ಬೆಳಗಾವಿ: ಬಳ್ಳಾರಿಯ ಮುಂಡರಗಿ ಗ್ರಾಮದ ವ್ಯಾಪ್ತಿಯಲ್ಲಿರುವ ಕಾರ್ಖಾನೆಗಳು ರಾತ್ರಿ 8 ಗಂಟೆಯ ಬಳಿಕ ವಿಷಯುಕ್ತ ಹೊಗೆ ಹೊರ ಸೂಸುತ್ತಿದ್ದು, ಮನೆಗಳಲ್ಲಿ ಜನ ಮಲಗಲು ಸಾಧ್ಯವಾಗುತ್ತಿಲ್ಲ. ತುಂಬಾ ಸಮಸ್ಯೆ ಆಗಿದೆ ಎಂದು ಬಿಜೆಪಿಯ
ಜಿ. ಸೋಮಶೇಖರ ರೆಡ್ಡಿ ವಿಧಾನಸಭೆಯ ಗಮನ ಸೆಳೆದರು.
ಪ್ರಶ್ನೋತ್ತರ ಅವಧಿಯಲ್ಲಿ ವಿಷಯ ಪ್ರಸ್ತಾಪಿಸಿದ ರೆಡ್ಡಿ, ಈ ಭಾಗದಲ್ಲಿ ಹೊಸ ವಸತಿ ಪ್ರದೇಶಗಳು ಬರುತ್ತಿದ್ದು, ಈ ಉದ್ಯಮಗಳನ್ನು ಜನ ವಸತಿ ಪ್ರದೇಶದಿಂದ ಹೊರಗೆ ಸಾಗಿಸಬೇಕು ಎಂದು ಆಗ್ರಹಿಸಿದರು. ಇದಕ್ಕೆಪ್ರತಿಕ್ರಿಯಿಸಿದ ಕೈಗಾರಿಕಾ ಸಚಿವ ಸಚಿವ ಮುರುಗೇಶ ನಿರಾಣಿ, ಈ ಗ್ರಾಮದ ಸಮಸ್ಯೆ ಗಮನಕ್ಕೆ ಬಂದಿದೆ. ಈಗಾಗಲೇ ಆರು ಕಾರ್ಖಾನೆಗಳಿಗೆ ನೋಟಿಸ್ ನೀಡಲಾಗಿದೆ. ಅಲ್ಲದೇ ಸಮೀಪದಲ್ಲಿರುವ ವೇಣಿ ವೀರಾಪುರದಲ್ಲಿ 650 ಎಕರೆ ಜಮೀನು ಸ್ವಾಧೀನಪಡಿಸಿಕೊಂಡಿದ್ದು, ಅಲ್ಲಿ ವರ್ಗಾವಣೆ ಆಗುವವರಿಗೆ ಅವಕಾಶ ಕೊಡಲಾಗುವುದು. ಇಲ್ಲವೇ ಮಾಲಿನ್ಯ ತಡೆಗಟ್ಟುವ ಘಟಕಗಳನ್ನು ಅಳವಡಿಸಿಕೊಳ್ಳಬೇಕು. ಇವರೆರಡೂ ಮಾಡದಿದ್ದರೆ ಮುಚ್ಚಿಸಲಾಗುವುದು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.