ADVERTISEMENT

ಹುಬ್ಬಳ್ಳಿ | ಶ್ರಮಿಕ್ ವಿಶೇಷ ರೈಲು ಹೊರಡಲು ಕ್ಷಣಗಣನೆ

​ಪ್ರಜಾವಾಣಿ ವಾರ್ತೆ
Published 13 ಮೇ 2020, 6:25 IST
Last Updated 13 ಮೇ 2020, 6:25 IST
ಶಾಸಕ ಅರವಿಂದ ಬೆಲ್ಲದ ಪ್ರಯಾಣಿಕರಿಗೆ ಶುಭ ಕೋರಿದರು -ಪ್ರಜಾವಾಣಿ ಚಿತ್ರ
ಶಾಸಕ ಅರವಿಂದ ಬೆಲ್ಲದ ಪ್ರಯಾಣಿಕರಿಗೆ ಶುಭ ಕೋರಿದರು -ಪ್ರಜಾವಾಣಿ ಚಿತ್ರ   

ಹುಬ್ಬಳ್ಳಿ: ಕಾರ್ಮಿಕರನ್ನು ಹೊತ್ತು ಹುಬ್ಬಳ್ಳಿ ರೈಲು ನಿಲ್ದಾಣದಿಂದ ರಾಜಸ್ಥಾನದ ಜೋಧಪುರಕ್ಕೆ ಮಧ್ಯಾಹ್ನ 12ಕ್ಕೆ ಶ್ರಮಿಕ್ ವಿಶೇಷ ರೈಲು ಹೊರಡಲು ಕ್ಷಣಗಣನೆ ಆರಂಭವಾಗಿದೆ.

ಸೇವಾ ಸಿಂಧು ತಂತ್ರಾಂಶದಲ್ಲಿ ನೋಂದಾಯಿತ ರಾಜಸ್ಥಾನ ಮೂಲದ ಕಾರ್ಮಿಕರು, ನಿಲ್ದಾಣದ ಬಳಿ ತೆರೆದಿರುವ 15 ಕೌಂಟರ್‌ಗಳಲ್ಲಿ 1452 ಮಂದಿ ತಮ್ಮ ಹೆಸರನ್ನು ಪ್ರಯಾಣಕ್ಕೆ ನೋಂದಣಿ ಮಾಡಿಕೊಂಡರು.

ಪ್ರಯಾಣಿಕರಿಗೆ ಆರೋಗ್ಯ ತಪಾಸಣೆ, ಥರ್ಮಲ್ ಸ್ಕ್ಯಾನಿಂಗ್ ಮಾಡಲಾಯಿತು. ಜಿಲ್ಲಾಡಳಿತದಿಂದ ಎಲ್ಲರಿಗೂ ಬೆಳಿಗ್ಗೆ ಉಪಾಹಾರ ಮತ್ತು ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು.

ನಿಲ್ದಾಣಕ್ಕೆ ಜಿಲ್ಲಾಧಿಕಾರಿ ದೀಪಾ ಚೋಳನ್, ಶಾಸಕ ಅರವಿಂದ ಬೆಲ್ಲದ, ವಿಧಾನ ಪರಿಷತ್ ಸದಸ್ಯ ಪ್ರದೀಪ ಶೆಟ್ಟರ ಭೇಟಿ ನೀಡಿ, ಪ್ರಯಾಣಿಕರಿಗೆ ಶುಭ ಕೋರಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.