ಬೆಂಗಳೂರು: ಜಲಮೂಲಗಳಿಂದ ಕೈಗಾರಿಕೆಗಳು ಬಳಸುವ ನೀರಿನ ಶುಲ್ಕವನ್ನು ಪ್ರತಿ ದಶಲಕ್ಷ ಕ್ಯುಬಿಕ್ ಅಡಿಗೆ (ಎಂಸಿಎಫ್‌ಟಿ) ಈಗ ಇದ್ದ ₹50 ಸಾವಿರ ಶುಲ್ಕವನ್ನು ₹3 ಲಕ್ಷಕ್ಕೆ ಏರಿಸಲು ಸರ್ಕಾರ ನಿರ್ಧರಿಸಿದೆ.
ಗುರುವಾರ ನಡೆದ ಸಚಿವ ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಸಚಿವ ಎಚ್.ಕೆ. ಪಾಟೀಲ ಅವರು, ನದಿ, ಕೆರೆ, ಜಲಾಶಯಗಳಿಂದ ಕೈಗಾರಿಕೆಗಳು ಬಳಸುವ ನೀರಿಗೆ ಈ ಶುಲ್ಕ ಅನ್ವಯವಾಗಲಿದೆ ಎಂದರು.
ಶುಲ್ಕದ ಪ್ರಮಾಣದ ತುಂಬಾ ಕಡಿಮೆ ಇತ್ತು. ನೀರಿನ ನಿರ್ವಹಣೆಯ ವೆಚ್ಚ ಹೆಚ್ಚಾಗಿರುವ ಕಾರಣಕ್ಕ ಈ ಮೊತ್ತವನ್ನು ಹೆಚ್ಚಿಸುವ ತೀರ್ಮಾನ ಕೈಗೊಳ್ಳಲಾಯಿತು ಎಂದೂ ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.