ADVERTISEMENT

ಕಾಫಿ ಡೇ ಉದ್ಯಮಿ | ನೆರೆವೇರಿದ ಸಿದ್ಧಾರ್ಥ ಅಂತ್ಯಸಂಸ್ಕಾರ

​ಪ್ರಜಾವಾಣಿ ವಾರ್ತೆ
Published 31 ಜುಲೈ 2019, 14:32 IST
Last Updated 31 ಜುಲೈ 2019, 14:32 IST
   

ಕಾಫಿ ಡೇ ಸಂಸ್ಥಾಪಕ, ಮಾಜಿ ಸಿಎಂ ಎಸ್‌.ಎಂ.ಕೃಷ್ಣ ಅವರ ಅಳಿಯ ಸಿದ್ಧಾರ್ಥ ಹೆಗ್ಡೆಆತ್ಮಹತ್ಯೆ ಮಾಡಿಕೊಂಡರೋ, ಎಲ್ಲಿಯಾದರೂ ಹೋದರೋ ಎಂಬ ಅನುಮಾನಗಳಿಗೆ ಬುಧವಾರ ಬೆಳಗ್ಗೆ 6.30ರಲ್ಲಿ ಉತ್ತರ ಸಿಕ್ಕಿದೆ. ನೇತ್ರಾವತಿ ನದಿ ಸಮುದ್ರ ಸೇರುವ ಅಳಿವೆಯಲ್ಲಿ ಸಿದ್ಧಾರ್ಥ ಅವರ ಮೃತದೇಹ ಪತ್ತೆಯಾಯಿತು.ಕರ್ನಾಟಕದ ಕಾಫಿಗೆ ಜಾಗತಿಕ ಮನ್ನಣೆ ದಕ್ಕಿಸಿಕೊಟ್ಟವರು ಸಿದ್ಧಾರ್ಥ. ಜಗದ್ವಿಖ್ಯಾತಿ ಪಡೆದ ಕಾಫಿ ಡೇ ಕನ್ನಡ ಮಣ್ಣಿನದ್ದು. ಇದರ ಹಿಂದೆ ಇದ್ದದ್ದು ಸಿದ್ಧಾರ್ಥ. ಇದೇ ಕಾರಣಕ್ಕೆ ಸಿದ್ಧಾರ್ಥ ಅವರ ಅಕಾಲಿಕ ಮರಣ ಕರ್ನಾಟಕವನ್ನು ಮರುಗುವಂತೆ ಮಾಡಿದೆ. ಕಾಫಿ ಕಿಂಗ್‌ ಸಿದ್ಧಾರ್ಥ ಅವರ ಅಂತಿಮ ಸಂಸ್ಕಾರ ಚೇತನಹಳ್ಳಿ ಎಸ್ಟೇಟ್‌ನಲ್ಲಿ ನಡೆಯಲಿದೆ. ಅವರ ಅಂತಿಮಯಾತ್ರೆಯ ಕ್ಷಣ ಕ್ಷಣದ ಮಾಹಿತಿ ಇಲ್ಲಿ ಸಿಗಲಿದೆ.

7. 10:ನೆರೆವೇರಿದ ಸಿದ್ಧಾರ್ಥ ಅಂತ್ಯಸಂಸ್ಕಾರ

ಒಕ್ಕಲಿಗ ಸಂಪ್ರದಾಯದಂತೆ ಸಿದ್ಧಾರ್ಥ ಅಂತ್ಯಸಂಸ್ಕಾರ ನೆರವೇರಿತು. ಸಿದ್ದಾರ್ಥ ಅವರ ಇಬ್ಬರು ಪುತ್ರರು ಚಿತೆಗೆ ಅಗ್ನಿ ಸ್ಪರ್ಶ ಮಾಡಿದರು.

ADVERTISEMENT

6. 16:ಸಿದ್ಧಾರ್ಥ ಪಾರ್ಥೀವ ಶರೀರ ದರ್ಶನಕ್ಕೆ ಸಾರ್ವಜನಿಕರಿಂದ ನೂಕುನುಗ್ಗಲು​
ಚೇತನಹಳ್ಳಿ ಎಸ್ಟೇಟ್‌ನಲ್ಲಿಸಿದ್ಧಾರ್ಥ ಪಾರ್ಥೀವ ಶರೀರ ದರ್ಶನಕ್ಕೆ ಸಾರ್ವಜನಿಕರಿಂದ ನೂಕುನುಗ್ಗಲು ಉಂಟಾಯಿತು. ಪೊಲೀಸರು ನೂಕುನುಗ್ಗಲನ್ನು ತಡೆಯಲು ಹರಸಾಹಸ ಪಡಬೇಕಾಯಿತು.

