ADVERTISEMENT

ಈಗ ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದವೇ ಇಲ್ಲ: ಎಚ್.ಕೆ.ಪಾಟೀಲ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2024, 5:59 IST
Last Updated 5 ನವೆಂಬರ್ 2024, 5:59 IST
<div class="paragraphs"><p>ಎಚ್.ಕೆ.ಪಾಟೀಲ</p></div>

ಎಚ್.ಕೆ.ಪಾಟೀಲ

   

ಬೆಳಗಾವಿ: 'ಈಗ ಕರ್ನಾಟಕ-ಮಹಾರಾಷ್ಟ್ರ ವಿವಾದವೇ ಇಲ್ಲ. ಕರ್ನಾಟಕದ ದೃಷ್ಟಿಯಿಂದ ಅದು ಮುಗಿದ ಅಧ್ಯಾಯ' ಎಂದು ಸಚಿವ ಎಚ್. ಕೆ.ಪಾಟೀಲ ಹೇಳಿದರು.

ಇಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಚುನಾವಾಣೆ ಬಂದಾಗ ಬಿಜೆಪಿಯವರಿಗೆ ಹೇಗೆ ರಾಮ ಮಂದಿರ, ವಕ್ಫ್ ವಿಚಾರ ನೆನಪಿಗೆ ಬರುತ್ತದೆಯೋ, ಹಾಗೇ ಮಹಾರಾಷ್ಟ್ರ ನಾಯಕರಿಗೆ ಗಡಿ ವಿವಾದ ನೆನಪಾಗುತ್ತದೆ. ಮತಗಳನ್ನು ಸೆಳೆಯಲು ಮಹಾರಾಷ್ಟ್ರ ನಾಯಕರು ಗಡಿ ವಿವಾದದ ಬಗ್ಗೆ ಮಾತನಾಡುತ್ತಾರೆ.

ADVERTISEMENT

ಎಂಇಎಸ್‌ನವರು ‌ಕರಾಳ‌ ದಿನ ಆಚರಿಸುತ್ತಾರೆ ಎಂದರೆ, ಗಡಿ ವಿವಾದ ಇದೆ ಎಂದು ಅರ್ಥವಲ್ಲ. ಅದೊಂದು ಸಣ್ಣ ವಿಚಾರ' ಎಂದರು.

ಮುಡಾ ಹಗರಣದಲ್ಲಿ ಸಿ.ಎಂ ಸಿದ್ದರಾಮಯ್ಯ ಅವರಿಗೆ ಲೋಕಾಯುಕ್ತದಿಂದ ನೋಟಿಸ್ ನೀಡಿದ ವಿಚಾರವಾಗಿ ಪ್ರತಿಕ್ರಿಯಿಸಿದ ಪಾಟೀಲ, 'ವಿಚಾರಣೆಗೆ ಬುಧವಾರ ಬೆಳಿಗ್ಗೆ 11ಕ್ಕೆ‌ ಹಾಜರಾಗುವುದಾಗಿ ಸಿದ್ದರಾಮಯ್ಯ ಹೇಳಿದ್ದಾರೆ' ಎಂದು ಹೇಳಿದರು.

ಮುಡಾ ಪ್ರಕರಣದ ತನಿಖೆ ಲೋಕಾಯುಕ್ತದ ಬದಲಿಗೆ, ಸಿಬಿಐಗೆ ಕೊಡುವಂತೆ ದೂರುದಾರರು ಆಗ್ರಹಿಸುತ್ತಿರುವ ವಿಚಾರವಾಗಿ ಮಾತನಾಡಿದ ಪಾಟೀಲ, 'ಈ ಪ್ರಕರಣದ ತನಿಖೆ ನಡೆಸುವಂತೆ ನ್ಯಾಯಾಲಯ ಆದೇಶಿಸಿದೆ.

ಅವರಿಗೆ ನ್ಯಾಯಾಲಯ ಹಾಗೂ ಲೋಕಾಯುಕ್ತದ ಮೇಲೆ ವಿಶ್ವಾಸ ಇಲ್ಲ ಎಂದರೆ ಹೇಗೆ?' ಎಂದ ಪ್ರಶ್ನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.