ADVERTISEMENT

ತ್ರಿಲೋಕಚಂದ್ರ ಆರೋಗ್ಯ ಇಲಾಖೆ ಆಯುಕ್ತ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2021, 19:43 IST
Last Updated 13 ಫೆಬ್ರುವರಿ 2021, 19:43 IST
   

ಬೆಂಗಳೂರು: ಆರೋಗ್ಯ ಇಲಾಖೆಯ ಆಯುಕ್ತರಾಗಿದ್ದ ಪಂಕಜ್‌ ಪಾಂಡೆ ಅವರನ್ನು ವರ್ಗಾವಣೆ ಮಾಡಿ ಆ ಸ್ಥಾನಕ್ಕೆ ಉದ್ಯೋಗ ಮತ್ತು ತರಬೇತಿ ಇಲಾಖೆಯ ಆಯುಕ್ತರಾಗಿದ್ದ ಕೆ.ವಿ. ತ್ರಿಲೋಕಚಂದ್ರ ಅವರನ್ನು ನೇಮಿಸಲಾಗಿದೆ.

ಅಲ್ಲದೆ, ಸಹಕಾರ ಇಲಾಖೆಯ ಪ್ರಧಾನ ಕಾರ್ಯದರ್ಶಿ ತುಷಾರ್‌ ಗಿರಿನಾಥ್‌ ಅವರಿಗೆ ನಗರಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹೊಣೆಯನ್ನು ಹೆಚ್ಚುವರಿಯಾಗಿ ನೀಡ ಲಾಗಿದೆ. ವಿ. ರಶ್ಮಿ ಮಹೇಶ್‌ ಅವರಿಗೆ ಹಿಂದುಳಿದ ವರ್ಗಗಳ ಅಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹುದ್ದೆ ಉಳಿಸಿಕೊಂಡು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯ ದರ್ಶಿ ಹುದ್ದೆಯಿಂದ ಬಿಡುಗಡೆ ಮಾಡಲಾಗಿದೆ.

ಇತ್ತೀಚೆಗೆ ಕೆಎಎಸ್‌ನಿಂದ ಐಎಎಸ್‌ಗೆ ಬಡ್ತಿ ಪಡೆದ ಕೆಲವರು ಸೇರಿ ಒಟ್ಟು 41 ಐಎಎಸ್‌ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಶನಿವಾರ ಆದೇಶ ಹೊರಡಿಸಿದೆ.

ADVERTISEMENT

ವರ್ಗಾವಣೆಗೊಂಡ ಇತರರು

ಜೆ. ರವಿಶಂಕರ್‌– ಕಾರ್ಯದರ್ಶಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಎಂ.ವಿ. ವೆಂಕಟೇಶ್‌– ಆಯುಕ್ತ, ವಾಟರ್‌ಶೆಡ್‌ ಅಭಿವೃದ್ಧಿ, ಬಗಾದಿ ಗೌತಮ್‌– ಹೆಚ್ಚುವರಿ ಆಯುಕ್ತ, ವಾಣಿಜ್ಯ ತೆರಿಗೆ ಇಲಾಖೆ (ಜಾರಿ), ಎಂ. ಕನಗವಲ್ಲಿ– ಎಂಡಿ, ಕರ್ನಾಟಕ ರೇಷ್ಮೆ ಕೈಗಾರಿಕಾ ನಿಗಮ, ವಿ. ರಾಮಪ್ರಸಾತ್ ಮನೋಹರ್‌ – ಎಂಡಿ, ಕೆಎಸ್‌ಐಐಡಿಸಿ, ಆರ್‌. ವೆಂಕಟೇಶ್‌ಕುಮಾರ್‌– ಜಂಟಿ ಕಾರ್ಯದರ್ಶಿ, ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ, ಜಿ.ಎನ್‌. ಶಿವಮೂರ್ತಿ– ಆಯುಕ್ತ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ನಿರ್ದೇಶಕ, ಜೆ. ಮಂಜುನಾಥ– ಜಿಲ್ಲಾಧಿಕಾರಿ, ಬೆಂಗಳೂರು ನಗರ, ಬಿ.ಆರ್‌. ಮಮತಾ– ಎಂಡಿ, ಕರ್ನಾಟಕ ಪಬ್ಲಿಕ್ ಲ್ಯಾಂಡ್‌ ಕಾರ್ಪೊರೇಷನ್‌, ಹೆಪ್ಸಿಬಾ ರಾಣಿ ಕೊರ್ಲಪಾಟಿ– ಜೆಎಂಡಿ, ಕೆಯುಐಡಿಎಫ್‌ಸಿ, ರಾಕೇಶ್‌ಕುಮಾರ್‌ ಕೆ. – ನಿರ್ದೇಶಕ, ಪ್ರವಾಸೋದ್ಯಮ, ಸೆಲ್ವಮಣಿ ಆರ್‌– ಜಿಲ್ಲಾಧಿಕಾರಿ, ಕೋಲಾರ, ಅಶ್ವತಿ ಎಸ್‌.– ಜಿಲ್ಲಾಧಿಕಾರಿ, ಮಂಡ್ಯ, ಮುಲ್ಲೈ ಮೊಹಿಲನ್‌ ಎಂ.ಪಿ– ಜಿಲ್ಲಾಧಿಕಾರಿ, ಉತ್ತರಕನ್ನಡ,
ವೆಂಕಟ್‌ರಾಜ್‌– ಜಿಲ್ಲಾಧಿಕಾರಿ, ರಾಯಚೂರು.

