ADVERTISEMENT

ರೈತರಿಗೆ ₹2 ಲಕ್ಷ ಪರಿಹಾರ ಇನ್ನೂ ಕೊಟ್ಟಿಲ್ಲ: ಆರ್‌. ಅಶೋಕ ಆರೋಪ

​ಪ್ರಜಾವಾಣಿ ವಾರ್ತೆ
Published 20 ಮೇ 2024, 9:47 IST
Last Updated 20 ಮೇ 2024, 9:47 IST
<div class="paragraphs"><p> ಆರ್‌. ಅಶೋಕ</p></div>

ಆರ್‌. ಅಶೋಕ

   

ಬೆಂಗಳೂರು: ‘ಬರ ಪರಿಹಾರದ ಹೆಸರಿನಲ್ಲಿ ₹300, ₹500, ₹600 ಈ ರೀತಿ ಪರಿಹಾರ ಕೊಟ್ಟಿದ್ದಾರೆ. ಈ ಸರ್ಕಾರಕ್ಕೆ ಮಾನ ಮರ್ಯಾದೇ ಬೇಡ್ವಾ? ರೈತರಿಗೆ ಬೆಲೆ ಇಲ್ವಾ? ಇನ್ನೂ ₹2 ಲಕ್ಷ ರೈತರಿಗೆ ಪರಿಹಾರ ಕೊಟ್ಟಿಲ್ಲ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌.ಅಶೋಕ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

ಸರ್ಕಾರಕ್ಕೆ ಒಂದು ವರ್ಷ ತುಂಬಿದ ಹಿನ್ನೆಲೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕೇಂದ್ರ ಸರ್ಕಾರ ಹಿಂದೆಂದೂ ಕೊಡದಷ್ಟು ಪ್ರಮಾಣದಲ್ಲಿ ಪರಿಹಾರ ನೀಡಿದೆ. ರಾಜ್ಯ ಸರ್ಕಾರ ತನ್ನ ಪಾಲಿನ ಹಣವನ್ನು ಎಷ್ಟು ನೀಡಿದೆ? ಇಲ್ಲಿರುವವರು ಕರ್ನಾಟಕದ ರೈತರೇ ಹೊರತು ಗುಜರಾತ್‌, ಪಶ್ಚಿಮ ಬಂಗಾಳದ ರೈತರಲ್ಲ’ ಎಂದರು.

ADVERTISEMENT

‘ನಿಮ್ಮ ಯೋಗ್ಯತೆಗೆ ಬೆಂಕಿ ಹಾಕ, ಬೆಳೆ ಬೇಡಿ ಎಂದು ರೈತರಿಗೆ ನೀವೇ ಹೇಳಿ, ಈಗ ಬೆಳೆ ಬೆಳೆದಿಲ್ಲ ಎಂದು ರೈತರಿಗೆ ಪರಿಹಾರ ನಿರಾಕರಿಸುತ್ತಿದ್ದೀರಿ. ರೈತರು ತಮಗೇನು ನಷ್ಟ ಎಂಬದು ಈ ಸರ್ಕಾರದ ಧೋರಣೆ’ ಎಂದು ಹರಿಹಾಯ್ದರು.

‘ರಾಜ್ಯದಲ್ಲಿ ಶಿಕ್ಷಣ ಸಚಿವರಿಗೇ ಕನ್ನಡ ಬರುವುದಿಲ್ಲ. ಒಂದು ಕಾಲಕ್ಕೆ ಶಿಕ್ಷಣಕ್ಕೆ ಕರ್ನಾಟಕ ಹೆಸರಾಗಿತ್ತು. ಈಗ ಅಧೋಗತಿ ತಲುಪಿದೆ. ಮಾರ್ಕ್ಸ್‌ಗೂ ಬರ ಬಂದಿದೆ. ಈ ಬಾರಿ ಎಸ್‌ಎಸ್‌ಎಲ್‌ಸಿಯಲ್ಲಿ 20 ಕೃಪಾಂಕ ನೀಡಿದ್ದಾರೆ. ಮುಂದಿನ ವರ್ಷ 100 ಕೃಪಾಂಕ ಕೊಟ್ಟರೂ ಅಚ್ಚರಿ ಇಲ್ಲ. 100 ಮಾರ್ಕ್ಸ್‌ ಕೂಡಾ ಫ್ರೀ ಆಗಿ ನೀಡಬಹುದು. ಕಷ್ಟಪಟ್ಟು ಓದುವ ಮಕ್ಕಳ ಕಥೆ ಏನೂ? ಸಿಇಟಿ ವ್ಯವಸ್ಥೆಯನ್ನೂ ಹಾಳು ಮಾಡಿದ್ದಾರೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.