5. 06:ದುಖತಪ್ತರಾಗಿರುವ ಸಿದ್ಧಾರ್ಥ ಕುಟುಂಬದವರು

4. 36:ಸಿದ್ಧಾರ್ಥ ಅವರ ಸ್ವಗ್ರಾಮ ಚೇತನಹಳ್ಳಿಯ ಕಡೆಗೆ ಪಾರ್ಥೀವ ಶರೀರವನ್ನು ರವಾನಿಸಲಾಯಿತು.

ಸ್ವಗ್ರಾಮ ಚೇತನ ಹಳ್ಳಿಯಲ್ಲಿ ಸಿದ್ಧಾರ್ಥ ಅವರ ಅಂತಿಮ ಸಂಸ್ಕಾರವನ್ನು ನಡೆಸಲಾಗುವುದು.ಧಾರ್ಮಿಕ ವಿಧಿ ವಿಧಾನಗಳ ಮೂಲಕ ಅಂತ್ಯಕ್ರಿಯೆಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

4. 20:ಸರತಿ ಸಾಲಿನಲ್ಲಿ ನಿಂತು ಸಾರ್ವಜನಿಕರು ಹಾಗೂ ಗಣ್ಯರಿಂದ ಸಿದ್ಧಾರ್ಥ ಪಾರ್ಥೀವ ಶರೀರದ ಅಂತಿಮ ದರ್ಶನ

3. 55:ಬಿಜೆಪಿಯ ಹಿರಿಯ ಶಾಸಕರಾದ ಆರ್‌. ಅಶೋಕ್‌, ಸಿ.ಟಿ.ರವಿ, ಕಾಂಗ್ರೆಸ್‌ನ ಡಿ.ಕೆ.ಶಿವಕುಮಾರ್‌, ರಾಜೇಗೌಡ ಅಂತಿಮ ದರ್ಶನ ಪಡೆದರು.​

3. 47:ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಸಿದ್ದಾರ್ಥ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದರು.​

3. 40:ಸಿದ್ಧಾರ್ಥ ಪಾರ್ಥೀವ ಶರೀರವನ್ನು ವೀಕ್ಷಣೆ ಮಾಡುತ್ತಿರುವ ಸಾರ್ವಜನಿಕರು

3. 30:ಚಿಕ್ಕಮಗಳೂರಿನಲ್ಲಿರುವ ಕೆಫೆ ಕಾಫಿ ಡೇ ಗ್ಲೋಬಲ್‌ ಲಿಮಿಟೆಡ್ ಕಂಪನಿ ಕಚೇರಿ ಆವರಣದಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

3. 20:ಸಿದ್ಧಾರ್ಥ ಪಾರ್ಥೀವ ಶರೀರವನ್ನು ಆ್ಯಂಬುಲೆನ್ಸ್‌ನಲ್ಲಿಯೇ ವೀಕ್ಷಣೆ ಮಾಡಿದ ಕುಟುಂಬಸ್ಥರು

ಆ್ಯಂಬುಲೆನ್ಸ್‌ನಲ್ಲಿಯೇಸಿದ್ಧಾರ್ಥ ಪಾರ್ಥೀವ ಶರೀರವನ್ನು ಕುಂಟುಂಬಸ್ಥರು ವೀಕ್ಷಣೆ ಮಾಡಿದರು. ಸಾರ್ವಜನಿಕರ ವೀಕ್ಷಣೆ ಬಳಿಕ, ಧಾರ್ಮಿಕ ವಿಧಿವಿಧಾನಗಳ ಮೂಲಕ ಅಂತಿಮ ಸಂಸ್ಕಾರ ಮಾಡಲಾಗುವುದು ಎಂದು ಸಿದ್ಧಾರ್ಥ ಕುಟುಂಬಸ್ಥರು ಹೇಳಿದ್ದಾರೆ.

