ADVERTISEMENT

ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ವಿರುದ್ಧ ಟೀಕೆ: ಇಬ್ಬರು ಶಿಕ್ಷಕರ ಅಮಾನತು

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2020, 12:17 IST
Last Updated 30 ಮಾರ್ಚ್ 2020, 12:17 IST
   

ಶಿವಮೊಗ್ಗ: ಕೊರೊನಾ ಸಂಕಷ್ಟ ಪರಿಸ್ಥಿತಿ ನಿರ್ವಹಣೆಗೆ ಸಾರ್ವಜನಿಕರಿಂದ ದೇಣಿಗೆಕೋರಿದಮುಖ್ಯಮಂತ್ರಿ ನಿರ್ಧಾರವನ್ನು ಸಾಮಾಜಿಕ ಜಾಲ ತಾಣಗಳಲ್ಲಿ ಪ್ರಶ್ನಿಸಿದ, ಟೀಕಿಸಿದ ಇಬ್ಬರು ಶಿಕ್ಷಕರನ್ನು ಜಿಲ್ಲಾ ಪಂಚಾಯಿತಿ ಸಿಇಒ ಎಂ.ಎಲ್.ವೈಶಾಲಿ ಸೋಮವಾರ ಅಮಾನತು ಮಾಡಿದ್ದಾರೆ.

ಸೊರಬ ತಾಲ್ಲೂಕು ಆನವಟ್ಟಿಯ ಸಿಆರ್‌ಪಿರಾಜು,ತಿಮ್ಮಾಪುರ ಸರ್ಕಾರಿ ಶಾಲೆಯ ಶಿಕ್ಷಕ ಢಾಕ್ಯಾನಾಯ್ಕ ಅಮಾನತುಗೊಂಡವರು.

‘ಹಲೋ ಸಿಎಂ ಸಾಹೇಬರೇ, ಸಾರ್ವಜನಿಕರಿಂದ ಹಣ ಕೇಳಿದ್ದೀರಿ. ಹಣದ ಲಿಸ್ಟ್ ಇಲ್ಲಿದೆ ನೋಡಿ’ ಎಂಬ ವಾಯ್ಸ್‌ ರೆಕಾರ್ಡ್ ಇರುವ ಮಾಹಿತಿ ಸಾಮಾಜಿಕ ಜಾಲತಾಣಗಳಿಗೆ ಫಾರ್ವರ್ಡ್‌ ಮಾಡಿದ್ದಲ್ಲದೇ, ‘ರಿಯಲಿ ರೈಟ್‌’ ಎಂದು ಪ್ರತಿಕ್ರಿಯಿಸಿದ್ದರು.

ADVERTISEMENT

‘ಈ ಇಬ್ಬರು ಶಿಕ್ಷಕರು ಕೊರೊನಾ ನಿರ್ಬಂಧದ ಸಮಯದಲ್ಲಿ ಮನೆಯಲ್ಲೇ ಕುಳಿತು ಸರ್ಕಾರದ ಕೆಲಸಕ್ಕೆ ನೆರವಾಗುವ ಬದಲು, ಸರ್ಕಾರದ ವಿರುದ್ಧ ಟೀಕೆ ಮಾಡುತ್ತಾ ಕಾಲ ಕಳೆಯುತ್ತಿದ್ದಾರೆ. ಹಾಗಾಗಿ, ಅವರನ್ನು ಅಮಾನತು ಮಾಡಲಾಗಿದೆ’ ಎಂದು ಸಿಇಒ ಆದೇಶದಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.