ಬೆಂಗಳೂರು: ಕನ್ನಡದ ಶ್ರೇಷ್ಠ ಸಾಹಿತಿ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಶಿವರಾಮ ಕಾರಂತ ಅವರ 120 ನೇ ಜನ್ಮದಿನಾಚರಣೆ ಇಂದು.
ಈ ನಿಟ್ಟಿನಲ್ಲಿ ಸಾಹಿತಿಗಳು, ಲೇಖಕರು, ಬರಹಗಾರರು, ರಾಜಕಾರಣಿಗಳು ಸೇರಿದಂತೆ ನಾನಾ ರಂಗದ ಗಣ್ಯರು, ಕಾರಂತರ ಅಭಿಮಾನಿಗಳು ಅವರನ್ನು ಸ್ಮರಿಸಿ ಫೇಸ್‌ಬುಕ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿಗೌರವ ಸಲ್ಲಿಸುತ್ತಿದ್ದಾರೆ.
ಕಾರಂತರು ನಾಡು, ನುಡಿಗೆ ಸಲ್ಲಿಸಿದ ಸೇವೆಯನ್ನು ಸ್ಮರಿಸಿ ಪರಿಸರ ಹೋರಾಟ, ಯಕ್ಷಗಾನ ಕಾಳಜಿ ಸೇರಿದಂತೆ ಅವರ ಸಾಹಿತ್ಯದ ಕೊಡುಗೆಗಳನ್ನು ಗೌರವಿಸಲಾಗುತ್ತಿದೆ.
ಕೋಟಾ ಶಿವರಾಮ ಕಾರಂತ ಅವರು ಅಕ್ಟೋಬರ್ 10, 1902 ರಂದು ಸಾಲಿಗ್ರಾಮದಲ್ಲಿ ಜನಿಸಿ ಸಾಹಿತ್ಯ, ಪರಿಸರ, ರಾಜಕೀಯ, ಸಿನಿಮಾ, ಚಳವಳಿ, ರಂಗಭೂಮಿ, ಕಲೆ ಸೇರಿದಂತೆ ನಾನಾ ರಂಗಗಳಲ್ಲಿ ಅಪಾರ ಕೆಲಸ ಮಾಡಿ 1997 ಡಿಸೆಂಬರ್ 9 ರಂದು ಉಡುಪಿಯಲ್ಲಿ ನಿಧನರಾದರು.
ಅನೇಕರು ಶಿವರಾಮಕಾರಂತರ ಕೃತಿಗಳಲ್ಲಿನ ತಮ್ಮ ಇಷ್ಟದ ಸಾಲುಗಳನ್ನು ಪೋಸ್ಟ್ ಮಾಡಿ, ಕಾರಂತರಿಗೆ ಗೌರವ ನಮನ ಸಲ್ಲಿಸುತ್ತಿದ್ದಾರೆ. ಕಾರಂತರ ಪುಸ್ತಕಗಳನ್ನು ಓದಲು ಕರೆ ಕೊಡುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.