ADVERTISEMENT

ಎಚ್‌ಡಿಕೆ ಆಪ್ತ ಕಾರ್ಯದರ್ಶಿಯಾಗಿ ತೇಜಸ್ವಿ ನಾಯಕ್‌

​ಪ್ರಜಾವಾಣಿ ವಾರ್ತೆ
Published 22 ಜೂನ್ 2024, 15:22 IST
Last Updated 22 ಜೂನ್ 2024, 15:22 IST
<div class="paragraphs"><p>&nbsp;ಎಚ್‌ಡಿಕೆ</p></div>

 ಎಚ್‌ಡಿಕೆ

   

ನವದೆಹಲಿ: ಮಧ್ಯಪ್ರದೇಶ ಕೇಡರ್‌ನ ಐಎಎಸ್ ಅಧಿಕಾರಿ ಎಸ್. ತೇಜಸ್ವಿ ನಾಯಕ್ ಅವರನ್ನು ಕೇಂದ್ರ ಭಾರೀ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್‌.ಡಿ. ಕುಮಾರಸ್ವಾಮಿ ಅವರ ಆಪ್ತ ಕಾರ್ಯದರ್ಶಿಯಾಗಿ (ಪಿ.ಎಸ್‌) ನೇಮಿಸಲಾಗಿದೆ.

ಉತ್ತರ ಕನ್ನಡ ಜಿಲ್ಲೆಯವರಾದ ನಾಯಕ್ ಅವರು ಭಾರೀ ಕೈಗಾರಿಕೆ ಇಲಾಖೆ ನೋಡಿಕೊಳ್ಳಲಿದ್ದಾರೆ. ಅವರು ಈ ಹಿಂದೆ ಕೃಷಿ ಸಚಿವ ಅರ್ಜುನ್ ಮುಂಡಾ ಅವರ ಆಪ್ತ ಕಾರ್ಯದರ್ಶಿಯಾಗಿದ್ದರು.

ADVERTISEMENT

ಭಾರತೀಯ ಅರಣ್ಯ ಸೇವಾ ಅಧಿಕಾರಿ ತಾಕತ್ ಸಿಂಗ್ ರಣಾವತ್ ಅವರನ್ನು ಕುಮಾರಸ್ವಾಮಿ ಆಪ್ತ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ. ಅವರು ಉಕ್ಕು ಇಲಾಖೆಯನ್ನು ನೋಡಿಕೊಳ್ಳಲಿದ್ದಾರೆ. ರಣಾವತ್ ಈ ಹಿಂದೆ ಶೋಭಾ ಕರಂದ್ಲಾಜೆ ಅವರು ‘ಮೋದಿ-2 ಸರ್ಕಾರ’ದಲ್ಲಿ ಕೃಷಿ ಖಾತೆ ರಾಜ್ಯ ಸಚಿವರಾಗಿದ್ದಾಗ ಆಪ್ತ ಕಾರ್ಯದರ್ಶಿಯಾಗಿದ್ದರು.

ಕರ್ನಾಟಕ ಕೇಡರ್‌ನ ಐಎಎಸ್ ಅಧಿಕಾರಿ ಎಸ್. ಎಸ್. ನಕುಲ್ ಅವರನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಆಪ್ತ ಕಾರ್ಯದರ್ಶಿಯಾಗಿ ಮರುನೇಮಿಸಲಾಗಿದೆ ಮತ್ತು ಅವರು ಹಣಕಾಸು ಸಚಿವಾಲಯ ನೋಡಿಕೊಳ್ಳುತ್ತಾರೆ.

ಕರ್ನಾಟಕ ಕೇಡರ್‌ನ ಮತ್ತೊಬ್ಬ ಐಎಎಸ್ ಅಧಿಕಾರಿ ಅನಿರುದ್ಧ್ ಶ್ರವಣ್ ಕೂಡ ನಿರ್ಮಲಾ ಸೀತಾರಾಮನ್ ಅವರ ಪಿ.ಎಸ್‌. ಆಗಿ ಮರು ನೇಮಕಗೊಂಡಿದ್ದಾರೆ. ಅವರು ಸಚಿವರ ಕಚೇರಿಯಲ್ಲಿ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ ನೋಡಿಕೊಳ್ಳುತ್ತಾರೆ. ಇಬ್ಬರೂ ಅಧಿಕಾರಿಗಳು ‘ಮೋದಿ-2 ಸರ್ಕಾರ’ದಲ್ಲಿ ನಿರ್ಮಲಾ ಅವರ ಪಿ.ಎಸ್‌.ಗಳಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.