ADVERTISEMENT

ಸಿಐಪಿಇಟಿಯಿಂದ ಕೌಶಲ ತರಬೇತಿ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2018, 19:41 IST
Last Updated 20 ಡಿಸೆಂಬರ್ 2018, 19:41 IST

ಬೆಂಗಳೂರು: ಮೈಸೂರಿನಲ್ಲಿರುವ ಸೆಂಟ್ರಲ್ ಇನ್‌ಸ್ಟಿಟ್ಯೂಟ್‌ ಆಫ್‌ ಪ್ಲಾಸ್ಟಿಕ್‌ ಎಂಜಿನಿಯರಿಂಗ್‌ ಆ್ಯಂಡ್‌ ಟೆಕ್ನಾಲಜಿ ಸಂಸ್ಥೆಯ (ಸಿಐಪಿಇಟಿ) ಆಶ್ರಯದಲ್ಲಿ ರಾಜ್ಯದ ಪರಿಶಿಷ್ಟ ಜಾತಿ, ಪಂಗಡ ಹಾಗೂ ಹಿಂದುಳಿದ ವರ್ಗಗಳಿಗೆ ಸೇರಿದ ನಿರುದ್ಯೋಗಿ ಯುವಕ ಯುವತಿಯರಿಗೆ 3ರಿಂದ 6 ತಿಂಗಳ ಉಚಿತ ವೃತ್ತಿಪರ ಕೌಶಲ ತರಬೇತಿ ಏರ್ಪಡಿಸಲಾಗಿದೆ.

18-35 ವಯೋಮಿತಿಯೊಳಗಿನ, ₹2.5 ಲಕ್ಷದವರೆಗೆ ಕುಟುಂಬದ ವಾರ್ಷಿಕ ಆದಾಯವುಳ್ಳ ಪರಿಶಿಷ್ಟ ಜಾತಿ ಹಾಗೂ ಪಂಗಡದವರು, 18-31 ವಯೋಮಿತಿಯೊಳಗಿನ, ₹3 ಲಕ್ಷದವರೆಗೆ ಕುಟುಂಬದ ವಾರ್ಷಿಕ ಆದಾಯವುಳ್ಳ ಹಿಂದುಳಿದ ವರ್ಗಗಳಿಗೆ ಸೇರಿದವರು ಅರ್ಜಿ ಸಲ್ಲಿಸಬಹುದು. ತರಬೇತಿಗೆ ಆಯ್ಕೆಯಾದವರಿಗೆ ಊಟ, ವಸತಿ ಜತೆಗೆ ₹ 500 ಸ್ಟೈಪೆಂಡ್‌ನೀಡಲಾಗುತ್ತದೆ.

ತರಬೇತಿ ನಂತರ ಉದ್ಯೋಗವನ್ನೂ ಕಲ್ಪಿಸಲಾಗುತ್ತದೆ.ಡಿ. 24ರೊಳಗೆ ಅರ್ಜಿ ಸಲ್ಲಿಸಬೇಕು.

ADVERTISEMENT

ವಿಳಾಸ: ಸಿಐಪಿಇಟಿ, ನಂ. 437/ಎ, ಹೆಬ್ಬಾಳ ಕೈಗಾರಿಕಾ ಪ್ರದೇಶ, ಮೈಸೂರು. ವಿವರಗಳಿಗೆ: 78999 86444, 0821-2510619

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.