ಬೆಂಗಳೂರು: ಶರಣಾಗತರಾದ ನಕ್ಸಲರ ಮೇಲೆ ದಾಖಲಾಗಿರುವ ಪ್ರಕರಣಗಳ ತ್ವರಿತ ವಿಚಾರಣೆಗೆ ವಿಶೇಷ ನ್ಯಾಯಾಲಯ ಸ್ಥಾಪಿಸಲು ‘ನಕ್ಸಲ್ ಶರಣಾಗತಿ ಮತ್ತು ಪುನರ್ವಸತಿ ಸಮಿತಿ’ ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಿದೆ.
ಪಶ್ಚಿಮಘಟ್ಟ ಸೇರಿದಂತೆ ರಾಜ್ಯದ ಹಲವೆಡೆ ಎಡಪಂಥೀಯ ತೀವ್ರಗಾಮಿ ಸಂಘಟನೆ ಚಟುವಟಿಕೆಗಳು ಸಕ್ರಿಯವಾಗಿದ್ದಾಗ, ಸ್ಥಳೀಯ ಯುವಜನರು ಸಂಘಟನೆಗೆ ಹೆಚ್ಚಿನ ಸಂಖ್ಯೆಯಲ್ಲಿ ಸೇರ್ಪಡಯಾಗಿದ್ದರು. ನಿರುದ್ಯೋಗ, ಅಸಮಾನತೆ, ಮೂಲಸೌಕರ್ಯಗಳ ಅಭಿವೃದ್ಧಿ ಕಲ್ಪಿಸದ ಆಡಳಿತದ ಧೋರಣೆ
ಗಳ ವಿರುದ್ಧ ಆಕ್ರೋಶಗೊಂಡಿದ್ದ ಯುವಕರ ಸಂಘಟಿಸಿ, ಚಳವಳಿ ಕಟ್ಟಲು ನಕ್ಸಲರು ಮುಂದಾಗಿದ್ದರು.
ಚಳವಳಿ ಹತ್ತಿಕ್ಕಲು ರಚಿಸಲಾಗಿದ್ದ ನಕ್ಸಲ್ ನಿಗ್ರಹ ಪಡೆಯು ಅರಣ್ಯ ಪ್ರದೇಶದಲ್ಲಿ ಕಾರ್ಯಾಚರಣೆ ತೀವ್ರ ಗೊಳಸಿತ್ತು. ಕೆಲ ನಕ್ಸಲರ ಹತ್ಯೆಯನ್ನೂ ಮಾಡಿತ್ತು. ಇದೇ ಸಮಯದಲ್ಲಿ ರಾಜ್ಯ ಸರ್ಕಾರ ನಕ್ಸಲ್ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದವರ ಶರಣಾಗತಿಗೆ ಅವಕಾಶ ಮಾಡಿಕೊಟ್ಟಿತ್ತು. ಶರಣಾಗತ
ರಾದವರಿಗೆ 2015ರಲ್ಲಿ ವಿಶೇಷ ಪ್ಯಾಕೇಜ್ ಘೋಷಿಸಿತ್ತು.
‘ನಕ್ಸಲ್ ಚಟುವಟಿಕೆಗಳು ತೀವ್ರವಾಗಿದ್ದಾಗ ಹಲವರ ಮೇಲೆ ಪ್ರಕರಣ ದಾಖಲಾಗಿದ್ದವು. ದಶಕ ಕಳೆದರೂ
ಇತ್ಯರ್ಥವಾಗಿಲ್ಲ. ಇಂದಿಗೂ ನ್ಯಾಯಾಲಯಗಳಿಗೆ ಅಲೆದಾಡುತ್ತಿದ್ದಾರೆ. ಬದುಕು ಕಟ್ಟಿಕೊಳ್ಳಲು ಸಾಧ್ಯವಾಗಿಲ್ಲ.ಹಾಗಾಗಿ, ವಿಶೇಷ ನ್ಯಾಯಾಲಯ ಸ್ಥಾಪನೆ ಅಗತ್ಯ’ ಎನ್ನುತ್ತಾರೆ ವಕೀಲ
ಕೆ.ಪಿ.ಶ್ರೀಪಾಲ್.
ಸಶಸ್ತ್ರಕ್ರಾಂತಿ ಮಾರ್ಗ ತ್ಯಜಿಸಿ, ಕಾನೂನಿನ ವ್ಯಾಪ್ತಿಯಲ್ಲಿ ಹೋರಾಟ ನಡೆಸಲು ಭೂಗತ ಮಾವೋವಾದಿಗಳಿಗೆ ಮನವರಿಕೆ ಮಾಡುತ್ತಿದ್ದೇವೆಬಂಜಗೆರೆ ಜಯಪ್ರಕಾಶ್, ಸದಸ್ಯ ನಕ್ಸಲ್ ಶರಣಾಗತಿ ಮತ್ತು ಪುನರ್ವಸತಿ ಸಮಿತಿ
ಪ್ರಕರಣಗಳು ತ್ವರಿತವಾಗಿ ಇತ್ಯರ್ಥವಾದಾಗ ಮಾತ್ರ ನಕ್ಸಲರಿಗೆ ನೀಡುವ ನೆರವು ಪ್ರಯೋಜನವಾಗುತ್ತದೆ. ಇಲ್ಲದಿದ್ದರೆ ಪ್ರಯತ್ನ ಫಲ ನೀಡದುಕೆ.ಪಿ. ಶ್ರೀಪಾಲ್, ಸದಸ್ಯ ನಕ್ಸಲ್ ಶರಣಾಗತಿ ಮತ್ತು ಪುನರ್ವಸತಿ ಸಮಿತಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.