ರಾಷ್ಟ್ರೀಯ ಪ್ರಾಣಿ ಎನಿಸಿಕೊಂಡಿರುವ ಹುಲಿಗಳ ಸಂರಕ್ಷಣೆಯಲ್ಲಿ ಭಾರತ ಮಹತ್ವದ ಮೈಲುಗಲ್ಲು ತಲುಪಿದೆ. ಹುಲಿಗಳ ಸಂರಕ್ಷಣೆಗಾಗಿ ರೂಪಿಸಲಾಗಿದ್ದ ಹುಲಿ ಯೋಜನೆಗೆ ಈಗ ಸುವರ್ಣ ಸಂಭ್ರಮ. ಈ ಸಂಭ್ರಮವನ್ನು ಪ್ರಧಾನಿ ನರೇಂದ್ರಮೋದಿ ನಮ್ಮ ರಾಜ್ಯದ ಬಂಡೀಪುರದಲ್ಲಿ ಭಾನುವಾರ ಆಚರಿಸಿದರು. ಸದ್ಯ, ದೇಶದಲ್ಲಿ 53 ಹುಲಿ ಸಂರಕ್ಷಿತ ಪ್ರದೇಶಗಳಿದ್ದು, ಒಟ್ಟು, 3,167 ಹುಲಿಗಳಿಗೆ ಭಾರತ ಆಶ್ರಯ ತಾಣವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು. ಮೋದಿಯವರು ಹುಲಿಗಣತಿ ವರದಿ ಮತ್ತು ಟಾಪ್ 10 ಹುಲಿ ಸಂರಕ್ಷಿತ ಪ್ರದೇಶಗಳ ವರದಿಯನ್ನೂ ಬಿಡುಗಡೆ ಮಾಡಿದ್ದು, ನಮ್ಮ ರಾಜ್ಯದ ಎಲ್ಲ ಹುಲಿ ಸಂರಕ್ಷಿತ ಪ್ರದೇಶಗಳೂ ಈ ಪಟ್ಟಿಯಲ್ಲಿರುವುದು ಸಂತಸದ ವಿಷಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.