ಬೆಳಗಾವಿ: ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೀಸಲಾತಿ ಪ್ರಮಾಣವನ್ನು ಒಟ್ಟಾರೆ ಶೇ 6 ರಷ್ಟು ಹೆಚ್ಚಿಸುವ ಮಸೂದೆಗೆ ವಿಧಾನಸಭೆ ಸೋಮವಾರ ಸರ್ವಾನುಮತದ ಒಪ್ಪಿಗೆ ನೀಡಿದೆ.
ಇದರಿಂದ ಪರಿಶಿಷ್ಟ ಜಾತಿ ಮೀಸಲು ಪ್ರಮಾಣ ಶೇ 17 ಕ್ಕೂ, ಪರಿಶಿಷ್ಟ ಪಂಗಡಗಳ ಮೀಸಲಾತಿ ಶೇ 7 ಕ್ಕೆ ಹೆಚ್ಚಲಿದೆ. ಈ ಹಿಂದೆ ಸುಗ್ರೀವಾಜ್ಞೆ ಹೊರಡಿಸಲಾಗಿತ್ತು. ಇದೀಗ ಮಸೂದೆಯನ್ನು ಮಂಡಿಸಿ ಅದಕ್ಕೆ ಒಪ್ಪಿಗೆ ಪಡೆಯಲಾಯಿತು. ಪರಿಷತ್ತಿನಲ್ಲಿ ಅಂಗೀಕಾರವಾದರೆ ಮೀಸಲಾತಿ ಪ್ರಮಾಣ ಶೇ 24 ರಷ್ಟು ಹೆಚ್ಚಿಸುವ ಅವಕಾಶದ ಮೊದಲ ಹೆಜ್ಜೆ ಪೂರ್ಣಗೊಳ್ಳಲಿದೆ.
ಮೀಸಲಾತಿ ಹೆಚ್ಚಳದ ಕುರಿತು ನಿಯಮ 69 ರ ಮೇಲಿನ ಚರ್ಚೆಯ ಬಳಿಕ ಕಾನೂನು ಮತ್ತು ಸಂಸದೀಯ ಸಚಿವ ಜೆ.ಸಿ.ಮಾಧುಸ್ವಾಮಿ ಈ ಮಸೂದೆಯನ್ನು ಮಂಡಿಸಿದರು. ‘ಈ ಮಸೂದೆಯನ್ನು ತುಂಬು ಹೃದಯದಿಂದ ಬೆಂಬಲಿಸುತ್ತೇವೆ’ ಎಂದು ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಜೆಡಿಎಸ್ ಬಂಡೆಪ್ಪ ಕಾಶೆಂಪೂರ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.