ADVERTISEMENT

ಮುಡಾ ಪ್ರಕರಣ |CM ವಿರುದ್ಧ ಯಾವ ಕಾಯ್ದೆ ಅಡಿ ತನಿಖೆ ನಡೆಯಬೇಕು: ಕೋರ್ಟ್ ಜಿಜ್ಞಾಸೆ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2024, 6:54 IST
Last Updated 25 ಸೆಪ್ಟೆಂಬರ್ 2024, 6:54 IST
<div class="paragraphs"><p>ಮುಖ್ಯಮಂತ್ರಿ ಸಿದ್ದರಾಮಯ್ಯ </p></div>

ಮುಖ್ಯಮಂತ್ರಿ ಸಿದ್ದರಾಮಯ್ಯ

   

– ಪ್ರಜಾವಾಣಿ ಚಿತ್ರ

ಬೆಂಗಳೂರು: ‘ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ನಿವೇಶನ ಹಂಚಿಕೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಕ್ರಿಮಿನಲ್‌ ಪ್ರಕರಣದ ತನಿಖೆಯನ್ನು ಭಾರತೀಯ ದಂಡ ಸಂಹಿತೆ (ಐಪಿಸಿ) ಕಾಯ್ದೆ ಅಡಿಯಲ್ಲಿ ನಡೆಸಬೇಕೊ ಅಥವಾ ಭಾರತೀಯ ನ್ಯಾಯ ಸುರಕ್ಷಾ ಸಂಹಿತ (ಬಿಎನ್ಎಸ್ಎಸ್) ಕಾಯ್ದೆ ಅಡಿಯಲ್ಲಿ ನಡೆಸಬೇಕೊ’ ಎಂಬ ಜಿಜ್ಞಾಸೆಯನ್ನು ಜನಪ್ರತಿನಿಧಿಗಳ ವಿಶೇಷ ಕೋರ್ಟ್ ವ್ಯಕ್ತಪಡಿಸಿದೆ.

ADVERTISEMENT

‘ಹೈಕೋರ್ಟ್ ತೀರ್ಪಿನ ಅನುಸಾರ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ದಾಖಲಿಸಿರುವ ಖಾಸಗಿ ದೂರಿನ ಉಲ್ಲೇಖಿತ ಅಪರಾಧಿಕ ಕಲಂಗಳನ್ನು ಪರಿಗಣಿಸಿ ಆರೋಪಿ ವಿರುದ್ಧ ತನಿಖೆಗೆ ನಿರ್ದೇಶಿಸಬೇಕು’ ಎಂದು ಕೋರಿ ಫಿರ್ಯಾದುದಾರ ಸ್ನೇಹಪ್ರಿಯ ಕೃಷ್ಣ ಅವರ ಪರ ಹಿರಿಯ ವಕೀಲೆ ಲಕ್ಷ್ಮಿ ಅಯ್ಯಂಗಾರ್ ಬುಧವಾರ, ‘ಶಾಸಕರು-ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆ’ಯ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ ಗಜಾನನ ಭಟ್ ಅವರಿಗೆ ಮನವಿ ಮಾಡಿದರು.

ಈ ಸಂಬಂಧ ಲಕ್ಷ್ಮಿ ಅಯ್ಯಂಗಾರ್ ನಿನ್ನೆಯಷ್ಟೇ ಸಿದ್ದರಾಮಯ್ಯ ಅರ್ಜಿಯನ್ನು ವಜಾಗೊಳಿಸಿರುವ ಮತ್ತು ತನಿಖೆಗೆ ಅಸ್ತು ಎಂದಿರುವ ಹೈಕೋರ್ಟ್ ತೀರ್ಪನ್ನು ನ್ಯಾಯಾಧೀಶರಿಗೆ ನೀಡಿದರು.

ಕೆಲ ಕಾಲ ಅವರ ವಾದವನ್ನು ಕೆಲಕಾಲ ಆಲಿಸಿದ ನ್ಯಾಯಾಧೀಶರು, ‘ಈ ಖಾಸಗಿ ದೂರನ್ನು ತನಿಖೆಗೆ ಯಾವ ಕಾಯ್ದೆ ಅಡಿಯಲ್ಲಿ ಪರಿಗಣಿಸಿ ಆದೇಶ ಮಾಡಬೇಕು ಎಂಬ ಜಿಜ್ಞಾಸೆ ಇದೆ’ ಎಂಬ ಮೌಖಿಕ ಅಭಿಪ್ರಾಯ ವ್ಯಕ್ತಪಡಿಸಿ ವಿಚಾರಣೆಯನ್ನು ಕೆಲ ಸಮಯದವೆರೆಗೆ ಮುಂದೂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.