3.15:ಮಂಗಳೂರಿನಿಂದ ಚಿಕ್ಕಮಗಳೂರಿಗೆ ಆಗಮಿಸಿದ ಮೃತದೇಹ

3.11:ಸಿದ್ದಾರ್ಥ ಅಂತಿಮ ದರ್ಶನಕ್ಕೆ ಹರಿದು ಬರುತ್ತಿರುವ ಜನಸಾಗರ, ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ

2.01: ಮೂಡಿಗೆರೆಗೆ ಬಂದ ಸಿದ್ಧಾರ್ಥ ಶರೀರ: ಅಂತಿಮ ದರ್ಶನ ಪಡೆಯಲು ಜನಸಾಗರ

2.00:ಕಾಫಿ ಡೇ ಆಡಳಿತ ಮಂಡಳಿಗೆ ಎಸ್‌.ವಿ ರಂಗನಾಥ್‌ ಹಂಗಾಮಿ ಮುಖ್ಯಸ್ಥ

ಸಿದ್ದಾರ್ಥ ಅವರ ಮರಣದ ಹಿನ್ನೆಲೆಯಲ್ಲಿ ಬುಧವಾರ ಸಭೆ ನಡೆಸಿದ ಕಾಫಿ ಡೇ ಆಡಳಿತ ಮಂಗಳಿ ನಿವೃತ್ತ ಐಎಎಸ್‌ ಅಧಿಕಾರಿ ಎಸ್‌.ವಿ ರಂಗನಾಥ್‌ ಅವರನ್ನು ಮುಖ್ಯಸ್ಥರನ್ನಾಗಿ ಆಯ್ಕೆ ಮಾಡಿದೆ.

ನಿತಿನ್‌ ಬಾಗ್ಮನೆ ಅವರನ್ನು ಹಂಗಾಮಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯಾಗಿ ನೇಮಕ ಮಾಡಲಾಗಿದೆ.

1.50: ಚಿಕ್ಕಮಗಳೂರಿನ ಮೂಡಿಗೆರೆಗೆ ಸಿದ್ಧಾರ್ಥ ಶರೀರ

1.45: ಸಿದ್ಧಾರ್ಥ ಅವರ ಅಂತ್ಯಸಂಸ್ಕಾರಕ್ಕಾಗಿ ಹುಟ್ಟೂರು ಚಟ್ನಹಳ್ಳಿಯ ಎಸ್ಟೇಟ್‌ನಲ್ಲಿ ಸಿದ್ಧತೆಗಳು ನಡೆಯುತ್ತಿವೆ.

1.10: ಸಿದ್ಧಾರ್ಥ ಸಾವು ಪ್ರಕರಣ ತನಿಖೆಯಾಗಬೇಕು ಎಂದು ಸಾಮಾಜಿಕ ಕಾರ್ಯಕರ್ತ ಎಸ್‌.ಆರ್‌ ಹಿರೇಮಠ ಆಗ್ರಹಿಸಿದ್ದಾರೆ.

12.20: ಸಿದ್ಧಾರ್ಥ ನೈಜ ವ್ಯಕ್ತಿತ್ವದವರು. ಅಧಿಕಾರಿಗಳಿಂದ ತಮಗೆ ಕಿರುಕುಳವಿತ್ತು ಎಂಬ ಅವರ ಆರೋಪದ ಕುರಿತು ತನಿಖೆಯಾಗಬೇಕು. ದೀವಾಳಿತನ ಕಾನೂನಿನ ಮರು ಪರಿಶೀಲನೆ ಮಾಡುವುದರತ್ತ ಸಿದ್ಧಾರ್ಥ ಅವರ ಪ್ರಕರಣ ಬೆಳಕು ಚೆಲ್ಲಿದೆ ಎಂದು ಮಾಜಿ ಸಚಿವ ಪ್ರಿಯಾಂಕ್‌ ಖರ್ಗೆ ಟ್ವೀಟ್‌ ಮಾಡಿದ್ದಾರೆ.

