ADVERTISEMENT

ವಿದ್ಯುತ್ ದರ ಏರಿಕೆ ವಿರುದ್ಧ BJP ಪ್ರತಿಭಟನೆ:ಶಿವಮೊಗ್ಗ MESCOM ಕಚೇರಿಗೆ ಕಲ್ಲು ತೂರಾಟ

ಶಾಸಕ ಎಸ್.ಎನ್‌.ಚನ್ನಬಸಪ್ಪ ನೇತೃತ್ವದಲ್ಲಿ ಬಿಜೆಪಿ ನಡೆಸಿದ ಪ್ರತಿಭಟನೆ ಹಿಂಸೆಗೆ ತಿರುಗಿದೆ

​ಪ್ರಜಾವಾಣಿ ವಾರ್ತೆ
Published 14 ಜೂನ್ 2023, 7:45 IST
Last Updated 14 ಜೂನ್ 2023, 7:45 IST
ಕಚೇರಿಗೆ ಕಲ್ಲು ತೂರಾಟ
ಕಚೇರಿಗೆ ಕಲ್ಲು ತೂರಾಟ   

ಶಿವಮೊಗ್ಗ: ವಿದ್ಯುತ್ ಬಿಲ್ ಏರಿಕೆ ವಿರೋಧಿಸಿ ಬುಧವಾರ ಇಲ್ಲಿ ಶಾಸಕ ಎಸ್.ಎನ್‌.ಚನ್ನಬಸಪ್ಪ ನೇತೃತ್ವದಲ್ಲಿ ಬಿಜೆಪಿ ನಡೆಸಿದ ಪ್ರತಿಭಟನೆ ಹಿಂಸೆಗೆ ತಿರುಗಿದೆ. ಕಿಡಿಗೇಡಿಗಳು ಮೆಸ್ಕಾಂ ಕಚೇರಿಗೆ ಕಲ್ಲು ತೂರಿ ಕಿಟಕಿ ಗಾಜು ಒಡೆದು ಹಾಕಿದ್ದಾರೆ.

ವಿದ್ಯುತ್ ದರ ಏರಿಕೆಯ ವಿರುದ್ಧ ಬಿಜೆಪಿಯಿಂದ ಇಲ್ಲಿನ ರೈಲು ನಿಲ್ದಾಣದ ಬಳಿಯ ಮೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಯಿರು.

ಈ ವೇಳೆ ಕಾಂಗ್ರೆಸ್ ಪಕ್ಷ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಘೋಷಣೆ ಕೂಗಿದ ಪ್ರತಿಭಟನಾಕಾರರು, ಪುಕ್ಕಟ್ಟೆ ಭಾಗ್ಯ ಕೊಡುತ್ತೀನಿ ಎಂದು ಅಧಿಕಾರಕ್ಕೆ ಬಂದಿದ್ದು, ಹಿಂಬಾಗಿಲ ಮೂಲಕ ದರ ಏರಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಪ್ರತಿಭಟನೆ ವೇಳೆ ಬಿಜೆಪಿ ಮುಖಂಡರ ಭಾಷಣ ಮುಗಿಯುತ್ತಿದ್ದಂತೆಯೇ ಮೆಸ್ಕಾಂ ಕಚೇರಿಗೆ ಬೀಗ ಹಾಕಲು ಮುಂದಾದ ಪ್ರತಿಭಟನಾಕಾರರು ಮೆಸ್ಕಾಂ ಪ್ರವೇಶ ದ್ವಾರಕ್ಕೆ ನುಗ್ಗಿದರು. ಈ ವೇಳೆ ಪೊಲೀಸರು ಅವರನ್ನು ತಡೆದರು. ಈ ವೇಳೆ ನಡೆದ ತಳ್ಳಾಟದ ವೇಳೆ ಕೆಲವರು ಮೆಸ್ಕಾಂ ಕಚೇರಿಗೆ ಕಲ್ಕು ತೂರಿದ್ದಾರೆ. ಆಗ ಮೆಸ್ಕಾಂ ಕಚೇರಿಯ ಕಿಟಕಿ ಗಾಜು ಪುಡಿಯಾಗಿದೆ.

ಹೆಚ್ಚಿನ ಸಂಖ್ಯೆಯ ಪೊಲೀಸರು ಸ್ಥಳಕ್ಕೆ ಬಂದು ಪರಿಸ್ಥಿತಿ ನಿಯಂತ್ರಿಸಿದರು.

ಕಲ್ಕು ತೂರಾಟಕ್ಕೆ ಸಂಬಂಧಿಸಿದಂತೆ ಮುರುಗೇಶ ಎಂಬ ವ್ಯಕ್ತಿಯನ್ನು ವಶಕ್ಕೆ ಪಡೆದ ಪೊಲೀಸರು ಕರೆದೊಯ್ದರು.

ಬಿಜೆಪಿ ನಗರ ಘಟಕದ ಅಧ್ಯಕ್ಷ ಜಗದೀಶ್, ವಿಧಾನ ಪರಿಷತ್ ಸದಸ್ಯರಾದ ಎಸ್. ರುದ್ರೇಗೌಡ, ಡಿ.ಎಸ್.ಅರುಣ್, ಮೇಯರ್ ಶಿವಕುಮಾರ್, ಬಿಜೆಪಿ ಮುಖಂಡೆಅದ ಸಂತೋಷ್ ಬಳ್ಳೇಕೆರೆ, ಎಸ್. ದತ್ತಾತ್ರಿ, ಮಹಾನಗರ ಪಾಲಿಕೆ ಸದಸ್ಯರಾದ ಸುವರ್ಣ ಶಂಕರ್, ಸುರೇಖಾ ಮುರುಳೀಧರ್ ಪ್ರತಿಭಟನೆ ನೇತೃತ್ವ ವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.