ಬೆಂಗಳೂರು: ಬಿಜೆಪಿಗರೇ, ಮಹಿಳೆಯರ ಮೇಲೆ ಅತ್ಯಾಚಾರ, ದೌರ್ಜನ್ಯ ಎಸಗುವುದೇ ಆರ್‌ಎಸ್‌ಎಸ್ ಶಾಖೆಯ ನಿತ್ಯ ಪಾಠವಾಗಿದೆಯೇ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಮಹಿಳೆಯೊಬ್ಬರ ಮೇಲೆ ವ್ಯಕ್ತಿಯೊಬ್ಬರು ದೌರ್ಜನ್ಯ ಎಸಗಿದ್ದಾರೆ ಎಂಬ ವಿಚಾರ ಪ್ರಸ್ತಾಪಿಸಿ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, ‘ಚಿತ್ತಾಪುರದಲ್ಲಿ ಆರ್‌ಎಸ್‌ಎಸ್‌ನ ವ್ಯಕ್ತಿಯೊಬ್ಬರು ಮಹಿಳೆಯೊಬ್ಬರಿಗೆ ವಂಚಿಸಿ, ದೌರ್ಜನ್ಯ ಎಸಗಿದ ಪ್ರಕರಣ ಬೆಳಕಿಗೆ ಬಂದಿದೆ. ಮಹಿಳೆಯರ ಮೇಲೆ ಅತ್ಯಾಚಾರ, ದೌರ್ಜನ್ಯ ಎಸಗುವುದೇ RSS ಶಾಖೆಯ ನಿತ್ಯ ಪಾಠವಾಗಿದೆಯೇ ಎಂಬುದರ ಬಗ್ಗೆ ಬಿಜೆಪಿಗರು ಉತ್ತರಿಸುವರೇ’ ಎಂದು ಪ್ರಶ್ನಿಸಿದೆ.
‘ಅತ್ಯಾಚಾರ, ಅನಾಚಾರ, ಶಾಂತಿಭಂಗ ಮುಂತಾದ ಸಮಾಜಘಾತುಕ ಕೃತ್ಯಗಳನ್ನು ನಡೆಸುತ್ತಿರುವ ಸಂಘಟನೆಯ ಚಟುವಟಿಕೆಗಳನ್ನು ನಿಯಂತ್ರಿಸುವ ಬಗ್ಗೆ ನಮ್ಮ ಸರ್ಕಾರ ಚಿಂತಿಸಲಿದೆ’ ಎಂದು ಕಾಂಗ್ರೆಸ್ ಹೇಳಿದೆ.
ಹೆಣ್ಣುಮಕ್ಕಳೊಂದಿಗೆ ಅಸಭ್ಯವಾಗಿ ವರ್ತಿಸಿ ಬ್ಲಾಕ್ ಮೇಲ್ ಮಾಡುತ್ತಿದ್ದ ಎಬಿವಿಪಿ ಅಧ್ಯಕ್ಷ ಹಾಗೂ ಬಿಜೆಪಿ ಕಾರ್ಯಕರ್ತನೊಬ್ಬನ ಕರ್ಮಕಾಂಡ ಬಯಲಾಗಿದೆ. ಬಿಜೆಪಿಗರೇ, ಆರ್‌ಎಸ್‌ಎಸ್ ಸಂಘದ ಶಾಖೆಯಲ್ಲಿ ಹೇಳುವ ಧರ್ಮ ರಕ್ಷಣೆಯ ಪಾಠ ಇದೇನಾ ಎಂದು ಕಾಂಗ್ರೆಸ್ ಟೀಕಿಸಿದೆ.
ಸಂಸದ ತೇಜಸ್ವಿ ಸೂರ್ಯ ಅವರೇ, ಬಿಜೆಪಿ ಕಾಮಣ್ಣರಿಂದ ಕಿರುಕುಳ ಅನುಭವಿಸುವ ಹೆಣ್ಣುಮಕ್ಕಳಿಗೆ ‘ಹೆಲ್ಪ್ ಲೈನ್’ (ಸಹಾಯ ವಾಣಿ) ಯಾವಾಗ ಆರಂಭಿಸುವಿರಿ? ಎಂದು ಕಾಂಗ್ರೆಸ್ ವ್ಯಂಗ್ಯವಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.