ಬೆಂಗಳೂರು: ಬಿಜೆಪಿ ಸರ್ಕಾರದ ವೈಫಲ್ಯವನ್ನು ಒಪ್ಪಿಕೊಂಡಿರುವುದಕ್ಕೆ ಸಿ.ಟಿ. ರವಿ ಅವರಿಗೆ ಧನ್ಯವಾದ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.
'ತಮಿಳುನಾಡನ್ನು ಒಪ್ಪಿಸೋ ತಾಕತ್ತು ಸಿದ್ದರಾಮಯ್ಯ ಅವರಿಗಿದೆ. ಒಂದು ಗುಟುರು ಹಾಕಿದ್ರೆ ಸಾಕು' ಎಂಬ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಸಿ.ಟಿ.ರವಿ ಅವರ ಹೇಳಿಕೆಗೆ ಟ್ವೀಟ್ ಮೂಲಕ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ, 'ಹೆಚ್ಚು ಮಾತು ಬೇಡ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ರಾಜೀನಾಮೆ ಕೊಡಲು ಹೇಳಿ ಬಿಡಿ' ಎಂದು ತಿರುಗೇಟು ನೀಡಿದ್ದಾರೆ.
'ನಾನು ಗುಟುರು ಹಾಕಿಯೇ ಮೇಕೆದಾಟು ಯೋಜನೆ ಜಾರಿಗೊಳಿಸುತ್ತೇನೆ. ಕೈಲಾಗದ ನೀವು ಈ ರೀತಿ ಬಾಯಿ ಬಡಾಯಿಯ ಸೀಟಿ ಊದುತ್ತಾ ಇರಿ' ಎಂದು ಸಿ.ಟಿ. ರವಿ ಅವರನ್ನು ಟ್ಟೀಟ್ ಮೂಲಕ ಸಿದ್ದರಾಮಯ್ಯ ಮೂದಲಿಸಿದ್ದಾರೆ.
ಚಿಕ್ಕಮಗಳೂರಲ್ಲಿ ಮಾತನಾಡಿದ್ದ ಸಿ.ಟಿ. ರವಿ ಅವರು, 'ತಮಿಳುನಾಡನ್ನು ಒಪ್ಪಿಸೋ ತಾಕತ್ತು ಸಿದ್ದರಾಮಯ್ಯ ಅವರಿಗೆ ಇದೆ. ಒಂದು ಮಾತು ಇಲ್ಲವೇ ಸಿದ್ದರಾಮಯ್ಯ ಅವರು ಒಂದು ಗುಟುರು ಹಾಕಿದ್ರೆ ಸಾಕು. ಸೋನಿಯಾ ಗಾಂಧಿ ಅಲರ್ಟ್ ಆಗುತ್ತಾರೆ. ಸೋನಿಯಾ ಗಾಂಧಿ ಅವರ ಮಾತನ್ನು ಚಿದಂಬರಂ ತೆಗೆದುಹಾಕಲ್ಲ. ಚಿದಂಬರಂ ಮಾತನ್ನು ಸ್ಟಾಲಿನ್ ತೆಗೆದುಹಾಕಲ್ಲ. ಇದು ಸುಲಭದಲ್ಲಿ ಆಗಲಿರುವ ಸಂಗತಿ. ಪಾದಯಾತ್ರೆ ಉದ್ದೇಶ ರಾಜಕಾರಣವೇ ಹೊರತು ಬೇರೆನಿಲ್ಲ' ಎಂದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.