ADVERTISEMENT

ಶಾಲಾ ಮಕ್ಕಳಿಗೆ ಕ್ರೀಡಾ ತರಬೇತಿ: ಬ್ರಿಟಿಷ್‌ ಕೌನ್ಸಿಲ್‌ – ಶಿಕ್ಷಣ ಇಲಾಖೆ ಒಪ್ಪಂದ

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2024, 15:34 IST
Last Updated 23 ಅಕ್ಟೋಬರ್ 2024, 15:34 IST
ಸರ್ಕಾರಿ ಶಾಲೆಗಳ ದೈಹಿಕ ಶಿಕ್ಷಣ ಶಿಕ್ಷಕರಿಗೆ ಕ್ರೀಡಾ ತರಬೇತಿ ನೀಡಲು ಶಾಲಾ ಶಿಕ್ಷಣ ಇಲಾಖೆ ಆಯುಕ್ತ ಕೆ.ವಿ. ತ್ರಿಲೋಕ್‌ಚಂದ್ರ ಹಾಗೂ ಬ್ರಿಟಿಷ್‌ ಕೌನ್ಸಿಲ್‌ನ ದಕ್ಷಿಣ ಭಾರತ ನಿರ್ದೇಶಕಿ ಜನಕ ಪುಷ್ಪನಾಥನ್‌ ಬುಧವಾರ ಒಪ್ಪಂದ ಮಾಡಿಕೊಂಡರು. ಕೂರ್ಮರಾವ್, ಮಧು ಬಂಗಾರಪ್ಪ, ಜೇಮ್ಸ್‌ ಗಾಡ್‌ಬೆರ್, ರಿತೇಶ್‌ಕುಮಾರ್‌ ಸಿಂಗ್‌ ಉಪಸ್ಥಿತರಿದ್ದರು.
ಸರ್ಕಾರಿ ಶಾಲೆಗಳ ದೈಹಿಕ ಶಿಕ್ಷಣ ಶಿಕ್ಷಕರಿಗೆ ಕ್ರೀಡಾ ತರಬೇತಿ ನೀಡಲು ಶಾಲಾ ಶಿಕ್ಷಣ ಇಲಾಖೆ ಆಯುಕ್ತ ಕೆ.ವಿ. ತ್ರಿಲೋಕ್‌ಚಂದ್ರ ಹಾಗೂ ಬ್ರಿಟಿಷ್‌ ಕೌನ್ಸಿಲ್‌ನ ದಕ್ಷಿಣ ಭಾರತ ನಿರ್ದೇಶಕಿ ಜನಕ ಪುಷ್ಪನಾಥನ್‌ ಬುಧವಾರ ಒಪ್ಪಂದ ಮಾಡಿಕೊಂಡರು. ಕೂರ್ಮರಾವ್, ಮಧು ಬಂಗಾರಪ್ಪ, ಜೇಮ್ಸ್‌ ಗಾಡ್‌ಬೆರ್, ರಿತೇಶ್‌ಕುಮಾರ್‌ ಸಿಂಗ್‌ ಉಪಸ್ಥಿತರಿದ್ದರು.   

ಬೆಂಗಳೂರು: ಸರ್ಕಾರಿ ಶಾಲೆಗಳ ದೈಹಿಕ ಶಿಕ್ಷಣ ಶಿಕ್ಷಕರಿಗೆ ವಿವಿಧ ಕ್ರೀಡೆಗಳ ಕುರಿತು ಇನ್ನು ಮುಂದೆ ‘ಇಂಗ್ಲಿಷ್‌  ಪ್ರೀಮಿಯರ್‌ ಲೀಗ್‌ ಸ್ಪೋರ್ಟ್ಸ್‌’ನಿಂದ ತರಬೇತಿ ದೊರೆಯಲಿದೆ.

