ಬೆಂಗಳೂರು: ಎಚ್‌ಎಎಲ್‌ನ ‘ಎಚ್‌ಟಿಟಿ 40’ ತರಬೇತಿ ವಿಮಾನವು ಆಗಸದಲ್ಲಿ ಗಿರಕಿ ಹೊಡೆಯುವ (ಸ್ಪಿನ್ ಟೆಸ್ಟ್) ಪರೀಕ್ಷೆಯನ್ನು ಯಶಸ್ವಿ ನಡೆಸಿದೆ.
ಇಬ್ಬರು ಪೈಲಟ್‌ಗಳು ಶುಕ್ರವಾರ ಆಗಸದಲ್ಲಿ ಈ ವಿಮಾನವನ್ನು ಎರಡು ಸುತ್ತು ಗಿರಕಿ ಹೊಡೆಸಿದ ಬಳಿಕ ನಿಯಂತ್ರಣಕ್ಕೆ ತೆಗೆದುಕೊಂಡರು. ಇದೇ ಮೊದಲ ಬಾರಿಗೆ ಎಚ್‌ಟಿಟಿ 40ವಿಮಾನದ ಗಿರಕಿ ಹೊಡೆಯುವ ಪರೀಕ್ಷೆ ನಡೆಸಲಾಗಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿದ ಎಚ್‌ಎಎಲ್ ವ್ಯವಸ್ಥಾಪಕ ನಿರ್ದೇಶಕ ಆರ್.ಮಾಧವನ್, ಗಿರಕಿ ಹೊಡೆಯುವ ಪರೀಕ್ಷೆ ಯಶಸ್ವಿ ಆಗಿರುವುದು, ಸಂಸ್ಥೆಯ ವಿಶ್ವಾಸಾರ್ಹತೆ ಮತ್ತು ಸಾಮರ್ಥ್ಯವನ್ನು ಇನ್ನಷ್ಟು ಹೆಚ್ಚಿಸಿದಂತಾಗಿದೆ ಎಂದು ಹೇಳಿದ್ದಾರೆ.
ಯಾವುದೇ ವಿಮಾನದ ಅಭಿವೃದ್ಧಿಯಲ್ಲಿ ಗಿರಕಿ ಪರೀಕ್ಷೆ ಅತ್ಯಂತ ಮಹತ್ವದ ಸವಾಲಾಗಿದೆ. ಎಚ್‌ಎಎಲ್‌ನ ವಿಮಾನ ಸಂಶೋಧನೆ ಮತ್ತು ವಿನ್ಯಾಸ ವಿಭಾಗದಲ್ಲಿ ವ್ಯಾಪಕವಾಗಿ ವಿಂಡ್ ಟನೆಲ್ ಪರೀಕ್ಷೆಯನ್ನು ನಡೆಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.