ADVERTISEMENT

ಬೆಂಗಳೂರು | ಆರ್‌.ಟಿ.ನಗರದ ಸುಹೇಲ್ ಮನೆಯಲ್ಲಿ ಸೇರುತ್ತಿದ್ದ ಶಂಕಿತರು

​ಪ್ರಜಾವಾಣಿ ವಾರ್ತೆ
Published 19 ಜುಲೈ 2023, 7:16 IST
Last Updated 19 ಜುಲೈ 2023, 7:16 IST
ಶಂಕಿತ ಉಗ್ರರು
ಶಂಕಿತ ಉಗ್ರರು   

ಬೆಂಗಳೂರು: ಆರ್‌.ಟಿ.ನಗರದಲ್ಲಿರುವ ಸುಹೇಲ್ ಮನೆಯಲ್ಲಿ ಐವರು ಆರೋಪಿಗಳು ನಿತ್ಯ ಸಂಜೆ ಸೇರಿಕೊಂಡು ವಿಧ್ವಂಸಕ ಕೃತ್ಯ ಎಸಗಲು ಸಂಚು ರೂಪಿಸಿದ್ದರು.‌ ನಗರದ ಹತ್ತು ಕಡೆ ಕೃತ್ಯ ಎಸಗಲು ಯೋಜಿಸಿದ್ದರು ಎಂದು ಪೊಲೀಸರು ಹೇಳಿದರು.

ಈ ವಿಚಾರವು ಸುಹೇಲ್ ತಂದೆಗೆ ತಿಳಿದಿದ್ದರೂ ಪೊಲೀಸರಿಗೆ ಮಾಹಿತಿ ನೀಡಿರಲಿಲ್ಲ. ಕೆಲವು ಪೋಷಕರನ್ನು ವಿಚಾರಣೆಗೆ ಕರೆಸುವ ಸಾಧ್ಯತೆಯಿದೆ.

ಮದನಿ ಯಾರು?

ADVERTISEMENT

ಐವರು ಶಂಕಿತರಿಗೆ ಪ್ರೇರಣೆ ನೀಡಿದ್ದ ಟಿ.ನಾಸೀರ್ 2008ರಲ್ಲಿ ಬೆಂಗಳೂರಿನಲ್ಲಿ ‌ನಡೆದಿದ್ದ ಸರಣಿ ಬಾಂಬ್ ಸ್ಫೋಟ ಪ್ರಕರಣದ ಪ್ರಮುಖ ಆರೋಪಿ. ಆಗಿನಿಂದಲೂ ಈತ ಜೈಲಿನಲ್ಲಿ‌ ಇದ್ದಾನೆ. ಕೇರಳದ ಅಬ್ದುಲ್ ನಾಸೀರ್ ಮದನಿ ಸಹಚರ ಟಿ. ನಾಸೀರ್. ಈತ ಲಷ್ಕರಿ- ಇ- ತೊಯ್ಬಾ ಸಂಘಟನೆಗೆ ಸೇರಿದ್ದಾನೆ. ಅದೇ ಸಂಘಟನೆಗೆ ಸೇರುವಂತೆ ಐವರಿಗೆ ಪ್ರೇರಣೆ ನೀಡಿದ್ದಾನೆ.

ಇದನ್ನು ಓದಿ: ಬೆಂಗಳೂರು | ಶಂಕಿತ ಉಗ್ರರಿಗೆ ಪರಪ್ಪನ ಅಗ್ರಹಾರ ಜೈಲೇ 'ತರಬೇತಿ ಕ್ಯಾಂಪಸ್'!

ಇದನ್ನು ಓದಿ: ಉಗ್ರರ ಟಾರ್ಗೆಟ್ ಬೆಂಗಳೂರು: ಸ್ಫೋಟಕ, ಶಸ್ತ್ರಾಸ್ತ್ರ ಸಹಿತ ಐವರು ಶಂಕಿತ ಉಗ್ರರ ಬಂಧನ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.