ADVERTISEMENT

ಎಸ್‌ಇಪಿ ವರದಿ ಶೀಘ್ರ ಸಲ್ಲಿಕೆ: ಸುಖದೇವ್‌ ಥೋರಟ್‌

​ಪ್ರಜಾವಾಣಿ ವಾರ್ತೆ
Published 7 ಜೂನ್ 2024, 15:53 IST
Last Updated 7 ಜೂನ್ 2024, 15:53 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಬೆಂಗಳೂರು: ನೂತನ ಪಠ್ಯ ಚೌಕಟ್ಟು ಒಳಗೊಂಡ ಅಂತಿಮ ವರದಿ ಸಿದ್ಧವಾಗುತ್ತಿದ್ದು, ಶೀಘ್ರ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ರಾಜ್ಯ ಶಿಕ್ಷಣ ನೀತಿ ಆಯೋಗದ ಅಧ್ಯಕ್ಷ ಸುಖದೇವ್‌ ಥೋರಟ್‌ ಹೇಳಿದರು.

ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ರಾಜ್ಯ ಉನ್ನತ ಶಿಕ್ಷಣ ಪರಿಷತ್‌, ರಾಜ್ಯ ಶಿಕ್ಷಣ ನೀತಿ ಆಯೋಗ ಶುಕ್ರವಾರ ಹಮ್ಮಿಕೊಂಡಿದ್ದ ಪಠ್ಯಕ್ರಮ ರಚನಾ ಕಾರ್ಯಗಾರದಲ್ಲಿ ಅವರು ವರ್ಚುಯಲ್‌ ಮೂಲಕ ಮಾತನಾಡಿದರು.  

ADVERTISEMENT

ಪಠ್ಯ ರಚನೆಯಲ್ಲಿ ಪ್ರಾಧ್ಯಾಪಕರ ಪಾತ್ರ ಮಹತ್ವದ್ದಾಗಿದೆ. ಪ್ರಾಧ್ಯಾಪಕರು, ಶಿಕ್ಷಣ ತಜ್ಞರ ಸಲಹೆ, ಅಭಿಪ್ರಾಯ ಆಧರಿಸಿ ಅಂತಿಮ ವರದಿ ಸಿದ್ಧಪಡಿಸಲಾಗುತ್ತಿದೆ ಎಂದರು.

ರಾಜ್ಯ ಶಿಕ್ಷಣ ನೀತಿ ಆಯೋಗ ಸದಸ್ಯ ಕಾರ್ಯದರ್ಶಿ ಭಾಗ್ಯವನ್‌, ರಾಜ್ಯ ಶಿಕ್ಷಣ ನೀತಿ ಆಯೋಗ ಹಿಂದಿನ ಎಲ್ಲಾ ಆಯೋಗಗಳ ಶಿಫಾರಸು ಒಳಗೊಂಡಂತೆ ರಾಜ್ಯದ ಸಾಂಸ್ಕೃತಿಕ, ಭೌಗೋಳಿಕ, ಐತಿಹಾಸಿಕ ಅಂಶಗಳನ್ನು ಪರಿಗಣಿಸಿ ಉತ್ತಮ ವರದಿ ಸಿದ್ಧಪಡಿಸುತ್ತಿದೆ ಎಂದು ಹೇಳಿದರು.

ಕುಲಪತಿ ಎಂ.ಎಸ್‌. ಜಯಕರ ಮಾತನಾಡಿ, ರಾಜ್ಯ ಶಿಕ್ಷಣ ನೀತಿ ರಾಜ್ಯದ ಶಿಕ್ಷಣ ವ್ಯವಸ್ಥೆಯ ದೀರ್ಘಾವಧಿ ಸವಾಲುಗಳನ್ನು ಪರಿಹರಿಸುವ ಉದ್ದೇಶ ಹೊಂದಿದೆ. ಶೈಕ್ಷಣಿಕ ಅಭಿವೃದ್ಧಿ ಜತೆಗೆ, ವಿಶಾಲ ಮನೋಭಾವ, ಸಮಾನ ದೃಷ್ಟಿಕೋನ ಬೆಳೆಸಲು ಒತ್ತು ನೀಡಲಾಗಿದೆ. ವಿದ್ಯಾರ್ಥಿಗಳ ಕೌಶಲ ಹೆಚ್ಚಿಸುವ ಮೂಲಕ ಉದ್ಯೋಗಾವಕಾಶ ದೊರಕಿಸುವ ವ್ಯವಸ್ಥೆ ರೂಪಿಸಲಾಗುತ್ತಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.