ್ತಿ, ಇಂದಿರಾ ಹೆಗ್ಗಡೆ, ರಂಜಾನ್‌ ದರ್ಗಾ ಹಾಗೂ ತುಂಬಾಡಿ ರಾಮಯ್ಯ ಆಯ್ಕೆಯಾಗಿದ್ದಾರೆ.

ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಕಾಡೆಮಿ ಅಧ್ಯಕ್ಷ ಎಲ್.ಎನ್. ಮುಕುಂದರಾಜ್, ‘ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ನೀಡಿರುವ ಅಮೂಲ್ಯವಾದ ಸೇವೆಯನ್ನು ಪರಿಗಣಿಸಿ ಐವರನ್ನು ಗೌರವ ಪ್ರಶಸ್ತಿಗೆ ಸರ್ವ ಸದಸ್ಯರ ಸಭೆಯಲ್ಲಿ ಆಯ್ಕೆ ಮಾಡಲಾಗಿದೆ. ಈ ಪ್ರಶಸ್ತಿಯು ತಲಾ ₹50 ಸಾವಿರ ನಗದು ಬಹುಮಾನ ಒಳಗೊಂಡಿದೆ. ಈ ಬಾರಿ ಪ್ರಶಸ್ತಿಗಳಿಗೆ ವಿಭಾಗವಾರು ಸಾಹಿತಿಗಳನ್ನು ಗುರುತಿಸಿ, ಆಯ್ಕೆ ಮಾಡಲಾಗಿದೆ’ ಎಂದು ತಿಳಿಸಿದರು. 

‘2022ರ ‘ಸಾಹಿತ್ಯ ಶ್ರೀ’ ಪ್ರಶಸ್ತಿಗೆ ಬಂಜಗೆರೆ ಜಯಪ್ರಕಾಶ್, ರೂಮಿ ಹರೀಶ್, ಎಂ.ಜಿ. ಮಂಜುನಾಥ, ದಾಸನೂರು ಕೂಸಣ್ಣ, ರಾಜಶೇಖರ ಹತಗುಂದಿ, ಎಚ್.ಎನ್.ಆರತಿ, ಸಾರಿಕಾದೇವಿ ಕಾಳಗಿ, ಮಹೇಶ್ ಹರವೆ, ಅನಸೂಯ ಕಾಂಬ್ಳೆ ಹಾಗೂ ಚಲಂ ಹಾಡ್ಲಹಳ್ಳಿ ಅವರನ್ನು ಆಯ್ಕೆ ಮಾಡಲಾಗಿದೆ. ಸಾಹಿತ್ಯ ಕ್ಷೇತ್ರದಿಂದ ಐವರು, ಸೃಜನೇತರ ಸಾಹಿತ್ಯ ಕ್ಷೇತ್ರದಿಂದ ನಾಲ್ವರು ಹಾಗೂ ಸಾಹಿತ್ಯ ಪರಿಚಾರಿಕೆಗೆ ಸಂಬಂಧಿಸಿದಂತೆ ಒಬ್ಬರನ್ನು ಆಯ್ಕೆ ಮಾಡಲಾಗಿದೆ. ಈ ಪ್ರಶಸ್ತಿಯು ತಲಾ ₹25 ಸಾವಿರ ಒಳಗೊಂಡಿದೆ’ ಎಂದರು.

2021ರ ಪುಸ್ತಕ ಬಹುಮಾನಕ್ಕೆ ವಿಮರ್ಶಕರ ಅಭಿಪ್ರಾಯ ಆಧರಿಸಿ 17 ಕೃತಿಗಳನ್ನು ಆಯ್ಕೆ ಮಾಡಲಾಗಿದೆ. ಈ ಬಹುಮಾನವು ತಲಾ ₹25 ಸಾವಿರ ನಗದು ಬಹುಮಾನ ಒಳಗೊಂಡಿದೆ. 2021ರ ವಿವಿಧ ದತ್ತಿ ಬಹುಮಾನಗಳಿಗೆ ಎಂಟು ಕೃತಿಗಳು ಆಯ್ಕೆಯಾಗಿವೆ. ಪ್ರಶಸ್ತಿ ಪ್ರದಾನ ಸಮಾರಂಭವು ಡಿಸೆಂಬರ್ ತಿಂಗಳಲ್ಲಿ ನಡೆಯುವ ಸಾಧ್ಯತೆಯಿದ್ದು, ಸ್ಥಳ ನಿಗದಿಯಾಗಿಲ್ಲ ಎಂದು ತಿಳಿಸಿದರು.

