ಬೀದರ್: ರಾಜ್ಯ ವಿಧಾನಸಭೆ ಚುನಾವಣೆ ಪ್ರಯುಕ್ತ ರಾಜಧಾನಿ ಬೆಂಗಳೂರಿನಿಂದ ಬೀದರ್‌ಗೆ ವಿಶೇಷ ರೈಲಿನ ವ್ಯವಸ್ಥೆ ಮಾಡಲಾಗಿದೆ ಎಂದು ಕೇಂದ್ರದ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ತಿಳಿಸಿದ್ದಾರೆ.
ರೈಲು ಸಂಖ್ಯೆ 06597 ಮೇ 9ರಂದು ಸಂಜೆ 5ಕ್ಕೆ ಬೆಂಗಳೂರಿನಿಂದ ಹೊರಟು ಯಶವಂತಪುರ, ಯಲಹಂಕ, ಧರ್ಮಾವರಂ ಜಂಕ್ಷನ್, ರಾಯಚೂರ, ಯಾದಗಿರಿ, ವಾಡಿ ಮತ್ತು ಕಲಬುರಗಿ ಮಾರ್ಗವಾಗಿ ಮೇ 10 ರಂದು ಬೆಳಿಗ್ಗೆ 6.09ಕ್ಕೆ ಹುಮನಾಬಾದ್, ಬೆಳಿಗ್ಗೆ 6.30ಕ್ಕೆ ಹಳ್ಳಿಖೇಡ (ಬಿ) ಹಾಗೂ ಬೆಳಿಗ್ಗೆ 7.20ಕ್ಕೆ ಬೀದರ್‌ಗೆ ತಲುಪಲಿದೆ ಎಂದು ಅವರು ಹೇಳಿದ್ದಾರೆ.
ಮೇ 10 ರಂದು ರಾತ್ರಿ 8ಕ್ಕೆ ರೈಲು ಸಂಖ್ಯೆ 06598 ಬೀದರ್‌ನಿಂದ ಹೊರಡಲಿದೆ. ರಾತ್ರಿ 8.55ಕ್ಕೆ ಹಳ್ಳಿಖೇಡ(ಬಿ), ರಾತ್ರಿ 9.15ಕ್ಕೆ ಹುಮನಾಬಾದ್‍ಗೆ ತಲುಪಲಿದೆ. ಬಂದ ಮಾರ್ಗವಾಗಿಯೇ ಮೇ 11 ರಂದು ಬೆಳಿಗ್ಗೆ 10ಕ್ಕೆ ಬೆಂಗಳೂರಿಗೆ ತಲುಪಲಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.