ಸರ್ಕಾರಿ ಶಾಲೆಯ ಮಕ್ಕಳ ಕ್ರೀಡಾ ಸಾಮರ್ಥ್ಯ ವೃದ್ಧಿಸಲು, ಭವಿಷ್ಯದಲ್ಲಿ ಅವರನ್ನು ಉತ್ತಮ  ಕ್ರೀಡಾಪಟುಗಳಾಗಿ ರೂಪಿಸುವಲ್ಲಿ ಸಹಕಾರ ಪಡೆಯಲು ‘ಆಪರೇಷನಲ್‌ ಅಲಯನ್ಸ್‌’ ಒಪ್ಪಂದಕ್ಕೆ ಶಾಲಾ ಶಿಕ್ಷಣ ಇಲಾಖೆ ಆಯುಕ್ತ ಕೆ.ವಿ. ತ್ರಿಲೋಕ್‌ಚಂದ್ರ ಹಾಗೂ ಬ್ರಿಟಿಷ್‌ ಕೌನ್ಸಿಲ್‌ನ ದಕ್ಷಿಣ ಭಾರತ ನಿರ್ದೇಶಕಿ ಜನಕ ಪುಷ್ಪನಾಥನ್‌ ಬುಧವಾರ ಸಹಿ ಹಾಕಿದರು.

ಒಪ್ಪಂದದ ನಂತರ ‘ಪ್ರೀಮಿಯರ್‌ ಲೀಗ್‌ ಪ್ರೈಮರಿ ಸ್ಟಾರ್ಸ್‌ ಪ್ರಾಜೆಕ್ಟ್‌’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಮೊದಲ ಹಂತದಲ್ಲಿ ಹಿರಿಯ ಪ್ರಾಥಮಿಕ ಶಾಲೆಗಳ ದೈಹಿಕ ಶಿಕ್ಷಕರಿಗೆ ಕ್ರೀಡಾ ಮತ್ತು ಜೀವನ ಕೌಶಲ ತರಬೇತಿ ನೀಡಲಾಗುತ್ತದೆ ಎಂದರು. 

ADVERTISEMENT

ಕೊಕ್ಕೊ, ಕಬಡ್ಡಿ ಮತ್ತಿತರ ಪ್ರಾಚೀನ ಕ್ರೀಡೆಗಳು ಸಹ ಪುಟ್ಬಾಲ್‌ ಆಟದಂತೆ ಬೆಳೆಯಬೇಕು. ಪ್ರಾಚೀನ ಕ್ರೀಡೆಗಳನ್ನು ಉಳಿಸಬೇಕು. ಶಾಲಾ ಹಂತದಲ್ಲಿ ಮಕ್ಕಳಿಗೆ ಈ ಕ್ರೀಡೆಗಳನ್ನು ಅಭ್ಯಾಸ ಮಾಡಿಸಲಾಗುತ್ತದೆ. ಆರು ವರ್ಷ ವಯಸ್ಸಿನಿಂದಲೇ ತರಬೇತಿ ನೀಡಲಾಗುತ್ತದೆ. ಶಾಲಾ ಶಿಕ್ಷಕರಿಗೂ ತರಬೇತಿ ನೀಡಲು ಸೂಚಿಸಲಾಗುವುದು ಎಂದು ಮಾಹಿತಿ ನೀಡಿದರು.

ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ರಿತೇಶ್‌ಕುಮಾರ್‌ ಸಿಂಗ್, ಬ್ರಿಟಿಷ್‌ ಡೆಪ್ಯುಟಿ ಹೈಕಮಿಷನ್‌ನ  ಕಾರ್ಯಾನುಷ್ಠಾನ ವಿಭಾಗದ ಉಪ ಮುಖ್ಯಸ್ಥ ಜೇಮ್ಸ್ ಗಾಡ್‌ಬೆರ್, ಸಮಗ್ರ ಶಿಕ್ಷಣ ಕರ್ನಾಟಕದ ಯೋಜನಾ ನಿರ್ದೇಶಕ ಎಂ. ಕೂರ್ಮರಾವ್  ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.