ಗುರುದತ್‌ ಹೆಗ್ಡೆ– ಎಂಡಿ, ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ, ಲಕ್ಷ್ಮಿಕಾಂತ ರೆಡ್ಡಿ– ಎಂಡಿ, ಆಹಾರ ನಿಗಮ, ಆನಂದ ಕೆ– ಉಪ ಕಾರ್ಯದರ್ಶಿ, ಡಿಪಿಎಆರ್‌, ಗ್ಞಾನೇಂದ್ರಕುಮಾರ್‌
ಗಂಗ್ವಾರ್‌– ಜಂಟಿ ನಿರ್ದೇಶಕ (ತರಬೇತಿ), ಆಡಳಿತ ತರಬೇತಿ ಸಂಸ್ಥೆ, ಮೈಸೂರು, ಭರತ್ ಎಸ್‌. – ಸಿಇಒ, ಗದಗ ಜಿಲ್ಲಾಪಂಚಾಯಿತಿ, ಬಿ.ಸಿ. ಸತೀಶ– ಜಿಲ್ಲಾಧಿಕಾರಿ, ಚಾಮರಾಜನಗರ, ರವಿ ಎಂ.ಆರ್‌– ಹೆಚ್ಚುವರಿ ಆಯುಕ್ತ, ಸಕಾಲ ಮಿಷನ್‌, ಪಿ.ಎನ್‌. ರವೀಂದ್ರ– ಆಯುಕ್ತ, ಯುವ ಸಬಲೀಕರಣ, ಕ್ರೀಡಾ ಇಲಾಖೆ, ಕರೀಗೌಡ– ಜಂಟಿ ನಿರ್ದೇಶಕ (ತರಬೇತಿ), ಆಡಳಿತ ತರಬೇತಿ ಸಂಸ್ಥೆ, ಮೈಸೂರು.

ಕೆ. ಹರೀಶ್‌ಕುಮಾರ್‌– ಆಯುಕ್ತ, ಉದ್ಯೋಗ ತರಬೇತಿ, ವೈ.ಎಸ್‌. ಪಾಟೀಲ– ಜಿಲ್ಲಾಧಿಕಾರಿ, ತುಮಕೂರು, ಕೆ. ಶ್ರೀನಿವಾಸ್‌– ಜಿಲ್ಲಾಧಿಕಾರಿ, ಬೆಂಗಳೂರು ಗ್ರಾಮಾಂತರ, ಸಿ. ಸತ್ಯಭಾಮಾ– ಎಂಡಿ, ಕೆಎಸ್‌ಎಸ್‌ಐಡಿಸಿ, ಝಹೇರಾ ನಸೀಂ– ಸಿಇಒ, ಬೀದರ್‌ ಜಿಲ್ಲಾ ಪಂಚಾಯಿತಿ, ವಿಜಯಮಹಾಂತೇಶ್‌ ದಾನಮ್ಮನವರ್‌– ಸಿಇಒ, ದಾವಣಗೆರೆ ಜಿಲ್ಲಾ ಪಂಚಾಯಿತಿ, ಗೋವಿಂದ ರೆಡ್ಡಿ– ಸಿಇಒ, ವಿಜಯಪುರ ಜಿಲ್ಲಾ ಪಂಚಾಯಿತಿ, ಭಾರತಿ ಡಿ– ನಿರ್ದೇಶಕಿ, ಕೃಷಿ ಮಾರುಕಟ್ಟೆ ಮಂಡಳಿ, ಪ್ರಭುಲಿಂಗ ಕವಳಿಕಟ್ಟೆ– ಎಂಡಿ, ಹಟ್ಟಿ ಚಿನ್ನದ ಗಣಿ ಕಂಪನಿ.

ಗಂಗಾಧರಸ್ವಾಮಿ– ಸಿಇಒ, ತುಮಕೂರು ಜಿಲ್ಲಾ ಪಂಚಾಯಿತಿ, ನಾಗೇಂದ್ರ ಪ್ರಸಾದ್‌– ಸಿಇಒ, ಚಿಕ್ಕ ಬಳ್ಳಾಪುರ, ಜಿಲ್ಲಾ ಪಂಚಾಯಿತಿ, ಡಾ. ಕುಮಾರ್– ಸಿಇಒ, ದಕ್ಷಿಣ ಕನ್ನಡ, ಜಿಲ್ಲಾ ಪಂಚಾಯಿತಿ, ಸಂಗಪ್ಪ– ಸಿಇಒ, ಬೆಂಗಳೂರು ನಗರ ಜಿಲ್ಲಾ ಪಂಚಾ ಯಿತಿ, ಪರಮೇಶ್‌ (ಆರ್‌ಡಿಪಿಆರ್‌ ಸೇವೆ)– ಸಿಇಒ, ಹಾಸನ ಜಿಲ್ಲಾ ಪಂಚಾಯಿತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.