ADVERTISEMENT

ಕಾಂಗ್ರೆಸ್‌ಗೆ ಜತೆಯಾದರೂ ಸಿದ್ಧಾಂತ ಬಿಡದ ಯೆಚೂರಿ: ಬರಗೂರು ರಾಮಚಂದ್ರಪ್ಪ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2024, 23:30 IST
Last Updated 6 ಅಕ್ಟೋಬರ್ 2024, 23:30 IST
<div class="paragraphs"><p>ಸೀತಾರಾಂ ಯೆಚೂರಿ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಯೆಚೂರಿ ಅವರ ಭಾವ ಚಿತ್ರಕ್ಕೆ ನಮನ ಸಲ್ಲಿಸಲಾಯಿತು. &nbsp;</p></div>

ಸೀತಾರಾಂ ಯೆಚೂರಿ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಯೆಚೂರಿ ಅವರ ಭಾವ ಚಿತ್ರಕ್ಕೆ ನಮನ ಸಲ್ಲಿಸಲಾಯಿತು.  

   

-ಪ್ರಜಾವಾಣಿ ಚಿತ್ರ

ಬೆಂಗಳೂರು: ‘ಕಾಂಗ್ರೆಸ್‌ ಅನ್ನು ವಿರೋಧಿಸುತ್ತಿದ್ದವರೇ ಕಾಂಗ್ರೆಸ್‌ ಜತೆ ಕೈಜೋಡಿಸುವ ಸ್ಥಿತಿ ಎದುರಾಗಿತ್ತು. ಅದನ್ನು ಸರಿಯಾಗಿ ನಿರ್ವಹಿಸಿದ ಶ್ರೇಯ ಸೀತಾರಾಂ ಯೆಚೂರಿ ಅವರಿಗೆ ಸಲ್ಲುತ್ತದೆ’ ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ಅಭಿಪ್ರಾಯಪಟ್ಟರು.

ADVERTISEMENT

ನಗರದಲ್ಲಿ ಶನಿವಾರ ಸಿಪಿಎಂ ಆಯೋಜಿಸಿದ್ದ ‘ಕಾಮ್ರೇಡ್‌ ಸೀತಾರಾಂ ಯೆಚೂರಿ ಶ್ರದ್ಧಾಂಜಲಿ ಸಭೆ’ಯಲ್ಲಿ ಮಾತನಾಡಿದ ಅವರು, ‘ಈ ಸಭೆಯಲ್ಲಿ ಇರುವವರೆಲ್ಲರೂ ಒಂದೊಮ್ಮೆ ಕಾಂಗ್ರೆಸ್‌ನ ಕಡುವಿರೋಧಿಗಳಾಗಿದ್ದರು. ಆದರೆ ಧಾರ್ಮಿಕ ಮೂಲಭೂತವಾದ ತೀವ್ರವಾಗಿ, ದ್ವೇಷ ಬಿತ್ತುವುದು ಹೆಚ್ಚಾದಾಗ ಕಾಂಗ್ರೆಸ್ ಜೊತೆಗೇ ಕೈಜೋಡಿಸಬೇಕಾಯಿತು’ ಎಂದರು.

‘ಎಡ ಪಕ್ಷಗಳು ಕಾಂಗ್ರೆಸ್‌ ಜೊತೆಗೆ ಸೇರದೇ ಉಳಿದಿದ್ದರೆ, ದೇಶದ ಸ್ಥಿತಿ ಇನ್ನಷ್ಟು ಹೀನಾಯವಾಗುತ್ತಿತ್ತು. ಅಂತಹ ಅಪಾಯವನ್ನು ಯೆಚೂರಿ ಅವರು ತಪ್ಪಿಸಿದರು. ಕಾಂಗ್ರೆಸ್‌ ಜೊತೆಗೆ ಹೋದರೂ ತಮ್ಮ ಮತ್ತು ತಮ್ಮ ಪಕ್ಷದ ಮೂಲ ಆಶಯ ಹಾಗೂ ಸಿದ್ದಾಂತವನ್ನು ಅವರು ಬಿಟ್ಟುಕೊಟ್ಟಿರಲಿಲ್ಲ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.