12.15: ಅಳಿಯ ಸಿದ್ಧಾರ್ಥ ಅವರ ಅಂತ್ಯಸಂಸ್ಕಾರಕ್ಕಾಗಿ ಚಿಕ್ಕಮಗಳೂರಿಗೆ ತೆರಳಿದ ಮಾಜಿ ಮುಖ್ಯಮಂತ್ರಿ ಎಸ್‌.ಎಂ ಕೃಷ್ಣ

12.15: ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಂದ ಕಿರುಕುಳವಿತ್ತು ಎಂಬ ಕಾಫಿ ಡೇ ಮಾಲೀಕ ಸಿದ್ಧಾರ್ಥ ಅವರ ಪತ್ರದಲ್ಲಿನ ಆರೋಪದ ಕುರಿತು ಚರ್ಚಿಸಲು ಅವಕಾಶ ನೀಡಲು ಕೋರಿ ಕಾಂಗ್ರೆಸ್‌ ಲೋಕಸಭೆಯಲ್ಲಿ ನೋಟಿಸ್‌ ನೀಡಿದ್ದಾರೆ.

12.15: ಆರಂಭದ ಕೆಲ ನೇಮಕಾತಿಗಳ ಸಂದರ್ಶನಗಳು ನಡೆದದ್ದೇ ಕೆಫೆ ಕಾಫಿ ಡೇನಲ್ಲಿ. ನಮ್ಮ ಸಂಸ್ಥೆರೂಪು ರೇಷೆ ಸಿದ್ಧವಾಗಿದ್ದೇ ದೇಶಾದ್ಯಂತ ಇರುವ ನಿಮ್ಮ ಕೆಫೆಗಳಲ್ಲಿ. ನೀವು ಒಳ್ಳೆಯದನ್ನೇ ಮಾಡಿದ್ದೀರಿ. ನೀವು ಸೋತಿಲ್ಲ ಎಂದು ಕಾನೂನು ಸುದ್ದಿಗಳನ್ನು ಪ್ರಕಟಿಸುವ ಖ್ಯಾತ ವೆಬ್‌ಸೈಟ್‌ ಬಾರ್‌ ಆ್ಯಂಡ್‌ ಬೆಂಚ್‌ ಟ್ವೀಟ್‌ ಮಾಡಿದೆ.

12.12: ನನಗೂ ಸಿದ್ಧಾರ್ಥ್‌ಗೂ ಪರೋಕ್ಷ ಸಂಬಂಧವಿದೆ: ವಿಜಯ್‌ ಮಲ್ಯ

11.57: ಔದ್ಯಮಿಕ ವೈಫಲ್ಯ ನಮ್ಮ ಆತ್ಮಗೌರವಕ್ಕೆ ದಕ್ಕೆ ತಾರಲು ಬಿಡಬಾರದುಎಂದು ಸಿದ್ಧಾರ್ಥ ಅವರನ್ನು ಉಲ್ಲೇಖಿಸಿ ಮಹೀಂದ್ರಾ ಸಂಸ್ಥೆಯ ಮುಖ್ಯಸ್ಥ ಆನಂದ್‌ ಮಹೀಂದ್ರಾ ಅವರು ಟ್ವೀಟ್‌ ಮಾಡಿದ್ದಾರೆ.

– ನನಗೆ ಸಿದ್ದಾರ್ಥ ಅವರ ಬಗ್ಗೆ ಗೊತ್ತಿಲ್ಲ. ಅವರ ಆರ್ಥಿಕ ಪರಿಸ್ಥಿತಿಯ ಬಗ್ಗೆಯೂ ಗೊತ್ತಿಲ್ಲ. ಆದರೆ, ಔದ್ಯಮಿಕ ವೈಫಲ್ಯವು ನಮ್ಮ ಆತ್ಮಗೌರವಕ್ಕೆ ಧಕ್ಕೆ ತಾರಲು ಬಿಡಬಾರದು. ಹಾಗೇನಾದರೂ ಆದರೆ, ಅದು ಒಬ್ಬ ಉದ್ಯಮಿಯನ್ನೇ ಕೊಂದುಬಿಡುತ್ತದೆ ಎಂದಷ್ಟೇ ನನಗೆ ಗೊತ್ತು.

