ADVERTISEMENT

ದೇವೇಗೌಡರ ಕುಟುಂಬಕ್ಕೆ ತುಮಕೂರು ಜನರ ಶಾಪ ತಟ್ಟಿದೆ: ಸಂಸದ ಬಸವರಾಜು 

​ಪ್ರಜಾವಾಣಿ ವಾರ್ತೆ
Published 24 ಜುಲೈ 2019, 5:18 IST
Last Updated 24 ಜುಲೈ 2019, 5:18 IST
ಜಿ.ಎಸ್.‌ಬಸವರಾಜು ಹಾಗೂ ಎಚ್‌.ಡಿ.ದೇವೇಗೌಡ
ಜಿ.ಎಸ್.‌ಬಸವರಾಜು ಹಾಗೂ ಎಚ್‌.ಡಿ.ದೇವೇಗೌಡ   

ನವದೆಹಲಿ: ಕುಡಿಯಲು ನೀರು ಕೊಡದ ದೇವೇಗೌಡರ ಕುಟುಂಬಕ್ಕೆ ತುಮಕೂರಿನ ಜನ ನೀಡಿದ ಶಾಪದಿಂದಲೇ ಸಮ್ಮಿಶ್ರ ಸರ್ಕಾರ ಪತನಗೊಂಡಿದೆ ಎಂದು ಸಂಸದ ಜಿ.ಎಸ್.‌ಬಸವರಾಜು ಆರೋಪಿಸಿದರು.

ಅನೇಕ ವರ್ಷಗಳಿಂದ ನೀರಾವರಿಗೆ ಹಾಗೂ ಕುಡಿಯುವುದಕ್ಕೆ ನೀರಿಲ್ಲದೆ‌ ಪರದಾಡುತ್ತಿರುವ ತುಮಕೂರಿನ ಜನರ ಆಕ್ರಂದನದ‌ ಫಲವೇ ಜೆಡಿಎಸ್ ಹಾಗೂ ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ‌ಪತನಕ್ಕೆ ಕಾರಣವಾಗಿದೆ ಎಂದರು.

ಹೊಸ ಸರ್ಕಾರವು ₹ 1 ಲಕ್ಷ ಕೋಟಿ ಮೀಸಲಿಡುವ‌ ಮೂಲಕ ತುಮಕೂರು, ಕೋಲಾರ, ಚಿತ್ರದುರ್ಗ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜನತೆಗೆ ನೀರಾವರಿ ಸೌಲಭ್ಯ ಕಲ್ಪಿಸಬೇಕು ಎಂದು ಅವರು ಮನವಿ ಮಾಡಿದರು.

ಇದೇ ವೇಳೆ ಚಿತ್ರದುರ್ಗ ಸಂಸದ ನಾರಾಯಣ ಸ್ವಾಮಿ ಈ ಸಂದರ್ಭ ಹಾಜರಿದ್ದರು.

‘ನೂತನ ಸರ್ಕಾರಕ್ಕೆ ಸ್ವಾಗತ’
ಕರ್ನಾಟಕದಲ್ಲಿ ಮೈತ್ರಿ ಸರ್ಕಾರ ಪತನವಾಗಿದೆ. ಜನತೆ ನಮಗೆ ತೀರ್ಪು ಕೊಟ್ಟಿರುವುದು ಸಾಬೀತಾಗಿದೆ. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಶೀಘ್ರವೇ ಅಧಿಕಾರಕ್ಕೆ ಬರಲಿದೆ ಹಾಗಾಗಿ ನೂತನ ಸರ್ಕಾರಕ್ಕೆ ಸ್ವಾಗತ ಎಂದು ಹೇಳಿದ್ದಾರೆ.

ರಾಜ್ಯದಲ್ಲಿ ಮೈತ್ರಿ ಸರ್ಕಾರ ಅಧಿಕಾರದಲ್ಲಿದ್ದ 14 ತಿಂಗಳು ನರಕವನ್ನು ನೋಡಿದ್ದೇವೆ ಯಾವುದೇ ಅಭಿವೃದ್ಧಿ ಕಾರ್ಯಗಳು ಇಲ್ಲದೆ ಇರುವಂತ ಪರಿಸ್ಥಿತಿಯನ್ನು ಕಂಡಿದ್ದೇವೆ. ಅತೃಪ್ತ ಶಾಸಕರು ಪಕ್ಷ ಬಿಟ್ಟು ರಾಜೀನಾಮೆ ಕೊಟ್ಟಿದ್ದಾರೆ ಇದಕ್ಕೆ ಸಾಕ್ಷಿಯಾಗಿದೆ ಎಂದರು.

ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಂಯೋಜನೆಯಿಂದ ನೀರಾವರಿ, ರಸ್ತೆ ಸಾರಿಗೆ ,ಶಿಕ್ಷಣಕ್ಕೆ ಆದ್ಯತೆ, ಸೋಲಾರ್, ಪವನ ಶಕ್ತಿಯ ಮೂಲಕ ಪರಿಸರಕ್ಕೆ ಹಾನಿಯುಂಟು ಮಾಡದ ರೀತಿಯಲ್ಲಿ ಯೋಜನೆಗಳನ್ನು ಜಾರಿಗೆ ತರುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು.

‘ಪ್ರಜಾವಾಣಿ’ ಸುದ್ದಿ, ಬರಹಗಳಲ್ಲಿ ರಾಜಕೀಯ ಬೆಳವಣಿಗೆಗಳ ಸಮಗ್ರ ನೋಟ...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.