ADVERTISEMENT

ಎಸ್ಸೆಸ್ಸೆಲ್ಸಿ ಮರುಮೌಲ್ಯಮಾಪನ ನಂತರ ಪ್ರಜ್ಞಾ, ಶ್ರೇಯಾಗೆ 625 ಅಂಕ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2020, 18:39 IST
Last Updated 6 ಸೆಪ್ಟೆಂಬರ್ 2020, 18:39 IST
ಪ್ರಜ್ಞಾ ಮತ್ತು ಶ್ರೇಯಾ
ಪ್ರಜ್ಞಾ ಮತ್ತು ಶ್ರೇಯಾ   

ಮಾಗಡಿ/ ಬೆಳ್ತಂಗಡಿ: ಇಲ್ಲಿನ ವಾಸವಿ ಶಾಲೆ ವಿದ್ಯಾರ್ಥಿನಿ ಎಸ್‌.ಡಿ. ಪ್ರಜ್ಞಾ ಎಸ್‌ಎಸ್‌ಎ ಲ್‌ಸಿ ಉತ್ತರ ಪತ್ರಿಕೆಗಳ ಮರು ಮೌಲ್ಯಮಾಪನದಲ್ಲಿ 625 ಅಂಕ ಗಳಿಸಿದ್ದು, ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ್ದಾರೆ ಎಂದು ಪೋಷಕರು ತಿಳಿಸಿದ್ದಾರೆ.

ಸಮಾಜ ವಿಜ್ಞಾನದಲ್ಲಿ 4, ಇಂಗ್ಲಿಷ್‌ನಲ್ಲಿ 1 ಅಧಿಕ ಅಂಕ ಮರುಮೌಲ್ಯಮಾಪನದಲ್ಲಿ

ಗಳಿಸಿದ್ದಾರೆ. ಮೊದಲು 620 ಅಂಕ ಗಳಿಸಿ ಜಿಲ್ಲೆಗೆ ಪ್ರಥಮ ಸ್ಥಾನಗಳಿಸಿದ್ದ ವಿದ್ಯಾರ್ಥಿನಿ, ಮರುಮೌಲ್ಯಮಾಪನಕ್ಕೆ ಅರ್ಜಿ
ಸಲ್ಲಿಸಿದ್ದರು.

ADVERTISEMENT

ಮರುಮೌಲ್ಯಮಾಪನದಲ್ಲಿ 5 ಅಂಕ ಲಭಿಸಿದ್ದು ಒಟ್ಟು 625 ಅಂಕ ಪಡೆದಿದ್ದಾರೆ.

ಬೆಳ್ತಂಗಡಿಯ ಲಾಯಿಲ ಸೇಂಟ್‌ ಮೇರಿಸ್ ಶಾಲೆಯ ವಿದ್ಯಾರ್ಥಿನಿ ಶ್ರೇಯಾ ಡೋಂಗ್ರೆಗೆ ಮರುಮೌಲ್ಯಮಾಪನದಲ್ಲಿ 625 ಅಂಕ ಬಂದಿವೆ.

ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶ ಪ್ರಕಟಗೊಂಡ ಸಂದರ್ಭದಲ್ಲಿ 625ಕ್ಕೆ 622 ಅಂಕ ಗಳಿಸಿದ್ದ ಶ್ರೇಯಾ,
ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದ್ದರು. ಇದೀಗ ರಾಜ್ಯಕ್ಕೆ ಪ್ರಥಮ ಸ್ಥಾನ
ಪಡೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.