11.45: ಚಿಕ್ಕಮಗಳೂರಿನಕಾಫಿ ಡೇ ಗ್ಲೋಬಲ್‌ನಲ್ಲಿ ಅಂತಿಮ ದರ್ಶನಕ್ಕೆ ಸಕಲ ವ್ಯವಸ್ಥೆ

11.20:ಚಿಕ್ಕಮಗಳೂರಿನತ್ತ ಸಿದ್ಧಾರ್ಥ ಮೃತದೇಹ

ಕೆಫೆ ಕಾಫಿ ಡೇ ಸಂಸ್ಥಾಪಕ ವಿ.ಜಿ.ಸಿದ್ದಾರ್ಥ ಹೆಗ್ಡೆ ಅವರ ಪಾರ್ಥಿವ ಶರೀರ ಮರಣೋತ್ತರ ಪರೀಕ್ಷೆ ಮತ್ತು ಅಂತಿಮ ದರ್ಶನದ ಬಳಿಕ ಚಿಕ್ಕಮಗಳೂರಿನತ್ತ ಹೊರಟಿದೆ.

ಆಂಬುಲೆನ್ಸ್ ನಲ್ಲಿ ಚಾರ್ಮಾಡಿ ಘಾಟಿ ಮಾರ್ಗವಾಗಿ ಚಿಕ್ಕಮಗಳೂರಿಗೆ ತೆಗೆದುಕೊಂಡು ಹೋಗಲಾಗುತ್ತಿದೆ. ಹೆಚ್ಚುವರಿಯಾಗಿ ಒಂದು ಆಂಬುಲೆನ್ಸ್ ಅನ್ನು ಜೊತೆಗೆ ಕೊಂಡೊಯ್ಯಲಾಗುತ್ತಿದೆ.

ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ, ವಿಧಾನ ಪರಿಷತ್ ಸದಸ್ಯ ಪ್ರಾಣೇಶ್ ಮತ್ತು ಸಿದ್ದಾರ್ಥ ಅವರ ಕುಟುಂಬದ ಕೆಲವರು ಆಂಬುಲೆನ್ಸ್ ನಲ್ಲಿ ಇದ್ದಾರೆ.‌

10.50: ಕಾಫಿ ಉದ್ಯಮವನ್ನು ವಿಶ್ವಕ್ಕೆ ಪರಿಚಯಿಸಿದ್ದ ಸಿದ್ಧಾರ್ಥ್‌: ಎಚ್‌ಡಿಕೆ

10.30: ಮರಣೋತ್ತರ ಪರೀಕ್ಷೆ ಮುಕ್ತಾಯ

ಸಿದ್ದಾರ್ಥ ಅವರ ಮೃತದೇಹದ ಮರಣೋತ್ತರ ಪರೀಕ್ಷೆ ಮುಕ್ತಾಯವಾಗಿದೆ. ವೆನ್ಲಾಕ್ ಆಸ್ಪತ್ರೆಯ ಶವಾಗಾರದ ಆವರಣದಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಇರಿಸಲಾಗಿದೆ. ಕೆಲಹೊತ್ತು ಇಲ್ಲಿ ಅಂತಿಮ ದರ್ಶನ ನಡೆಯಲಿದೆ. ಬಳಿಕ ಮಂಗಳೂರಿನಿಂದ ಬಿ.ಸಿ.ರೋಡ್, ಬೆಳ್ತಂಗಡಿ, ಚಾರ್ಮಾಡಿ ಘಾಟಿ, ಮೂಡಿಗೆರೆ ಮಾರ್ಗವಾಗಿ ಚಿಕ್ಕಮಗಳೂರು ನಗರದಲ್ಲಿರುವ ಕಾಫಿ ಡೇ ಗ್ಲೋಬಲ್ ಕಚೇರಿ ಆವರಣಕ್ಕೆ ಕೊಂಡೊಯ್ಯಲಾಗುತ್ತದೆ.

10.00: ಕಾಫಿ ಡೇ ಷೇರುಗಳ ಸತತ ಕುಸಿತ

ಮುಂಬೈ ಷೇರುಪೇಟೆಯ ಬುಧವಾರದ ವಹಿವಾಟಿನಲ್ಲಿಯೂಕಾಫಿ ಡೇ ಕಂಪನಿಯಷೇರುಗಳು ಶೇ.19.98ರಷ್ಟು ಕುಸಿದವು. ₹30.65 ಕುಸಿಯುವುದರೊಂದಿಗೆ₹122.75 ಮೊತ್ತದಲ್ಲಿ ವಹಿವಾಟು ನಡೆಯುತ್ತಿದೆ. ಮಂಗಳವಾರವೂ ಕಾಫಿ ಡೇ ಷೇರುಗಳು ಕುಸಿದಿದ್ದವು.

