ADVERTISEMENT

ರಾಷ್ಟ್ರೀಯ ನಾಟಕೋತ್ಸವಕ್ಕೆ ಸಾಣೇಹಳ್ಳಿ ಸಜ್ಜು

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2018, 10:02 IST
Last Updated 3 ನವೆಂಬರ್ 2018, 10:02 IST
ಸಾಣೇಹಳ್ಳಿ ಶಿವಸಂಚಾರದ ಲೋಗೊ
ಸಾಣೇಹಳ್ಳಿ ಶಿವಸಂಚಾರದ ಲೋಗೊ   

ಚಿತ್ರದುರ್ಗ: ರಂಗಭೂಮಿಯಲ್ಲಿ ವಿಶಿಷ್ಟ ಛಾಪು ಮೂಡಿಸಿರುವ ಶಿವಕುಮಾರ ಕಲಾಸಂಘ ನ.4 ರಿಂದ 9ರವರೆಗೆ ಆಯೋಜಿಸಿರುವ ರಾಷ್ಟ್ರೀಯ ನಾಟಕೋತ್ಸವಕ್ಕೆ ಹೊಸದುರ್ಗ ತಾಲ್ಲೂಕಿನ ಸಾಣೇಹಳ್ಳಿ ಸಜ್ಜಾಗಿದೆ.

ಪ್ರಸಕ್ತ ವರ್ಷದ ನಾಟಕೋತ್ಸವವನ್ನು ಬಸವಣ್ಣನವರ ‘ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ’ ಎಂಬ ಧೇಯ ವಾಕ್ಯದಡಿ ಆಯೋಜಿಸಲಾಗಿದೆ. ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಭಾನುವಾರ ಸಂಜೆ ನಾಟಕೋತ್ಸವಕ್ಕೆ ಚಾಲನೆ ನೀಡಲಿದ್ದಾರೆ.

ಆರು ದಿನ 11 ನಾಟಕಗಳು ಪ್ರದರ್ಶನ ಕಾಣಲಿವೆ. ಮೊದಲ ದಿನ ಹೊರತುಪಡಿಸಿ ಉಳಿದ ಐದು ದಿನ ನಿತ್ಯ ಎರಡು ನಾಟಕಗಳ ಪ್ರದರ್ಶನವಿರುತ್ತದೆ. ‘ನವೀನ ಮತ್ತು ವಿಲಾಸ ಪ್ರಹಸನಂ’ ತಮಿಳು ನಾಟಕವನ್ನು ಚೆನ್ನೈ ತಂಡ ಹಾಗೂ ‘ಕರ್ಣಭಾರಂ’ ಮಲಯಾಳಿ ನಾಟಕವನ್ನು ಕೊಚ್ಚಿಯ ಲೋಕಧರ್ಮಿ ತಂಡ ಪ್ರದರ್ಶಿಸಲಿವೆ. ರಂಗಾಸಕ್ತರಿಗೆ ಊಟ ಹಾಗೂ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ.

ADVERTISEMENT

5 ಸಾವಿರ ಪ್ರೇಕ್ಷಕರು ವೀಕ್ಷಿಸಲು ಅವಕಾಶವಿರುವ ಗ್ರೀಕ್‌ ಮಾದರಿಯ ಶಿವಕುಮಾರ ಬಯಲು ರಂಗಮಂದಿರ ಆಕರ್ಷಕ ರೂಪ ಪಡೆದುಕೊಂಡಿದೆ. ರಂಗಮಂದಿರದ ಹೊರಗೆ ಎಲ್‌ಇಡಿ ಪರದೆ ವ್ಯವಸ್ಥೆ ಮಾಡಲಾಗಿದೆ. www.shivasanchara.org ನಲ್ಲಿ ನಾಟಕದ ನೇರ ಪ್ರಸಾರಕ್ಕೆ ವ್ಯವಸ್ಥೆ ಮಾಡಲಾಗಿದೆ. ರಂಗಕರ್ಮಿ ಬಸವರಾಜ ಬಂಗೇರಿ ಅವರಿಗೆ ನ.9ರಂದು ಶಿವಕುಮಾರ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.