ADVERTISEMENT

ಎಂಎಸ್‌ಐಎಲ್ ಚಿಟ್‌ ಫಂಡ್: ಏ.1ರಿಂದ ಹಳ್ಳಿಗಳಿಗೂ ವಿಸ್ತರಣೆ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2023, 15:29 IST
Last Updated 29 ಡಿಸೆಂಬರ್ 2023, 15:29 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಬೆಂಗಳೂರು: ಮೈಸೂರು ಸೇಲ್ಸ್‌ ಇಂಟರ್‌ ನ್ಯಾಷನಲ್‌ ಲಿಮಿಟೆಡ್‌ (ಎಂಎಸ್‌ಐಎಲ್‌) ನಡೆಸುತ್ತಿರುವ ಚಿಟ್‌ಫಂಡ್‌ ವ್ಯವಹಾರವನ್ನು ಏ.1ರಿಂದ ಹಳ್ಳಿಗಳಿಗೂ ವಿಸ್ತರಣೆಯಾಗಲಿದೆ.

ಗ್ಯಾರಂಟಿ ಯೋಜನೆಗಳ ಮೂಲಕ ಪ್ರತಿ ಕುಟುಂಬಕ್ಕೆ ತಿಂಗಳಿಗೆ ₹4,000 ದಿಂದ ₹5,000 ದವರೆಗೂ ಆರ್ಥಿಕ ನೆರವು ನೀಡಲಾಗುತ್ತಿದೆ. ಮಹಿಳೆಯರ ಕೈಸೇರುತ್ತಿರುವ ಈ ಹಣವನ್ನು ಚಿಟ್‌ಫಂಡ್‌ ವಹಿವಾಟಿನತ್ತ ಸೆಳೆಯಲು ಎಂಎಸ್‌ಐಎಲ್‌ ದೃಢಹೆಜ್ಜೆ ಇಟ್ಟಿದೆ.  

ADVERTISEMENT

ರಾಜ್ಯ ಸರ್ಕಾರದ ಸ್ವಾಮ್ಯದ ಎಂಎಸ್‌ಐಎಲ್‌ನ ಚಿಟ್‌ ಫಂಡ್‌ನಲ್ಲಿ 22,000 ಗ್ರಾಹಕರಿದ್ದು, ವಹಿವಾಟು ₹305 ಕೋಟಿ ಮಾತ್ರ ಇದೆ. ನೆರೆಯ ಕೇರಳ ರಾಜ್ಯ ಸರ್ಕಾರದ ಚಿಟ್‌ ಫಂಡ್‌ ವಹಿವಾಟು ₹27,000 ಕೋಟಿಯಷ್ಟಿದೆ. ಹಳ್ಳಿಗಳಿಗೂ ಚಿಟ್‌ಫಂಡ್‌ ಪರಿಚಯಿಸುವುದರಿಂದ ₹10 ಸಾವಿರ ಕೋಟಿಗೆ ವಿಸ್ತರಿಸುವ ಗುರಿಯನ್ನು ಎಂಎಸ್‌ಐಎಲ್‌ ಹೊಂದಿದೆ. 

‘ಚಿಟ್‌ಫಂಡ್‌ನಲ್ಲಿ ತೊಡಗಿಸಿಕೊಳ್ಳುವ ಮಹಿಳಾ ಸ್ವಸಹಾಯ ಗುಂಪುಗಳಿಗೆ ಶೇ 13ರಿಂದ 15ರವರೆಗೂ ಲಾಭ ದೊರಕುತ್ತದೆ. ಸರ್ಕಾರಿ ಸ್ವಾಮ್ಯದ ಸಂಸ್ಥೆಯಾಗಿರುವುದರಿಂದ ಹೂಡಿಕೆಯ ಮೊತ್ತಕ್ಕೂ ಖಾತರಿ ಇರುತ್ತದೆ. ಹಾಗಾಗಿ, ಮೊದಲ ಹಂತದಲ್ಲಿ ತಾಲ್ಲೂಕಿಗೆ ಒಂದರಂತೆ ಶಾಖೆ ತೆರೆಯಲಾಗುವುದು. ಎರಡು ಸಾವಿರ ಜನರಿಗೆ ಒಬ್ಬರು ಪ್ರತಿನಿಧಿಯನ್ನು ನೇಮಿಸಲಾಗುವುದು. ಆರಂಭದಲ್ಲಿ ₹2 ಕೋಟಿ ವಹಿವಾಟಿನ ಗುರಿ ನಿಗದಿ ಮಾಡಲಾಗುವುದು’ ಎಂದು ಎಂಎಸ್‌ಐಎಲ್‌ ಅಧ್ಯಕ್ಷರೂ ಆಗಿರುವ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಮಾಹಿತಿ ನೀಡಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.