9.25: ಆಸ್ತಿ ಮಾರಿ ಸಾಲ ತೀರಿಸುವ ಯೋಜನೆಯಲ್ಲಿದ್ದರೂ ಐಟಿ ಕಿರುಕುಳವಿತ್ತು: ರಾಜೇಗೌಡ

9.25: ಕರ್ನಾಟಕ ಕಾಂಗ್ರೆಸ್‌ ಸಂತಾಪ

9.00:ಕಾಫಿ ಡೇ ಗ್ಲೋಬಲ್‌ನಲ್ಲಿ ಅಂತಿಮ ದರ್ಶನ

ಉದ್ಯಮಿ ಸಿದ್ದಾರ್ಥ ಅವರ ಅಂತಿಮ ದರ್ಶನಕ್ಕೆ ಚಿಕ್ಕಮಗಳೂರಿನ ಕೆ.ಎಂ ರಸ್ತೆಯ ಕಾಫಿ ಡೇ ಗ್ಲೊಬಲ್ ಘಟಕದ ಆವರಣದಲ್ಲಿ ವ್ಯವಸ್ಥೆ ಮಾಡಲಾಗುತ್ತಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರೀಶ್ ಪಾಂಡೆ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

8.15:ಮುಖ್ಯಮಂತ್ರಿ ಸಂತಾಪ

ಮಾಜಿ ಮುಖ್ಯಮಂತ್ರಿ ಎಸ್ ಎಂ. ಕೃಷ್ಣ ಅವರ ಅಳಿಯ ಹಾಗೂ ಕೆಫೆ ಕಾಫಿ ಡೇ ಸಂಸ್ಥಾಪಕ ವಿ.ಜಿ. ಸಿದ್ಧಾರ್ಥ ಅವರ ನಿಧನ ತೀವ್ರ ಆಘಾತ ಹಾಗೂ ದುಃಖ ತಂದಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಂತಾಪ ವ್ಯಕ್ತಪಡಿಸಿದ್ದಾರೆ. ಭಗವಂತನು ಅವರ ಕುಟುಂಬಕ್ಕೆ ಈ ದುಃಖ ಭರಿಸುವ ಶಕ್ತಿ ನೀಡಲಿ ಹಾಗೂ ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ.

7.49:ಕೇಂದ್ರ ಸಚಿವ ಸದಾನಂದಗೌಡ ಸಂತಾಪ

7.40:ಸಿದ್ಧಾರ್ಥ ಅವರ ನಿಧನದ ಸುದ್ದಿಯಿಂದ ತೀವ್ರ ಆಘಾತವಾಗಿದೆ. ದೇಶಕ್ಕೆ ತುಂಬಲಾಗದ ನಷ್ಟ ಉಂಟಾಗಿದೆ. ಸಿದ್ಧಾರ್ಥ ಅವರದು ತುಂಬಾ ಸರಳ ವ್ಯಕ್ತಿತ್ವ. ಸಾವಿರಾರು ಜನಕ್ಕೆ ಸ್ವಾಭಿಮಾನದಿಂದ ಬದುಕಲು ದಾರಿ ಮಾಡಿಕೊಟ್ಟಿದ್ದ ನಂದಾದೀಪ. ಈ ದಿನ ಆ ನಂದಾದೀಪ ಹಾರಿಹೋದ ಸುದ್ದಿ ಕೇಳಿ ನಮಗೆಲ್ಲಾ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. – ಎಚ್‌.ಡಿ ದೇವೇಗೌಡ

7.30:ಮರಣೋತ್ತರ ಪರೀಕ್ಷೆ ಬಳಿಕ ಸಿದ್ದಾರ್ಥ ಅವರ ಮೃತದೇಹವನ್ನು ಮೂಡಿಗೆರೆತಾಲ್ಲೂಕಿನ ಚೇತನಹಳ್ಳಿಯ ಎಸ್ಟೇಟ್ ಗೆ ತೆಗೆದುಕೊಂಡು ಹೋಗಲು ಕುಟುಂಬದ ಸದಸ್ಯರುತೀರ್ಮಾನಿಸಿದ್ದಾರೆ.– ರಾಜೇಗೌಡ, ಶೃಂಗೇರಿ ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.