ಬೆಂಗಳೂರು: ಚಿತ್ರದುರ್ಗ ಜಿಲ್ಲೆ ಚಳ್ಳಕೆರೆಯಲ್ಲಿ ಖಬರಸ್ಥಾನದ ಪಕ್ಕದಲ್ಲೇ ಇರುವ ಚರ್ಮ ಕೈಗಾರಿಕಾ ಪ್ರದೇಶ, ಚರ್ಮದ ಮಂಡಿ ಮತ್ತು ಮಾದಿಗ ಸಮುದಾಯಕ್ಕೆ ಸೇರಿದ ಸಮುದಾಯ ಭವನವನ್ನು ವಕ್ಫ್ ವಶಕ್ಕೆ ತೆಗೆದುಕೊಳ್ಳಬೇಕು ಎಂದು ಸ್ಥಳೀಯ ಜಾಮಿಯಾ ಮಸೀದಿ ವಕ್ಫ್ ಮಂಡಳಿಗೆ ಪತ್ರ ಬರೆದಿರುವುದಕ್ಕೆ ಶಿವಶರಣ ಮಾದಾರಚೆನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು, 1959 ರಲ್ಲಿ ರಾಜ್ಯ ಸರ್ಕಾರ ಮಾದಿಗ ಸಮುದಾಯದವರಿಗೆ ಚರ್ಮದ ಗುಡಿ ಕೈಗಾರಿಕೆ ನಡೆಸಲು ಖಬರಸ್ಥಾನದ ಪಕ್ಕದಲ್ಲೇ ಜಮೀನು ನೀಡಿತ್ತು. ಆಗ ನಮ್ಮ ಸಮುದಾಯವರು ಸಣ್ಣಪುಟ್ಟ ವ್ಯಾಪಾರ ಮಳಿಗೆಗಳಿಗೂ ಅವಕಾಶ ನೀಡಿದ್ದರು. ಆದರೆ ಜಾಮೀಯ ಮಸೀದಿಯವರು, ಆ ಜಾಗ ತಮ್ಮದೆಂದು ಹೇಳಿಕೊಳ್ಳುತ್ತಿದ್ದಾರೆ. ಸರ್ಕಾರ ಇದಕ್ಕೆ ಅವಕಾಶ ನೀಡಬಾರದು ಎಂದಿದ್ದಾರೆ.
‘ಇದು ತಪ್ಪು ಮಾಹಿತಿ, ಸದರಿ ಜಾಗವನ್ನು ಸರ್ಕಾರ ಮಾದಿಗ ಸಮುದಾಯಕ್ಕೆ ನೀಡಿದೆ. ಈ ಜಾಗವನ್ನು ಉಳಿಸಿಕೊಡಬೇಕು. ವಕ್ಫ್ ಮಂಡಳಿಗೆ ನೀಡಬಾರದು’ ಎಂದು ಮಾದಾರ ಚನ್ನಯ್ಯ ಸ್ವಾಮೀಜಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.