ADVERTISEMENT

ಮುಖ್ಯಮಂತ್ರಿ ವಿರುದ್ಧದ ಆಡಿಯೊ ವೈರಲ್‌, ಮೂವರು ಶಿಕ್ಷಕರ ಅಮಾನತಿಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2020, 12:28 IST
Last Updated 2 ಏಪ್ರಿಲ್ 2020, 12:28 IST
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ   
""

ಚಿಕ್ಕಮಗಳೂರು: ‘ಸಿಎಂ ಸಾಹೇಬರೇ ಸಾರ್ವಜನಿಕರಿಂದ ಹಣ ಕೇಳಿದ್ದೀರಿ, ಹಣದ ಲಿಸ್ಟ್‌ ಇಲ್ಲಿದೆ ನೋಡಿ...’ ಆಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆಂದು ಅನುದಾನಿತ ಶಾಲೆಗಳ ಮೂವರು ಶಿಕ್ಷಕರ ವಿರುದ್ಧ ಶಿಸ್ತುಕ್ರಮಕ್ಕೆ ಸೂಚನೆ ನೀಡಲಾಗಿದೆ.

ಕಡೂರು ತಾಲ್ಲೂಕಿನ ಗುರುಕೃಪ ಪ್ರೌಢಶಾಲೆಯ ಶಿಕ್ಷಕ ಧರಣೇಂದ್ರಮೂರ್ತಿ, ಬಾಸೂರಿನ ಚನ್ನಕೇಶವ ಪ್ರೌಢಶಾಲೆಯ ಶಿಕ್ಷಕ ಸಿ.ಎಚ್‌.ಕುಮಾರ್‌ ಮತ್ತು ತರೀಕೆರೆ ತಾಲ್ಲೂಕಿನ ಅಮೃತೇಶ್ವರ ಪ್ರೌಢಶಾಲೆಯ ಶಿಕ್ಷಕ ಎಂ.ರಂಗಣ್ಣ ಅವರನ್ನು ತಕ್ಷಣದಿಂದಲೇ ಅಮಾನತಿಲ್ಲಿಡುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಸಿ.ನಂಜಯ್ಯ ಅವರು ಶಾಲಾ ಆಡಳಿತ ಮಂಡಳಿಗಳಿಗೆ ಸೂಚನೆ ನೀಡಿದ್ದಾರೆ.

ಮುಖ್ಯಮಂತ್ರಿ ವಿರುದ್ಧದ ಆಡಿಯೊವನ್ನು ಈ ಮೂವರು ವಾಟ್ಸಾಪ್‌ ಗ್ರೂಪ್‌ನಲ್ಲಿ ಹಂಚಿಕೊಂಡಿದ್ದಾರೆ. ನಿಯಮ ಉಲ್ಲಂಘನೆ ಮಾಡಿದ್ದಾರೆ ಎಂದು ನಂಜಯ್ಯ ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.