ADVERTISEMENT

ಎಸ್‌ಎಸ್‌ಎಲ್‌ಸಿ ಪರೀಕ್ಷೆ ನೋಂದಣಿ ದಿನಾಂಕ ವಿಸ್ತರಣೆ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2024, 14:18 IST
Last Updated 15 ನವೆಂಬರ್ 2024, 14:18 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಬೆಂಗಳೂರು: ಈ ಶೈಕ್ಷಣಿಕ ವರ್ಷದ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯು 2025ರ ಮಾರ್ಚ್‌ನಲ್ಲಿ ನಡೆಯಲಿದ್ದು, ಪರೀಕ್ಷೆಗೆ ವಿದ್ಯಾರ್ಥಿಗಳು ನೋಂದಾಯಿಸಿಕೊಳ್ಳಲು ಇದ್ದ ಕೊನೆಯ ದಿನಾಂಕವನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ವಿಸ್ತರಿಸಿದೆ.

ಸರ್ಕಾರಿ, ಅನುದಾನಿತ, ಅನುದಾನರಹಿತ ಶಾಲೆಗಳಿಂದ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು, ಖಾಸಗಿ ಅಭ್ಯರ್ಥಿಗಳು ಮತ್ತು ಪುನರಾವರ್ತಿತ ಅಭ್ಯರ್ಥಿಗಳ ಮಾಹಿತಿಯನ್ನು ಆನ್‌ಲೈನ್‌ ಮೂಲಕ ನೋಂದಾಯಿಸಿಲು ಈ ಮೊದಲು ನವೆಂಬರ್ 11ರ ಗಡವು ನಿಗದಿ ಮಾಡಲಾಗಿತ್ತು. ಈಗ ಮತ್ತೆ ನೋಂದಣಿಗೆ ಚಾಲನೆ ನೀಡಿದ್ದು ಇದೇ 20ರವರೆಗೆ ನೋಂದಣಿ ಮಾಡಿಕೊಳ್ಳಹುದಾಗಿದೆ.

ADVERTISEMENT

ಜತೆಗೆ ಚಲನ್‌ ಮುದ್ರಣ, ಶುಲ್ಕ ಪಾವತಿ ದಿನಾಂಕಗಳನ್ನೂ ವಿಸ್ತರಿಸಲಾಗಿದೆ. ಶಾಲಾ ಮುಖ್ಯೋಪಾಧ್ಯಾಯರು ಇದನ್ನು ಪೋಷಕರ ಗಮನಕ್ಕೆ ತಂದು, ವಿದ್ಯಾರ್ಥಿಗಳ ನೋಂದಣಿಯನ್ನು ನಡೆಸಬೇಕು ಎಂದು ಮಂಡಳಿಯ ಪ್ರಕಟಣೆ ತಿಳಿಸಿದೆ.

ಪರಿಷ್ಕೃತ ದಿನಾಂಕ

ವಿವರ; ಈ ಮೊದಲು ನಿಗದಿಯಾಗಿದ್ದ ದಿನಾಂಕ; ವಿಸ್ತರಣೆ ಮಾಡಿದ ದಿನಾಂಕ

ಮಂಡಳಿಯ ಜಾಲತಾಣದಲ್ಲಿ ಮಾಹಿತಿ ಅಪ್‌ಲೋಡ್‌;11–11–24;20–11–24

ಚಲನ್‌ ಡೌನ್‌ಲೋಡ್‌;12–11–24ರಿಂದ 16–11–24;21–11–24ರಿಂದ 26–11–24

ಬ್ಯಾಂಕ್‌ನಲ್ಲಿ ಶುಲ್ಕ ಪಾವತಿ;12–11–24ರಿಂದ 20–11–24;21–11–24ರಿಂದ 30–11–24

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.