2021ರ ಪುಸ್ತಕ ಬಹುಮಾನ ಪುರಸ್ಕೃತರು
ಪ್ರಕಾರ;ಕೃತಿಯ ಹೆಸರು;ಲೇಖಕ ಕಾವ್ಯ;ರಾಗಿ ಕಾಳು;ಚೀಮನಹಳ್ಳಿ ರಮೇಶಬಾಬು ನವ ಕವಿಗಳ ಪ್ರಥಮ ಸಂಕಲನ;ದಡ ಸೇರಿದ ಕನಸು;ಶೈಲೇಶ್ ಕುಮಾರ್ ಕಾದಂಬರಿ;ಚೆನ್ನಭೈರಾದೇವಿ ಕರಿಮೆಣಸಿನ ರಾಣಿಯ ಅಕಳಂಕ ಚರಿತೆ;ಗಜಾನನ ಶರ್ಮ ಸಣ್ಣ ಕತೆ;ಗುಣಸಾಗರಿ ಮತ್ತು ಇತರ ಕಥೆಗಳು;ಜಿ.ವಿ.ಆನಂದಮೂರ್ತಿ ನಾಟಕ;ಮಹಾ ಮಹಿಮ ಎಡೆಯೂರು ಸಿದ್ಧಲಿಂಗ ಶಿವಯೋಗಿ;ಬಿ.ಆರ್. ಪೊಲೀಸ್ ಪಾಟೀಲ ಲಲಿತ ಪ್ರಬಂಧ;ಎಲ್ಲಿಂದಲೋ ಬಂದವರು;ಭಾರತಿ ಬಿ.ವಿ. ಪ್ರವಾಸ ಸಾಹಿತ್ಯ;ಬುದ್ಧಭಕ್ತರ ನಾಡಿನಲ್ಲಿ;ಎಸ್‌.ಬಿ. ಪದ್ಮಪ್ರಸಾದ್ ಜೀವನ ಚರಿತ್ರೆ/ಆತ್ಮ ಕಥೆ;ಅಕ್ಕಯ್;ಡೊಮಿನಿಕ್ ಡಿ. ಸಾಹಿತ್ಯ ವಿಮರ್ಶೆ;ಕಣ್ಣೋಟ;ಎಚ್.ಎಸ್. ಸತ್ಯನಾರಾಯಣ ಮಕ್ಕಳ ಸಾಹಿತ್ಯ;ವಜ್ರದ ಕಿರೀಟ;ಸಿ.ವಿ. ಶೇಷಾದ್ರಿ ಹೊಳವನಹಳ್ಳಿ ವಿಜ್ಞಾನ ಸಾಹಿತ್ಯ;ಸೆರೆಂಡಿಪಿಟಿ ವೈದ್ಯಲೋಕದ ಅದ್ಭುತ ಆಕಸ್ಮಿಕಗಳು;ಕಿರಣ್ ವಿ.ಎಸ್. ಮಾನವಿಕ;ಸಂಕೇತ ವ್ಯಾಕರಣ ಮತ್ತು ಪದಕೋಶ;ಕೆ.ಎಸ್.ನಾಗರಾಜ ಸಂಶೋಧನೆ;ಚಹರೆಗಳೆಂದರೆ ಗಾಯಗಳೂ ಹೌದು;ಎ.ಎಸ್.ಪ್ರಭಾಕರ ಅನುವಾದ (ಭಾರತೀಯ ಭಾಷೆಯಿಂದ ಕನ್ನಡಕ್ಕೆ);ಪರ್ದಾ & ಪಾಲಿಗಮಿ;ದಾದಾಪೀರ್ ಜೈಮನ್ ಅಂಕಣ ಬರಹ/ವೈಚಾರಿಕ ಬರಹ;ಅಲ್ಪಸಂಖ್ಯಾತರು ಮತ್ತು ಜಾತಿ ವ್ಯವಸ್ಥೆ;ಮುಜಾಫರ್ ಅಸ್ಸಾದಿ ಸಂಕೀರ್ಣ;ವಚನ ದೀಪಿಕೆ;ಜಿ.ಕೃಷ್ಣಪ್ಪ ಲೇಖಕರ ಮೊದಲ ಸ್ವತಂತ್ರ ಕೃತಿ;ಊರು ಹೇಳದ ಕಥೆ;ಯಶಸ್ವನಿ ಕದ್ರಿ
