ಬೆಂಗಳೂರು: ಶಾಸಕಿ ಶಶಿಕಲಾ ಜೊಲ್ಲೆ ಮತ್ತೊಮ್ಮೆ ಸಂಪುಟ ಸೇರಿರುವುದು ಪಕ್ಷದಲ್ಲಿ ಹಲವರ ಹುಬ್ಬೇರುವಂತೆ ಮಾಡಿದ್ದು, ಜೊಲ್ಲೆ ಹೆಸರು ಪಟ್ಟು ಹಿಡಿದು ಸೇರಿಸುವಲ್ಲಿ ಪಕ್ಷದ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರ ಪ್ರಮುಖ ಪಾತ್ರ ವಹಿಸಿದ್ದಾರೆ.
ಗೊಲ್ಲ ಸಮುದಾಯಕ್ಕೆ ಸೇರಿದ್ದ ಪೂರ್ಣಿಮಾ ಶ್ರೀನಿವಾಸ್ ಅವರ ಹೆಸರು ಬಹುತೇಕ ಅಂತಿಮಗೊಳಿಸಲಾಗಿತ್ತು. ಆದರೆ, ಸಂತೋಷ್ ಅವರು ಜೊಲ್ಲೆಯ ಅವರ ಹೆಸರು ಪಟ್ಟಿಯಿಂದ ಕೈಬಿಡದಂತೆ ನೋಡಿಕೊಂಡರು ಎಂದು ಮೂಲಗಳು ಹೇಳಿವೆ.
ಶಶಿಕಲಾ ಅವರ ಪತಿ ಅಣ್ಣಾ ಸಾಹೇಬ್ ಸಂಸದರೂ ಆಗಿದ್ದಾರೆ. ಕುಟುಂಬ ರಾಜಕಾರಣ ಪ್ರೋತ್ಸಾಹಿಸುವುದಿಲ್ಲ ಎಂದು ಬಿಜೆಪಿ ಹೇಳುತ್ತಲೇ ಒಂದೇ ಮನೆಯ ಇಬ್ಬರಿಗೆ ಅವಕಾಶ ನೀಡಲಾಗಿದೆ. ಭ್ರಷ್ಟಾಚಾರ ಸಹಿಸುವುದಿಲ್ಲ ಎಂದು ಮಾತೃಪೂರ್ಣ ಯೋಜನೆಯಲ್ಲಿ ಮೊಟ್ಟೆ ಸರಬರಾಜು ಟೆಂಡರ್ ನೀಡಿಕೆಯಲ್ಲಿ ಕಮಿಷನ್ ಪಡೆದ ಆರೋಪಕ್ಕೂ ಒಳಗಾಗಿರುವ ಶಶಿಕಲಾ ಅವರಿಗೆ ಮತ್ತೊಮ್ಮೆ ಸಚಿವ ಸ್ಥಾನ ನೀಡಿದ್ದು ಹೇಗೆ ಎಂಬುದು ಶಾಸಕರೊಬ್ಬರ ಪ್ರಶ್ನೆ.
ಇದನ್ನೂ ಓದಿ... ಪುತ್ರನಿಗೆ ಸಿಗದ ಮಂತ್ರಿ ಪಟ್ಟ: ಬಿಎಸ್ವೈ ಬೇಸರ?
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.