ADVERTISEMENT

ಆತ್ಮಹತ್ಯೆ ಇಚ್ಛೆ; ಜಿಲ್ಲಾಧಿಕಾರಿಗೆ ಪತ್ರ

ಪುರಸಭೆ ಮುಖ್ಯಾಧಿಕಾರಿಗೆ ಶಾಸಕರಿಂದ ಬೆದರಿಕೆ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2019, 19:15 IST
Last Updated 5 ಮಾರ್ಚ್ 2019, 19:15 IST

ಕಲಬುರ್ಗಿ: ‘ಆಳಂದ ಬಿಜೆಪಿ ಶಾಸಕ ಸುಭಾಷ ಆರ್.ಗುತ್ತೇದಾರ ಅವರು ಅವಾಚ್ಯ ಶಬ್ದಗಳಿಂದ ನಿಂದಿಸಿ, ಬೆದರಿಕೆ ಒಡ್ಡಿದ್ದಾರೆ. ಇದರಿಂದ ಮನನೊಂದು ಆತ್ಮಹತ್ಯೆಗೆ ಇಚ್ಛಿಸಿದ್ದೇನೆ. ನನ್ನ ಸಾವಿಗೆ ಶಾಸಕರೇ ನೇರ ಹೊಣೆ’ ಎಂದು ಪುರಸಭೆ ಮುಖ್ಯಾಧಿಕಾರಿ ಚಂದ್ರಕಾಂತ ಪಾಟೀಲ ಅವರು ಜಿಲ್ಲಾಧಿಕಾರಿಗೆ ಮಂಗಳವಾರ ದೂರು ನೀಡಿದ್ದಾರೆ.

‘ಸರ್ಕಾರದಿಂದ ಮಂಜೂರಾದ ₹1 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ನೀಡಿರುವ ಟೆಂಡರ್ ಅನ್ನು ರದ್ದು ಪಡಿಸಬೇಕು. ತಾವು ಹೇಳಿದವರಿಗೆ ಕೊಡಬೇಕು ಎಂದು ಹಲವು ಬಾರಿ ಒತ್ತಾಯಿಸಿದ್ದರು. ಕಾನೂನಾತ್ಮಕವಾಗಿ ನನಗೆ ಅಧಿಕಾರವಿಲ್ಲ ಎಂದು ತಿಳಿಸಿದ್ದರೂ ಪದೇ ಪದೇ ಒತ್ತಡ ಹೇರುತ್ತಿದ್ದರು. ಟೆಂಡರ್ ರದ್ದುಪಡಿಸದ್ದರಿಂದ ಮತ್ತು ಅವರು ಹೇಳಿದ ಗುತ್ತಿಗೆದಾರನಿಗೆ ಕೆಲಸ ಸಿಗಲಿಲ್ಲ ಎಂಬ ಕಾರಣಕ್ಕೆ ಮಾ.4 ರಂದು ಕರೆ ಮಾಡಿ ಬೆದರಿಕೆ ಒಡ್ಡಿದ್ದಾರೆ. ಅಲ್ಲದೆ, ಮಾನಸಿಕವಾಗಿ ಕಿರುಕುಳ ನೀಡಿದ್ದಾರೆ’ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

‘ಶಾಸಕರು ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ ಉಂಟು ಮಾಡುತ್ತಿದ್ದಾರೆ. ಇದರಿಂದಾಗಿ ನನ್ನ ಮನಸ್ಸಿಗೆ ಆಘಾತ ಮತ್ತು ಮಾನಸಿಕ ಹಿಂಸೆಯಾಗಿದೆ. ಬದುಕುವುದರಲ್ಲಿ ಅರ್ಥವಿಲ್ಲವೆಂಬುದನ್ನು ನಿಮ್ಮ ಗಮನಕ್ಕೆ ತರ ಬಯಸುತ್ತೇನೆ’ ಎಂದು ತಿಳಿಸಿದ್ದಾರೆ.

ADVERTISEMENT

ಆಡಿಯೊ ವೈರಲ್: ಸುಭಾಷ ಗುತ್ತೇದಾರ ಅವರು ಅವಾಚ್ಯ ಶಬ್ದಗಳಿಂದ ನಿಂದಿಸಿರುವ 53 ಸೆಕೆಂಡ್‌ಗಳ ಆಡಿಯೊ ವೈರಲ್ ಆಗಿದೆ. ಸಾರ್ವಜನಿಕರು, ಪುರಸಭೆ ನೌಕರರು ಸೇರಿ ಅನೇಕರ ವಾಟ್ಸ್‌ಆ್ಯಪ್‌ನಲ್ಲಿ ಹರಿದಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.