ಬೆಂಗಳೂರು: ಮೈಸೂರಿನ 18ನೇ ಶತಮಾನದ ದೊರೆ ಟಿಪ್ಪು ಸುಲ್ತಾನ್ ತನ್ನ ಮಲಗುವ ಕೋಣೆಯಲ್ಲಿ ಇರಿಸಿಕೊಂಡಿದ್ದ ಖಡ್ಗವೊಂದು ಲಂಡನ್‌ನಲ್ಲಿ ₹143 ಕೋಟಿಗೆ ಹರಾಜಾಗಿದೆ ಎಂದು ಹರಾಜು ಸಂಸ್ಥೆ ಬೋನ್‌ಹ್ಯಾಮ್ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.
ಉದ್ಯಮಿ ವಿಜಯ್ ಮಲ್ಯ ವಶದಲ್ಲಿದ್ದ ಖಡ್ಗವನ್ನು ಲಂಡನ್‌ನಲ್ಲಿ ಇತ್ತೀಚೆಗೆ ಹರಾಜು ಮಾಡಲಾಗಿದ್ದು, ವ್ಯಕ್ತಿಯೊಬ್ಬರು ₹143 ಕೋಟಿಗೆ ಖರೀದಿಸಿದ್ದಾರೆ.
ಬ್ರಿಟಿಷ್ ರಾಜಮನೆತನದ ವಸ್ತುಸಂಗ್ರಹಾಲಯದಲ್ಲಿದ್ದ ಖಡ್ಗವನ್ನು ಮಲ್ಯ ಅವರು ₹1.57 ಕೋಟಿಗೆ 2004ರಲ್ಲಿ ಖರೀದಿಸಿದ್ದರು. ಮಲ್ಯ ಅವರು ಇತ್ತೀಚೆಗೆ ಕೋರ್ಟ್‌ಗೆ ಹಾಜರಾದಾಗ ‘ಖಡ್ಗ ಎಲ್ಲಿದೆಯೋ ಗೊತ್ತಿಲ್ಲ’ ಎಂದು ಹೇಳಿದ್ದರು. ಅದೇ ಖಡ್ಗ ಈಗ ಮತ್ತೊಮ್ಮೆ ಮಾರಾಟವಾಗಿದೆ.
ಖಡ್ಗ ಮಾರಿದವರು ಮತ್ತು ತೆಗೆದುಕೊಂಡವರ ಹೆಸರನ್ನು ಪ್ರಕಟಿಸಲು ಸಾಧ್ಯವಿಲ್ಲ. ಹೆಸರು ಬಹಿರಂಗವಾದರೆ ಗೋಪ್ಯತೆಯ ಉಲ್ಲಂಘನೆಯಾಗುತ್ತದೆ ಮತ್ತು ಸುರಕ್ಷತೆಯ ಸಮಸ್ಯೆಯೂ ಆಗುತ್ತದೆ ಎಂದು ಬೋನ್‌ಹ್ಯಾಮ್ ಹೇಳಿದೆ.
1799ರಲ್ಲಿ ನಡೆದ 4ನೇ ಆಂಗ್ಲೋ-ಮೈಸೂರು ಯುದ್ಧದಲ್ಲಿ ಟಿಪ್ಪು ಸುಲ್ತಾನ್ ಮರಣ ನಂತರ ಈ ಖಡ್ಗವನ್ನು ಅರಮನೆಯ ಖಾಸಗಿ ಕೋಣೆಯಿಂದ ವಶಪಡಿಸಿಕೊಳ್ಳಲಾಗಿತ್ತು. ಬಳಿಕ ಅದನ್ನು ಬ್ರಿಟಿಷ್ ಸೇನೆ ಮೇಜರ್ ಜನರಲ್ ಡೇವಿಡ್ ಬೇರ್ಡೆಗೆ ನೀಡಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.