ಶಿವಮೊಗ್ಗ: ಸಮೀಪದ ಸಕ್ರೆಬೈಲಿನ ಆನೆ ಬಿಡಾರದ ಕುಂತಿ ಆನೆ (22) ಗುರುವಾರ ಗಂಡುಮರಿಗೆ ಜನ್ಮ ನೀಡಿದ್ದು,ಆನೆ ಬಿಡಾರದಮಾವುತರಲ್ಲಿ ಸಂಭ್ರಮ ಮನೆ ಮಾಡಿದೆ.
ಆನೆ ಬಿಡಾರದಿಂದ ಒಂದೂವರೆ ಕಿ.ಮೀ. ಕಾಡಿನಲ್ಲಿ ಕೆರೆಯ ಬಳಿ ಗಂಡುಮರಿಗೆ ಜನ್ಮ ನೀಡಿದ್ದು, 89 ಕೆ.ಜಿ ತೂಕವಿದೆ. ಗೀತಾ (80) ಆನೆಯುಗೆಳತಿ ಕುಂತಿಯ ಜತೆಗೆ ಇದೆ.ಕಳೆದ ಬಾರಿ ಕುಂತಿಯುಹೇಮಾವತಿ ಎಂಬ ಹೆಣ್ಣು ಮರಿ ಆನೆಗೆ ಜನ್ಮ ನೀಡಿತ್ತು.2014ರಲ್ಲಿ ಹಾಸನ ಜಿಲ್ಲೆಯ ಕಾಡಿನಿಂದ ಕುಂತಿ ಆನೆಯನ್ನು ಸೆರೆಹಿಡಿದು ತರಲಾಗಿತ್ತು. ಮೊದಲೇಅರ್ಜುನ ಎಂಬ ಗಂಡುಮರಿ ಇತ್ತು.
ವನ್ಯಜೀವಿ ವಿಭಾಗದ ವೈದ್ಯರು ಸ್ಥಳಕ್ಕೆ ಭೇಟಿ ನೀಡಿ ಕುಂತಿ ಹಾಗೂ ಮರಿ ಆನೆಯ ಆರೋಗ್ಯ ಪರಿಶೀಲಿಸಿದ್ದಾರೆ. ಕಾಡಿನಲ್ಲೇ ಕುಂತಿ ಹಾಗೂ ಮರಿ ಆನೆಗೆ ಆರೈಕೆ ಮಾಡಲಾಗುತ್ತಿದೆ. ಕುಂತಿಗೆ ಮೂರು ತಿಂಗಳ ಆರೈಕೆ ಮಾಡಲಾಗುವುದು. ಪ್ರತಿದಿನ 5 ಕೆ.ಜಿ. ಅವಲಕ್ಕಿ, ಬನ್, ಬೆಲ್ಲ, ಕಾಯಿಯ ಪೌಷ್ಟಿಕ ಆಹಾರ ನೀಡಲಾಗುತ್ತಿದೆ. ಮರಿ ಆನೆಗೂ ಹೆಚ್ಚಿನ ಕಾಳಜಿ ವಹಿಸಲಾಗುತ್ತಿದೆ.
ಕಾಡಿನಲ್ಲೇ ಆನೆಯ ಆರೈಕೆ ಮಾಡುತ್ತಿರುವುದರಿಂದ ಸಾರ್ವಜನಿಕರಿಗೆ ಈಗಲೇ ಮರಿ ಆನೆಯ ದರ್ಶನ ಭಾಗ್ಯವಿಲ್ಲ. ಒಂದು ವಾರದ ನಂತರ ಆನೆ ಬಿಡಾರಕ್ಕೆ ಅದನ್ನು ಕರೆದೊಯ್ಯಲಾಗುತ್ತದೆ. ನಂತರ ಸಾರ್ವಜನಿಕರು ನೋಡಬಹುದು.
ಮರಿ ಆನೆಗಳದ್ದೇ ದರ್ಬಾರು: ಈಗಾಗಲೇ ಆನೆ ಬಿಡಾರದಲ್ಲಿ ಶಿವ, ಭಾನುಮತಿ, ಹೇಮಾವತಿ, ಶಾರದಾಎಂಬಮರಿಆನೆಗಳ ಪಡೆ ಇದೆ. ಐದು ವರ್ಷದಲ್ಲಿ ಐದು ಮರಿಗಳುಬಿಡಾರಕ್ಕೆ ಸೇರ್ಪಡೆಯಾದಂತಾಗಿದೆ. ಈಗ ಆನೆ ಬಿಡಾರದಲ್ಲಿ ಮರಿ ಆನೆಗಳದ್ದೇ ದರ್ಬಾರಾಗಿದ್ದು, ಪ್ರವಾಸಿಗರಿಗೆ ಈ ಮರಿ ಆನೆ ಪಡೆ ಹೆಚ್ಚಿನ ಮನರಂಜನೆ ನೀಡಲಿದೆ.
ಈಗ ಸಕ್ರೆಬೈಲು ಆನೆ ಬಿಡಾರದಲ್ಲಿ ಒಟ್ಟು ಆನೆಗಳ ಸಂಖ್ಯೆ 22ಕ್ಕೆ ಏರಿದೆ.ಪ್ರಸ್ತುತ 14 ಗಂಡು ಆನೆ ಹಾಗೂ 8 ಹೆಣ್ಣಾನೆಗಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.