ಬೆಂಗಳೂರು: ದೀಪಾವಳಿ ಸಲುವಾಗಿ ನೈರುತ್ಯ ರೈಲ್ವೆಯು 11 ರೈಲುಗಳಲ್ಲಿ ಬೋಗಿಗಳ ಸಂಖ್ಯೆಯನ್ನು ಹೆಚ್ಚಿಸಿದೆ.
ಹಬ್ಬದ ಸಲುವಾಗಿ ಊರಿಗೆ ಹೋಗಿ ಬರುವ ಪ್ರಯಾಣಿಕರ ಅನುಕೂಲಕ್ಕಾಗಿ ಈ ಬದಲಾವಣೆ ಮಾಡಲಾಗಿದೆ ಎಂದು ನೈರುತ್ಯ ರೈಲ್ವೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕ್ರಾಂತಿವೀರ ಸಂಗೊಳ್ಳಿರಾಯಣ್ಣ (ಕೆಎಸ್‌ಆರ್) ನಿಲ್ದಾಣ ಬೆಂಗಳೂರು– ಹುಬ್ಬಳ್ಳಿ–ಕೆಎಸ್‌ಆರ್ ಎಕ್ಸ್‌ಪ್ರೆಸ್‌ನಲ್ಲಿ (ಸಂಖ್ಯೆ: 02079/02080) ಇದೇ 13ರಿಂದ 15ರವರೆಗೆ ಎರಡು ಹೆಚ್ಚುವರಿ ಬೋಗಿಗಳನ್ನು ಅಳವಡಿಸಲಾಗಿದೆ.
ಮೈಸೂರು– ಹುಬ್ಬಳ್ಳಿ– ಎಕ್ಸ್‌ಪ್ರೆಸ್‌ನಲ್ಲಿ (06582) ಮೂರು ಟೈರ್ ಸ್ಲೀಪರ್ ಕೋಚ್‌ಗಳ ಮೂರು ಬೋಗಿಗಳನ್ನು ಹೆಚ್ಚುವರಿಯಾಗಿ ಒದಗಿಸಲಾಗಿದ್ದು, ಈ ಸೌಲಭ್ಯ ಇದೇ 13ರಿಂದ 16ರವರೆಗೆ ಇರಲಿದೆ.
ಹುಬ್ಬಳ್ಳಿ– ಮೈಸೂರು ಎಕ್ಸ್‌ಪ್ರೆಸ್‌ನಲ್ಲಿ (06581) ಮೂರು ಟೈರ್‌ಗಳ ಒಂದು ಬೋಗಿಯನ್ನು ಹೆಚ್ಚುವರಿಯಾಗಿ ಒದಗಿಸಲಾಗಿದ್ದು, ಇದು ಇದೇ 13ರಂದು ಲಭ್ಯ. ಮೂರು ಟೈರ್ ಸ್ಲೀಪರ್ ಕೋಚ್‌ಗಳ ಮೂರು ಬೋಗಿಗಳನ್ನು ಇದೇ 14ರಿಂದ 17ರವರೆಗೆ ಒದಗಿಸಲಾಗುತ್ತದೆ.
ಮೈಸೂರು ಸೋಲಾಪುರ ಎಕ್ಸ್‌ಪ್ರೆಸ್‌ನಲ್ಲಿ (06535) ಮೂರು ಟೈರ್‌ಗಳ ಮೂರು ಹೆಚ್ಚುವರಿ ಸ್ಲೀಪರ್ ಕೋಚ್‌ಗಳನ್ನು ಒದಲಾಗಿದ್ದು, ಇದು ಇದೇ 13ರಂದು ಹಾಗೂ 14ರಂದು ಲಭ್ಯವಿರಲಿದೆ.
ಸೋಲಾಪುರ– ಮೈಸೂರು ಎಕ್ಸ್‌ಪ್ರೆಸ್‌ನಲ್ಲಿ (06536) ಮೂರು ಟೈರ್‌ಗಳ ಮೂರು ಸ್ಲೀಪರ್ ಕೋಚ್‌ಗಳನ್ನು ಒದಗಿಸಲಾಗಿದ್ದು, ಇದೇ 14ರಂದು ಹಾಗೂ 15ರಂದು ಲಭ್ಯ ಇರಲಿವೆ.
ಕೆಎಸ್‌ಆರ್ ಬೆಂಗಳೂರು– ಬೆಳಗಾವಿ ಎಕ್ಸ್‌ಪ್ರೆಸ್ ಸ್ಪೆಷಲ್‌ನಲ್ಲಿ (06550) ಮೂರು ಟೈರ್ ಸ್ಲೀಪರ್ ಕೋಚ್‌ಗಳ ಎರಡು ಬೋಗಿಗಳನ್ನು ಸೇರಿಸಲಾಗಿದ್ದು, ಇದೇ 14ರಿಂದ 17ರವರೆಗೆ ಲಭ್ಯವಿರಲಿದೆ.
ಯಶವಂತಪುರ–ಶಿವಮೊಗ್ಗ ಎಕ್ಸ್‌ಪ್ರೆಸ್ ಸ್ಪೆಷಲ್‌ನಲ್ಲಿ (02089) ಚೇರ್ ಕಾರ್‌ಗಳ ಎರಡು ಬೋಗಿಗಳು ಇದೇ 13ರಂದು ಮತ್ತು 14ರಂದು ಹಾಗೂ ಶಿವಮೊಗ್ಗ– ಯಶವಂತಪುರ ಎಕ್ಸ್‌ಪ್ರೆಸ್ ಸ್ಪೆಷಲ್‌ನಲ್ಲಿ (02090) ಇದೇ 14 ಮತ್ತು 15ರಂದು ಹೆಚ್ಚುವರಿಯಾಗಿ ಲಭ್ಯ ಇರಲಿವೆ.
ಕೆಎಸ್‌ಆರ್ ಬೆಂಗಳೂರು– ಮಂಗಳೂರು– ಎಕ್ಸ್‌ಪ್ರೆಸ್ ಸ್ಪೆಷಲ್‌ನಲ್ಲಿ (06518) ಕಾರವರ– ಕೆಎಸ್‌ಆರ್ ಬೆಂಗಳೂರು ಸ್ಪೆಷಲ್ (06586) ಮತ್ತು ತೂತುಕುಡಿ– ಮೈಸೂರು ಎಕ್ಸ್‌ಪ್ರೆಸ್ ಸ್ಪೆಷಲ್ ರೈಲುಗಳಲ್ಲಿ ಮೂರು ಟೈರ್‌ಗಳ ಸ್ಲೀಪರ್ ಕೋಚ್‌ನ ತಲಾ ಒಂದು ಬೋಗಿಯನ್ನು ಇದೇ 14ರಂದು ಅಳವಡಿಸಲಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.