ಶಿರಾಳಕೊಪ್ಪ: ನಿಷೇಧಿತ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ (ಸಿಎಫ್‌ಐ) ಸಂಘಟನೆ ಸೇರುವಂತೆ ಕೋರಿದ ಗೋಡೆಬರಹ ಪಟ್ಟಣದಲ್ಲಿ ಕಾಣಿಸಿ ಕೊಂಡಿದ್ದು, ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಸ್ವಯಂ ಪ್ರೇರಿತ ಪ್ರಕರಣ ದಾಖಲಾಗಿದೆ.
9ಕ್ಕೂ ಹೆಚ್ಚು ಕಡೆ ನೀಲಿ ಮತ್ತು ಕೆಂಪು ಬಣ್ಣದಲ್ಲಿ ಬರೆದು, ಅದಕ್ಕೆ ಚುಕ್ಕೆ ಗುರುತು ಇರಿಸಲಾಗಿದೆ. ನಿಷೇಧಿತ ಪಾಪ್ಯೂಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ)ದ ಅಂಗ ಸಂಸ್ಥೆಯಾಗಿರುವ ಸಿಎಫ್‌ಐ ಪರ ಜನನಿಬಿಡ ಪ್ರದೇಶ ಗಳಲ್ಲಿ ಇಂಗ್ಲಿಷನ್‌ನಲ್ಲಿ ಈ ಬರಹ ಕಾಣಿಸಿಕೊಂಡಿದೆ.
ಕೇಂದ್ರ ಸರ್ಕಾರ 5 ವರ್ಷ ಕಾಲ ಪಿಎಫ್ಐ, ಸಿಎಫ್‌ಐ ಸಂಘಟನೆಗಳನ್ನು ನಿಷೇಧಿಸಿದೆ. ಕಿಡಿಗೇಡಿಗಳ ವಿರುದ್ಧ ಪ್ರಕರಣ ದಾಖಲಿಸಿದೆ. ಗೋಡೆಬರಹ ಅಳಿಸುವ ಕೆಲಸ ನಡೆಸಿದ್ದು, ಬರೆದವರ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.