2021ರ ದತ್ತಿ ಬಹುಮಾನ ಪುರಸ್ಕೃತರು
ಪ್ರಕಾರ;ದತ್ತಿನಿಧಿ ಬಹುಮಾನ;ಕೃತಿಯ ಹೆಸರು;ಲೇಖಕರು ಕಾವ್ಯ–ಹಸ್ತಪ್ರತಿ;ಚಿ.ಶ್ರೀನಿವಾಸರಾಜು ದತ್ತಿ ಬಹುಮಾನ;ಹದಿನೆಂಟರಿಂದ ಇಪ್ಪತ್ತೆಂಟರ ಕವಿತೆಗಳು;ಅಕ್ಷಯ ಕಾಂತಬೈಲು ಕಾದಂಬರಿ;ಚದುರಂಗ ದತ್ತಿನಿಧಿ ಬಹುಮಾನ;ಚಪಡ ಇದು ಅಕ್ಷರದ ಪಯಣ;ಶ್ರೀಧರ ಎಚ್‌.ಜಿ. ಲಲಿತ ಪ್ರಬಂಧ;ವಿ. ಸೀತಾರಾಮಯ್ಯ ಸೋದರಿ ಇಂದಿರಾ ದತ್ತಿ ಬಹುಮಾನ;ಇದು ಬರಿ ಮಣ್ಣಲ್ಲ;ಸಹನಾ ಕಾಂತಬೈಲು ಜೀವನಚರಿತ್ರೆ;ಸಿಂಪಿ ಲಿಂಗಣ್ಣ ದತ್ತಿನಿಧಿ ಬಹುಮಾನ;ಹಾಕಿ ಮಾಂತ್ರಿಕ ಮೇಜರ್ ಧ್ಯಾನಚಂದ್;ನಾಗ ಎಚ್. ಹುಬ್ಳಿ ಸಾಹಿತ್ಯ ವಿಮರ್ಶೆ;ಪಿ. ಶ್ರೀನಿವಾಸರಾವ್ ದತ್ತಿನಿಧಿ ಬಹುಮಾನ;ಬೆಡಗು ಬಿನ್ನಾಣ;ಪ್ರಸಾದಸ್ವಾಮಿ ಎಸ್. ಅನುವಾದ–1;ಎಲ್. ಗುಂಡಪ್ಪ ಮತ್ತು ಶಾರದಮ್ಮ ದತ್ತಿನಿಧಿ ಬಹುಮಾನ;ಸೆಬಾಸ್ಟಿಯನ್ & ಸನ್ಸ್;ಸುಮಂಗಲಾ ಲೇಖಕರ ಮೊದಲ ಸ್ವತಂತ್ರ ಕೃತಿ;ಮಧುರಚೆನ್ನ ದತ್ತಿನಿಧಿ ಬಹುಮಾನ;ಬಯಲಲಿತೇಲುತ ತಾನು;ಅಕ್ಷಯ್ ಪಂಡಿತ್ ವೈಚಾರಿಕ/ಅಂಕಣ ಬರಹ;ಬಿ.ವಿ. ವೀರಭದ್ರಪ್ಪ ದತ್ತಿನಿಧಿ ಬಹುಮಾನ;ಅಸತ್ಯದ ಕೇಡು;ಸುಶಿ ಕಾಡನಕುಪ್ಪೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.